ಕತರ್ ಯಾತ್ರಿಕರಿಗಾಗಿ ಆನ್‌ಲೈನ್ ಹಜ್ ನೋಂದಣಿ

Update: 2018-07-17 17:56 GMT

ಜಿದ್ದಾ, ಜು. 17: ಹಜ್ ಯಾತ್ರೆ ಕೈಗೊಳ್ಳಬಯಸುವ ಕತರ್ ಪ್ರಜೆಗಳಿಗೆ ಸೌದಿ ಅರೇಬಿಯ ಆನ್‌ಲೈನ್ ಮೂಲಕ ಹೆಸರು ನೋಂದಾಯಿಸುವ ಅವಕಾಶವನ್ನು ಒದಗಿಸಿದೆ.

ಹಜ್ ನಿರ್ವಹಿಸಬಯಸುವ ಕತರ್ ನಾಗರಿಕರು ಅಥವಾ ಕತರ್‌ನ ವಿದೇಶಿ ನಿವಾಸಿಗಳಿಗಾಗಿ ಸೌದಿ ಹಜ್ ಮತ್ತು ಉಮ್ರಾ ಸಚಿವಾಲಯ ಹಜ್ ನೋಂದಣಿ ಲಿಂಕ್ ತೆರದಿದೆ.

ಕತರ್ ಯಾತ್ರಿಕರಿಗಾಗಿ ವ್ಯವಸ್ಥೆಗಳನ್ನು ಅಂತಿಮಗೊಳಿಸಲು ಸೌದಿ ಅರೇಬಿಯದ ಅಧಿಕಾರಿಗಳಿಗೆ ಕತರ್‌ನ ದತ್ತಿ ಸಚಿವಾಲಯದಿಂದ ಯಾವುದೇ ಸಹಕಾರ ಸಿಗದ ಹಿನ್ನೆಲೆಯಲ್ಲಿ, ಸಚಿವಾಲಯವು ಇಲೆಕ್ಟ್ರಾನಿಕ್ ಲಿಂಕನ್ನು ತೆರೆಯಿತು ಎಂದು ಸೌದಿಯ ಅಧಿಕೃತ ಸುದ್ದಿ ಸಂಸ್ಥೆ ಸೌದಿ ಪ್ರೆಸ್ ಏಜನ್ಸಿ (ಎಸ್‌ಪಿಎ)ಯಲ್ಲಿ ಪ್ರಕಟಗೊಂಡ ಹೇಳಿಕೆಯೊಂದು ತಿಳಿಸಿದೆ.

‘‘ಈ ವರ್ಷ ಹಜ್ ಯಾತ್ರೆ ಕೈಗೊಳ್ಳಲು ಬಯಸುವ ಕತರ್ ಯಾತ್ರಿಕರ ಸೌಲಭ್ಯಗಳು ಮತ್ತು ಅಗತ್ಯಗಳನ್ನು ಸೌದಿ ಅರೇಬಿಯದ ಸಂಬಂಧಪಟ್ಟ ಇಲಾಖೆಗಳು ಪೂರೈಸಲಿವೆ’’ ಎಂದು ಹಜ್ ಮತ್ತು ಉಮ್ರಾ ಸಚಿವಾಲಯ ಹೇಳಿಕೆಯೊಂದರಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News