ಕರ್ವಾಲೋ ಕಾದಂಬರಿಯ ಜರ್ಮನ್‌ಗೆ ಅನುವಾದ ಪುಸ್ತಕ ಜು.20 ರಂದು ಬಿಡುಗಡೆ

Update: 2018-07-18 16:06 GMT

ಬೆಂಗಳೂರು, ಜು. 18: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಪೂರ್ಣಚಂದ್ರ ತೇಜಸ್ವಿಯವರ ಡಾ.ಬಿ.ಎ.ವಿವೇಕ ರೈ ಹಾಗೂ ಕತ್ರೀನ್ ಬೈಂದರ್ ಅನುವಾದಿಸಿರುವ ಕರ್ವಾಲೋ ಕಾದಂಬರಿಯ ಜರ್ಮನ್ ಅನುವಾದದ ಪುಸ್ತಕ ಬಿಡುಗಡೆ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ.

ಜು.20ರ ಶುಕ್ರವಾರ ಬೆಳಗ್ಗೆ 10.30ಕ್ಕೆ ನಗರದ ಜೆ.ಸಿ.ರಸ್ತೆಯಲ್ಲಿನ ಕನ್ನಡ ಭವನದ ನಯನ ಸಭಾಂಗಣದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು ಲೇಖಕಿ ರಾಜೇಶ್ವರಿ ತೇಜಸ್ವಿ ಕೃತಿ ಬಿಡುಗಡೆ ಮಾಡಲಿದ್ದಾರೆ. ಸಮಾರಂಭದಲ್ಲಿ ಕೃತಿಯ ಅನುವಾದಕರು ಡಾ.ಬಿ.ಎ.ವಿವೇಕ ರೈ, ಕೃತಿಯ ಅನುವಾದಕ ಡಾ.ಕತ್ರೀನ್ ಬೈಂದರ್ ಹಾಗೂ ಬೆಂಗಳೂರಿನ ಮ್ಯಾಕ್ಸ್ ಮುಲ್ಲರ್ ಭವನ ನಿರ್ದೇಶಕ ಡಾ.ಕ್ಲಾಸ ಹೇಮಿಸ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ವಿಧಾನ ಪರಿಷತ್‌ನ ಮಾಜಿ ಸಭಾಪತಿ ಹಾಗೂ ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನ ಅಧ್ಯಕ್ಷ ಡಾ.ಬಿ.ಎಲ್.ಶಂಕರ್ ಅವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News