ಸರೋವರದ ಆಳದಲ್ಲಿ ವಸ್ತು ಸಂಗ್ರಹಾಲಯಕ್ಕೆ ಸಿದ್ಧತೆ

Update: 2018-07-18 18:33 GMT

ಬೋಲಿವಿಯಾ ತನ್ನ ಪವಿತ್ರ ಟಿಟಿಕಾಕಾ ಸರೋವರದ ಅಡಿಯಲ್ಲಿ ವಸ್ತು ಸಂಗ್ರಹಾಲಯ ನಿರ್ಮಿಸಲು ಸಿದ್ಧತೆ ನಡೆಸಿದೆ.

ಈ ಸರೋವರದ ತಳದಲ್ಲಿ ವೌಲ್ಯಾತೀತ ಸಾವಿರಾರು ಕಲಾಕೃತಿಗಳು ಪತ್ತೆಯಾದ ಬಳಿಕ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಇದು ಪ್ರವಾಸಿ ಸಂಕೀರ್ಣ ಹಾಗೂ ಪುರಾತತ್ವ, ಭೌಗೋಳಿಕ ಹಾಗೂ ಜೈವಿಕ ಸಂಶೋಧನಾ ಕೇಂದ್ರವೂ ಆಗಿರಲಿದೆ. ಆದುದರಿಂದ ಇದು ಜಗತ್ತಿನ ಏಕೈಕ ವಸ್ತು ಸಂಗ್ರಹಾಲಯವಾಗಲಿದೆ ಎಂದು ಸಂಸ್ಕೃತಿ ಸಚಿವ ವಿಲ್ಮಾ ಅಲನೋಕಾ ಹೇಳಿದ್ದಾರೆ.
ಈ ವಸ್ತು ಸಂಗ್ರಹಾಲಯ ನಿರ್ಮಿಸಲು 10 ದಶಲಕ್ಷ ಡಾಲರ್ ವೆಚ್ಚವಾಗಲಿದೆ. ಬೆಲ್ಜಿಯಂ ಅಭಿವೃದ್ಧಿ ಸಂಸ್ಥೆ ಎನಾಬೆಲ್ ಸಹಭಾಗಿತ್ವದೊಂದಿಗೆ ಇದರ ಕಾಮಗಾರಿ ನಡೆಯಲಿದೆ. ಈ ಯೋಜನೆಗೆ ಬೆಲ್ಜಿಯಂ ಹಾಗೂ ಯುನೆಸ್ಕೊ 2 ಶಲಕ್ಷ ಡಾಲರ್ ಕೊಡುಗೆ ನೀಡಲಿದೆ.
ಟಿಟಿಕಾಕಾ ಸ್ಥಳೀಯ ಜನರ ಹೃದಯದಲ್ಲಿ ಪ್ರಮುಖ ಸ್ಥಾನ ಪಡೆದುಕೊಂಡಿದೆ. ಸೂರ್ಯ ದೇವರ ಪುತ್ರನಾದ ಮಾಂಕೋ ಕೆಪಾಕ್ ಹಾಗೂ ಆತನ ಮಡದಿ ಮಾಮಾ ಒಕ್ಲೊ ಈ ಸರೋವರದ ನೀರಿನಿಂದ ಉದ್ಭವಿಸಿದರು ಎಂಬ ಐತಿಹ್ಯವಿದೆ.
ಇಂಕಾ ಪುರಾಣದ ಪ್ರಮುಖ ಪಾತ್ರವಾದ ಮಾಂಕೊ ಕೆಪಾಕ್ ಕುಸ್ಕೊದ ಪೆರುವಿಯನ್ ನಗರವನ್ನು ಸ್ಥಾಪಿಸಿದ ಎಂದು ನಂಬಲಾಗಿದೆ. ಪೆರುವಿಯನ್ 13ರಿಂದ 16ನೇ ಶತಮಾದ ವರೆಗೆ ಇಂಕಾ ಸಾಮ್ರಾಜ್ಯದ ರಾಜಧಾನಿಯಾಗಿತ್ತು.

 

Writer - *ವಿಸ್ಮಯ

contributor

Editor - *ವಿಸ್ಮಯ

contributor

Similar News