ಮೊದಲ ಪಂದ್ಯದಲ್ಲಿ ಅರ್ಜುನ್ ತೆಂಡುಲ್ಕರ್ ಶೂನ್ಯಕ್ಕೆ ಔಟ್ !

Update: 2018-07-19 10:29 GMT

ಕೊಲಂಬೊ, ಜು.19: ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಪುತ್ರ ಅರ್ಜುನ್ ತೆಂಡುಲ್ಕರ್ ಶ್ರೀಲಂಕಾ ಅಂಡರ್ 19 ತಂಡದ ವಿರುದ್ಧದ ತನ್ನ ಚೊಚ್ಚಲ ಯೂತ್ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ ನಲ್ಲಿ ಗುರುವಾರ  ಶೂನ್ಯಕ್ಕೆ ಔಟಾಗಿದ್ದಾರೆ.

 ಭಾರತ ಅಂಡರ್-19 ತಂಡದಲ್ಲಿ ಸ್ಥಾನ ಪಡೆದಿರುವ ಅರ್ಜುನ್ ಮಂಗಳವಾರ ಮೊದಲ ವಿಕೆಟ್ ಪಡೆದಿದ್ದರು. ಲಂಕಾದ ಆರಂಭಿಕ ದಾಂಡಿಗ ಕಮಿಲ್ ಮಿಶಾರಾ (9)ವಿಕೆಟ್ ಉರುಳಿಸಿ  ಸಂಭ್ರಮಿಸಿದ್ದರು.

 ತನ್ನ ಎರಡನೇ ಓವರ್‌ನ ಕೊನೆಯ ಎಸೆತದಲ್ಲಿ ವಿಕೆಟ್ ಪಡೆದು ಸಂಭ್ರಮಿಸಿದ್ದ ಅರ್ಜುನ್ ತೆಂಡುಲ್ಕರ್ ಬ್ಯಾಟಿಂಗ್ನಲ್ಲಿ ವಿಫಲರಾಗಿದ್ದಾರೆ. 19ರ ಹರೆಯದ ಅರ್ಜುನ್ ತೆಂಡುಲ್ಕರ್ ಮೊದಲ ಇನಿಂಗ್ಸ್‌ನಲ್ಲಿ 11 ಎಸೆತಗಳನ್ನು ಎದುರಿಸಿದ್ದರೂ ಖಾತೆ ತೆರೆಯದೆ ನಿರ್ಗಮಿಸಿದರು. ದುಲ್ಶಾನ್ ಎಸೆತದಲ್ಲಿ ಅರ್ಜುನ್ ಅವರು ಶಾರ್ಟ್ ಲೆಗ್‌ನಲ್ಲಿ ಕ್ಷೇತ್ರ ರಕ್ಷಣೆಯಲಿದ್ದ ಪಸಿಂದುಗೆ ಕ್ಯಾಚ್ ನೀಡಿದರು.

ಅರ್ಜುನ್ ತೆಂಡುಲ್ಕರ್ ಖಾತೆ ತೆರೆಯದೆ ನಿರ್ಗಮಿಸಿರುವುದು ತನ್ನ ತಂದೆ ಹಿಂದೆ ಮೊದಲ ಟೆಸ್ಟ್‌ನಲ್ಲಿ ಆಡಿರುವ ಆಟವನ್ನು ನೆನಪಿಸುವಂತೆ ಮಾಡಿದರು. ಸಚಿನ್ ತೆಂಡುಲ್ಕರ್ 1989, ಡಿ.19ರಂದು ಪಾಕಿಸ್ತಾನ ವಿರುದ್ಧದ ಮೊದಲ ಏಕದಿನ ಅಂತರ್‌ರಾಷ್ಟ್ರೀಯ ಪಂದ್ಯದಲ್ಲಿ ವಕಾರ್ ಯೂನಿಸ್ ಎಸೆತದಲ್ಲಿ ಔಟಾಗುವುದರ ಮೂಲಕ ಖಾತೆ ತೆರೆಯದೆ ನಿರ್ಗಮಿಸಿದ್ದರು. ಇದೀಗ ತಂದೆಯ ಹಾದಿಯನ್ನೇ ಮಗ ಅನುಸರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News