×
Ad

ಶಿರೂರು ಶ್ರೀಗಳ ಸಾವು ಅಸಹಜವಾಗಿದ್ದರೆ ತನಿಖೆ: ಸಿ.ಎಂ ಕುಮಾರಸ್ವಾಮಿ

Update: 2018-07-19 18:00 IST

ಬೆಂಗಳೂರು, ಜು. 19: ಉಡುಪಿಯ ಶಿರೂರು ಶ್ರೀ ಲಕ್ಷ್ಮೀವರ ತೀರ್ಥ ಸ್ವಾಮೀಜಿ ಅವರ ಸಾವಿನ ಬಗ್ಗೆ ಅನುಮಾನ ವ್ಯಕ್ತವಾದಲ್ಲಿ ಅನಿವಾರ್ಯವಾಗಿ ತನಿಖೆಗೆ ಆದೇಶಿಸಬೇಕಾಗುತ್ತದೆ ಎಂದು ಸಿಎಂ ಕುಮಾರಸ್ವಾಮಿ ಇಂದಿಲ್ಲಿ ಸ್ಪಷ್ಟಪಡಿಸಿದ್ದಾರೆ.

ಗುರುವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಶಿರೂರು ಶ್ರೀಗಳ ಅಗಲಿಕೆಗೆ ಸಂತಾಪ ವ್ಯಕ್ತಪಡಿಸುವೆ. ಶ್ರೀಗಳದ್ದು ಸಂಶಯಾಸ್ಪದ ಸಾವು ಎಂದು ಅನುಮಾನ ಬಂದಿಲ್ಲ. ಒಂದು ವೇಳೆ ಅನುಮಾನ ಬಂದರೆ ಖಂಡಿತ ತನಿಖೆ ಮಾಡಲಾಗುವುದು ಎಂದು ಹೇಳಿದರು.

ದೂರು ನೀಡಿದರೂ ಪರಿಶೀಲನೆ: ಶಿರೂರು ಶ್ರೀಗಳ ಸಾವು ಅಸಹಜವೆಂದು ದೂರು ನೀಡಿದರೆ ತನಿಖೆ ಮಾಡಿಸಲಾಗುವುದು. ಶ್ರೀಗಳ ಸಾವಿನ ಬಗ್ಗೆ ಕೆಲವರು ಸಂಶಯ ವ್ಯಕ್ತಪಡಿಸುತ್ತಿರುವುದು ನನ್ನ ಗಮನಕ್ಕೂ ಬಂದಿದೆ. ವಿಷ ಪ್ರಾಶನ ಆಗಿದೆ ಎಂದೂ ಕೆಲವರು ಹೇಳುತ್ತಿದ್ದಾರೆ. ಈ ಬಗ್ಗೆ ಅಗತ್ಯ ಬಿದ್ದರೆ ಖಂಡಿತ ತನಿಖೆ ಮಾಡಿಸಲಾಗುವುದು ಎಂದು ಡಿಸಿಎಂ ಡಾ.ಜಿ.ಪರಮೇಶ್ವರ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News