ಗಾಂಜಾ ಮಾರಾಟ: ನಾಲ್ವರ ಬಂಧನ, 2.3 ಕೆಜಿ ಗಾಂಜಾ ವಶ
Update: 2018-07-19 19:06 IST
ಬೆಂಗಳೂರು, ಜು.19: ಮಾದಕ ವಸ್ತು ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ನಾಲ್ವರನ್ನು ಬಂಧಿಸಿ, 2.3 ಕೆಜಿ ಗಾಂಜಾ, 2 ಮೊಬೈಲ್ ವಶಕ್ಕೆ ಪಡೆಯುವಲ್ಲಿ ಇಲ್ಲಿನ ಸುಬ್ರಮಣ್ಯಪುರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ರಾಮನಗರದ ಇಲ್ಯಾಸ್ ಪಾಷಾ, ಇರ್ಪಾನ್ ಪಾಷಾ, ಕೆಂಗೇರಿಯ ಬಾಬಾಸಾಬ್ ಪಾಳ್ಯದ ಕಬೀರ್, ಆರ್.ಕೆ ಬಾಬು ಬಂಧಿತ ಆರೋಪಿಗಳೆಂದು ಪೊಲೀಸರು ತಿಳಿಸಿದ್ದಾರೆ.
ಉತ್ತರಹಳ್ಳಿಯ ಗಣೇಶ್ ರಿಯಲ್ ಎಸ್ಟೇಟ್ ಹತ್ತಿರದ ರಸ್ತೆಯಲ್ಲಿ ಆರೋಪಿಗಳು ಚೀಲದಲ್ಲಿ ಮಾದಕ ವಸ್ತು ಗಾಂಜಾವನ್ನಿಟ್ಟುಕೊಂಡಿರುವ ಬಗ್ಗೆ ಮಾಹಿತಿ ಸಂಗ್ರಹಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.