×
Ad

ನೂತನ ಶಾಸಕರ ಸೂಟ್‌ಕೇಸ್ ಖರೀದಿಯಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ: ವಿ.ಸಭೆ ಕಾರ್ಯದರ್ಶಿ ಎಸ್.ಮೂರ್ತಿ

Update: 2018-07-19 19:55 IST

ಬೆಂಗಳೂರು, ಜು. 19: ‘ನೂತನ ಶಾಸಕರಿಗೆ ವಿತರಿಸುವ ಸೂಟ್‌ಕೇಸ್ ಖರೀದಿಯಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ. ಈ ಸಂಬಂಧ ಮಾಧ್ಯಮಗಳ ವರದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ’ ಎಂದು ವಿಧಾನಸಭೆ ಕಾರ್ಯದರ್ಶಿ ಎಸ್.ಮೂರ್ತಿ ಸ್ಪಷ್ಟಣೆ ನೀಡಿದ್ದಾರೆ.

ಗುರುವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಹೊಸದಾಗಿ ಆಯ್ಕೆಯಾಗಿರುವ ಶಾಸಕರಿಗೆ ಸಂಪ್ರದಾಯದಂತೆ ಅಗತ್ಯ ದಾಖಲೆ, ಸೂಚನಾ ಪತ್ರಗಳನ್ನು ಒಳಗೊಂಡ ಸೂಟ್‌ಕೇಸ್ ನೀಡಲು ಹೊಸ ಸೂಟ್‌ಕೇಸ್ ತರಿಸಲಾಗಿತ್ತು. ಕಂಪೆನಿ ಸೂಟ್‌ಕೇಸ್ ಪೂರೈಸಿದ್ದು, ನಾವು ಯಾವುದೇ ಸೂಟ್‌ಕೇಸ್ ಖರೀದಿ ಮಾಡಿಲ್ಲ. ಸೂಟ್‌ಕೇಸ್‌ಗೆ ಯಾವುದೇ ಮೊತ್ತವನ್ನು ನಾವು ಪಾವತಿಸಿಲ್ಲ. ಇಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ. ಅಧಿವೇಶನದಲ್ಲಿ ಸೂಟ್‌ಕೇಸ್ ವಿತರಣೆ ಮಾಡಬೇಕಿತ್ತು. ಆದರೆ, ಸಮಯಾವಕಾಶ ಸಿಗಲಿಲ್ಲ. ವಿಧಾನಸಭೆ ಸ್ಪೀಕರ್ ಕೆ.ಆರ್.ರಮೇಶ್‌ಕುಮಾರ್ ಅಧಿವೇಶನದ ಬಳಿಕ ಸೂಟ್‌ಕೇಸ್ ನೀಡುವುದು ಬೇಡವೆಂದು ಹೇಳಿದ್ದಾರೆ. ಹೀಗಾಗಿ ಸೂಟ್‌ಕೇಟ್ ವಾಪಸ್ ಕಳುಹಿಸಲಾಗಿದೆ. ಆದರೆ, ಈ ಬಗ್ಗೆ ಮಾಧ್ಯಮಗಳಲ್ಲಿ ಬಂದ ವರದಿಗಳು ಸುಳ್ಳು ಎಂದು ನಿರಾಕರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News