ಯುವತಿಗೆ ಲೈಂಗಿಕ ದೌರ್ಜನ್ಯ: ಆರೋಪಿ ಬಂಧನ
ಬೆಂಗಳೂರು, ಜು.19: ಮನೆ ಬಾಡಿಗೆ ಕೊಡಿಸುವುದಾಗಿ ನಂಬಿಸಿ ಯುವತಿಗೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪದಡಿ ವ್ಯಕ್ತಿಯೊಬ್ಬನನ್ನು ಇಲ್ಲಿನ ಆರ್‌ಆರ್‌ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ರಿಯಲ್ ಎಸ್ಟೇಟ್ ಉದ್ಯಮಿ ಓಬಳಪ್ಪ ಬಂಧಿತ ಆರೋಪಿ ಎಂದು ತಿಳಿದುಬಂದಿದೆ.
ಘಟನೆ ವಿವರ: ಯುವತಿ ಹಲವು ದಿನಗಳಿಂದ ಬಾಡಿಗೆ ಮನೆಯ ಹುಡುಕಾಟದಲ್ಲಿದ್ದಾಗ ಓಬಳಪ್ಪನ ಪರಿಚಯವಾಗಿತ್ತು. ಜು.15ರಂದು ಓಬಳಪ್ಪನನ್ನು ಆತನ ಕಚೇರಿಯಲ್ಲೇ ಭೇಟಿಯಾಗಿದ್ದರು. ಈ ವೇಳೆ ಬಾಡಿಗೆ ಮನೆ ಬಗ್ಗೆ ವಿಚಾರಿಸಿದಾಗ ಎರಡು ಮನೆಗಳನ್ನು ಓಬಳಪ್ಪ ತೋರಿಸಿದ್ದನು. ಯುವತಿಗೆ ಆ ಮನೆ ಇಷ್ಟವಾಗಲಿಲ್ಲ ಎಂದು ವಾಪಸ್ಸಾಗಿದ್ದರು. ಆದರೆ ಬುಧವಾರ ಪುನಃ ಕರೆ ಮಾಡಿದ ಆರೋಪಿ ಓಬಳಪ್ಪ, ಮನೆ ತೋರಿಸುವುದಾಗಿ ಹೇಳಿ ನಗರದ ಎಚ್.ವಿ.ಹಳ್ಳಿ ವೃತ್ತದ ಬಳಿ ಯುವತಿಯನ್ನು ಕರೆದು ಲಾಡ್ಜ್‌ಯೊಂದಕ್ಕೆ ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎನ್ನಲಾಗಿದೆ.
ಈ ಸಂಬಂಧ ಮೊಕದ್ದಮೆ ದಾಖಲಿಸಿಕೊಂಡಿರುವ ಆರ್.ಆರ್.ನಗರ ಠಾಣಾ ಪೊಲೀಸರು ತನಿಖೆ ಕೈಗೊಂಡಿದ್ದಾರೆ.