ಡಿಸಿಎಂ ಪರಮೇಶ್ವರ್ ರನ್ನು ಭೇಟಿ ಮಾಡಿ ಸಲಹೆ ನೀಡಿದ ಕಿರಣ್ ಮಜುಂದಾರ್ ಷಾ

Update: 2018-07-19 15:01 GMT

ಬೆಂಗಳೂರು, ಜು.19: ಬೆಂಗಳೂರು ನಗರವನ್ನು ಮೇಲ್ದರ್ಜೆಗೇರಿಸಲು ಹಲವು ಸಲಹೆಗಳನ್ನು ಬಿ-ಪ್ಯಾಕ್ ತಂಡದ ಸದಸ್ಯೆ ಹಾಗೂ ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಷಾ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರಿಗೆ ನೀಡಿದರು.

ಗುರುವಾರ ವಿಧಾನಸೌಧದಲ್ಲಿರುವ ಪರಮೇಶ್ವರ್ ಕಚೇರಿಯಲ್ಲಿ ಅವರನ್ನು ಭೇಟಿ ಮಾಡಿದ ಬಿ-ಪ್ಯಾಕ್ ತಂಡವು, ಬೆಂಗಳೂರು ನಗರದ ಸಂಚಾರ ದಟ್ಟಣೆ, ಕಸ ವಿಲೇವಾರಿ, ಅನಧಿಕೃತ ಕೇಬಲ್, ಸಾರಿಗೆ ವ್ಯವಸ್ಥೆಯಲ್ಲಿನ ಸಮಸ್ಯೆಗೆ ಪರಿಹಾರದ ಬಗ್ಗೆ ಚರ್ಚೆ ನಡೆಸಿತು.

ಪ್ರತಿ ಕಾರ್ಯಕ್ರಮಕ್ಕೂ ಒಂದು ಗಡುವು ನಿಗದಿಪಡಿಸಿದರೆ ಎಲ್ಲ ಯೋಜನೆಗಳು ಸಮಯಕ್ಕೆ ಸರಿಯಾಗಿ ನಡೆಯಲಿವೆ. ಈಗಿರುವ ವ್ಯವಸ್ಥೆಯಿಂದ ಜನರು ನಿತ್ಯ ಸಮಸ್ಯೆ ಎದುರಿಸುವಂತಾಗಿದ್ದು, ಈ ಸಮಸ್ಯೆ ನೀಗಿಸಲು ಕ್ರಮಕ್ಕೆ ಬಿ-ಪ್ಯಾಕ್ ತಂಡ ಮನವಿ ಮಾಡಿತು.

ಇದಕ್ಕೆ ಪ್ರತಿಕ್ರಿಯಿಸಿದ ಪರಮೇಶ್ವರ್, ರಸ್ತೆ ನಿರ್ಮಾಣ, ರಸ್ತೆ ಗುಂಡಿ ಮುಚ್ಚುವ ಕೆಲಸಗಳನ್ನು ಗಂಭೀರವಾಗಿ ಪರಿಗಣಿಸಿ ನಡೆಸಲಾಗುತ್ತಿದೆ. ಟೆಂಡರ್‌ಶ್ಯೂರ್ ಕಾರ್ಯಕ್ರಮ ಪ್ರಗತಿಯಲ್ಲಿದೆ. ನಿಮ್ಮ ಎಲ್ಲ ಸಲಹೆಯನ್ನು ಪರಿಶೀಲಿಸಿ, ಬೆಂಗಳೂರಿನ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News