ಲಾಕರ್‌ಗಳಲ್ಲಿ ಬಹುಕೋಟಿ ಸಂಪತ್ತು ಪತ್ತೆ ಪ್ರಕರಣ: ಉದ್ಯಮಿ ಇಡಿ ವಶಕ್ಕೆ, ತನಿಖೆ ಚುರುಕು

Update: 2018-07-22 14:24 GMT
ಉದ್ಯಮಿ ಅವಿನಾಶ್

ಬೆಂಗಳೂರು, ಜು.22: ಬೌರಿಂಗ್ ಇನ್‌ಸ್ಟಿಟ್ಯೂಟ್‌ನ ಲಾಕರ್‌ಗಳಲ್ಲಿ ದೊರೆತ ಬಹುಕೋಟಿ ಸಂಪತ್ತು ಪ್ರಕರಣ ಸಂಬಂಧ ಉದ್ಯಮಿ ಅವಿನಾಶ್ ಅಮರ್ ಲಾಲ್ ಎಂಬಾತನನ್ನು ಜಾರಿ ನಿರ್ದೇಶನಾಲಯ(ಇಡಿ) ವಶಕ್ಕೆ ಪಡೆದಿದೆ ಎಂದು ವರದಿಯಾಗಿದೆ.

ಸಂಪಗಿರಾಮನಗರ ನಿವಾಸಯೊಂದರಲ್ಲಿದ್ದ ಉದ್ಯಮಿ ಅವಿನಾಶ್‌ನನ್ನು ವಶಕ್ಕೆ ಪಡೆದಿರುವ ಜಾರಿ ನಿರ್ದೇಶನಾಲಯದ ಅಧಿಕಾರಿಗಳು, ಕೋಟ್ಯಂತರ ರೂ. ಮೌಲ್ಯದ ಆಸ್ತಿ ಪತ್ರಗಳು ಯಾರಿಗೆ ಸೇರಿದ್ದು, ಎಲ್ಲಿಂದ ಬಂತು, ಬಚ್ಚಿಟ್ಟಿದ್ದು ಯಾಕೆ ಎಂಬ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ. ಜತೆಗೆ ಈತನ ಬ್ಯಾಂಕ್ ಖಾತೆಗಳು ಹಾಗೂ ಆತನ ವ್ಯವಹಾರಗಳ ಬಗ್ಗೆಯೂ ಐಟಿ ಅಧಿಕಾರಿಗಳು ಮಾಹಿತಿ ಕಲೆ ಹಾಕಿದ್ದಾರೆ ಎನ್ನಲಾಗಿದೆ.

ಪ್ರಾಥಮಿಕ ವಿಚಾರಣೆ ನಡೆಸಿರುವ ಅಧಿಕಾರಿಗಳು ಅವಿನಾಶ್ ಅಮರ್‌ ಲಾಲ್ ವಿರುದ್ಧ ಅಕ್ರಮ ಆಸ್ತಿ ಗಳಿಕೆ ಪ್ರಕರಣ ದಾಖಲಿಸುವ ಸಾಧ್ಯತೆ ಇದೆ. ಜಾರಿ ನಿರ್ದೇಶನಾಲಯದ ಅಧಿಕಾರಿಗಳೂ ಕೂಡ ಹಣ, ಆಭರಣ ಹಾಗೂ ಆಸ್ತಿ ಪತ್ರ ಸಿಕ್ಕ ವಿಚಾರವಾಗಿ ಐಟಿ ಅಧಿಕಾರಿಗಳಿಂದ ಮಾಹಿತಿ ಪಡೆುಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಉದ್ಯಮಿ ಅವಿನಾಶ್ ಸದಸ್ಯತ್ವ ಹೊಂದಿರುವ ಇತರ ಕ್ಲಬ್‌ಗಳಲ್ಲಿ ಐಟಿ ಅಧಿಕಾರಿಗಳು ಪರಿಶೀಲನೆ ನಡೆಸಲು ಮುಂದಾಗಿದ್ದಾರೆ. ನಗರದ ಹಲವು ಪ್ರತಿಷ್ಠಿತ ಕ್ಲಬ್‌ಗಳಲ್ಲಿ ಅವಿನಾಶ್ ಸದಸ್ಯತ್ವ ಹೊಂದಿರುವ ಬಗ್ಗೆ ಐಟಿ ಅಧಿಕಾರಿಗಳು ಮಾಹಿತಿ ಸಂಗ್ರಹಿಸಿದ್ದು, ಅಲ್ಲಿಯೂ ಕೂಡ ಇದೇ ರೀತಿ ಹಣವನ್ನು ಬಚ್ಚಿಟ್ಟಿರಬಹುದು ಎನ್ನುವ ಶಂಕೆ ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News