ಬೆಂಗಳೂರು: ಮನೆ ಮುಂದೆ ನಿಲ್ಲಿಸಿದ್ದ ಬೈಕ್‌ಗೆ ಬೆಂಕಿ

Update: 2018-07-22 15:33 GMT

ಬೆಂಗಳೂರು, ಜು.22: ಮನೆ ಮುಂದೆ ನಿಲ್ಲಿಸಿದ್ದ ಬೈಕ್ ಭಾಗಶಃ ಸುಟ್ಟುಹೋಗಿರುವ ಘಟನೆ ಇಲ್ಲಿನ ಜೆಜೆನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಶನಿವಾರ ನಗರದ ಹಳೆಗುಡ್ಡದ ಹಳ್ಳಿಯಲ್ಲಿನ ಜನತಾ ಕಾಲೋನಿಯ ಶನಿಮಹಾತ್ಮ ದೇವಸ್ಥಾನದ ಬಳಿಯ ಮನೆಯೊಂದರ ಮುಂದೆ ನಿಲ್ಲಿಸಿದ್ದ ಬೈಕ್‌ಗೆ ಏಕಾಏಕಿ ಬೆಂಕಿ ತಗುಲಿದೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News