ಮಿಸ್ ದಿವಾ ಸೌಂದರ್ಯ ಸ್ಪರ್ಧೆಗೆ ಆಯ್ಕೆ

Update: 2018-07-22 18:20 GMT

ಬೆಂಗಳೂರು, ಜು.22: ಮುಂಬೈನಲ್ಲಿ ನಡೆಯಲಿರುವ ಮಿಸ್ ದಿವಾ ಸೌಂದರ್ಯ ಸ್ಪರ್ಧೆಗೆ ರಾಜ್ಯದ ಆರು ಹುಡುಗಿಯರು ವೈಲ್ಡ್ ಕಾರ್ಡ್ ಮೂಲಕ ಪ್ರವೇಶ ಪಡೆದಿದ್ದಾರೆ.

ಲೀನ್ಹಾ, ಮಾಧುರಿ, ನಿಖಿತಾ, ಪ್ರಗತಿ, ಮನೀಶ ಮತ್ತು ವೀನಸ್ ಮಲ್ಲಿಕ್ ಸೇರಿದಂತೆ ಒಟ್ಟು 17 ಮಂದಿ ಯುವತಿಯರು ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿದ್ದಾರೆ.

ಈ ಸಂಬಂಧ ಮಾಹಿತಿ ನೀಡಿದ ವಿಷ್ಣುಪ್ರಸಾದ್, ಫ್ಯಾಶನ್ ಲೋಕದಲ್ಲಿ ಸೆಂಟ್ರಲ್ ಬಹುಮುಖ್ಯ ಪಾತ್ರ ವಹಿಸುತ್ತದೆ. ಮಿಸ್ ದಿವಾಗೆ ನೇತೃತ್ವ ನೀಡಲು ಪಾಲುದಾರನಾಗಿರುವುದಕ್ಕೆ ಸಂತಸವಾಗುತ್ತದೆ. ಮುಂಬೈನಲ್ಲಿ ನಡೆಯಲಿರುವ ಅಂತಿಮ ಸ್ಪರ್ಧೆಯಲ್ಲಿ ಆರು ಜನರು ಭಾಗವಹಿಸಲಿದ್ದಾರೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News