ಪ್ರಾರ್ಥನೆ

Update: 2018-07-22 18:36 GMT
Editor : -ಮಗು

ಊರಿಗೊಬ್ಬ ಹೊಸ ಸ್ವಾಮೀಜಿ ಬಂದರು.
ಅವರು ಪ್ರಾರ್ಥಿಸಿದರೆ ಅದು ಈಡೇರುತ್ತದೆ ಎನ್ನುವುದು ಊರಿಡೀ ಹರಡಿತು.
ಊರಿನ ಜನರು ಸರದಿಯಲ್ಲಿ ನಿಲ್ಲ ತೊಡಗಿದರು.
ಒಬ್ಬ ಬಂದು ಸ್ವಾಮೀಜಿಯಲ್ಲಿ ಕೇಳಿಕೊಂಡ ‘‘ಸ್ವಾಮೀಜಿ ನನ್ನ ವ್ಯಾಪಾರ ದುಪ್ಪಟ್ಟಾಗಲು ಪ್ರಾರ್ಥಿಸಿ’’

ಸ್ವಾಮೀಜಿ ಕಣ್ಮುಚ್ಚಿ ಪ್ರಾರ್ಥಿಸಿ ಹೇಳಿದರು ‘‘ನಾಲ್ಕು ಪಟ್ಟು ಹೆಚ್ಚಾಗುತ್ತದೆ. ಹೋಗು’’ ಅವನು ಸಂತೋಷದಿಂದ ಹೊರಟ.
ಅವನ ಹಿಂದಿದ್ದ ಜನರು ಒಮ್ಮೆಲೆ ನಿರಾಶರಾದರು. ಅವರೆಲ್ಲ ಸ್ವಾಮೀಜಿಯ ಬಳಿ ಏನನ್ನ್ನೂ ಕೇಳಿಕೊಳ್ಳದೆ ಅಲ್ಲಿಂದ ಹೊರಡ ತೊಡಗಿದರು.
ಸ್ವಾಮೀಜಿಗೆ ಅಚ್ಚರಿ ‘‘ಯಾಕೆ...ಯಾಕೆ ಹೊರಡುತ್ತಿದ್ದೀರಿ....’’
ಒಬ್ಬ ಹೇಳಿದ ‘‘ಸ್ವಾಮೀಜಿ...ನೀವು ಈಗ ಒಬ್ಬ ವ್ಯಾಪಾರಿಯ ವ್ಯಾಪಾರ ನಾಲ್ಕು ಪಟ್ಟು ಹೆಚ್ಚಾಗಲಿ ಎಂದು ಪ್ರಾರ್ಥಿಸಿದರಲ್ಲ? ಅವನು ಶವಪೆಟ್ಟಿಗೆಗಳ ವ್ಯಾಪಾರಿ...’’

Writer - -ಮಗು

contributor

Editor - -ಮಗು

contributor

Similar News

ದಾಂಪತ್ಯ
ಶಾಂತಿ
ಬೆಳಕು
ಮಾನ್ಯತೆ!
ವ್ಯಾಪಾರ
ಆಕ್ಸಿಜನ್
ಝಲಕ್
ಸ್ವರ್ಗ
ಗೊಂದಲ!
ಪ್ರಾರ್ಥನೆ
ಆ ಚಿಂತಕ!
ಹರಾಜು !