ವಿಜಯಬ್ಯಾಂಕ್: 144 ಕೋಟಿ ರೂ. ನಿವ್ವಳ ಲಾಭ

Update: 2018-07-23 16:16 GMT

ಬೆಂಗಳೂರು, ಜು.23: ಪ್ರಸಕ್ತ ವರ್ಷದ ಆರ್ಥಿಕ ಸಾಲಿನ ಮೊದಲ ತ್ರೈ ಮಾಸಿಕದಲ್ಲಿ ವಿಜಯ ಬ್ಯಾಂಕ್ 144 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ ಎಂದು ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಆರ್.ಎ.ಶಂಕರ ನಾರಾಯಣನ್ ತಿಳಿಸಿದರು.

ಸೋಮವಾರ ಎಂಜಿ ರಸ್ತೆಯ ವಿಜಯಬ್ಯಾಂಕ್ ಪ್ರಧಾನ ಕಚೇರಿಯ ಸಭಾಂಗಣದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, 4ನೆ ತ್ರೈಮಾಸಿಕದಲ್ಲಿ 207 ಕೋಟಿ ರೂ. ಗಳಿಸಿತ್ತು. ಈ ಭಾರಿ 144 ಕೋಟಿ ರೂ. ನಿವ್ವಳ ಲಾಭವನ್ನು ಗಳಿಸಿದೆ ಎಂದು ಹೇಳಿದರು.

ನಿವ್ವಳ ಆದಾಯ ಬಡ್ಡಿಯಲ್ಲಿ 4ನೆ ತ್ರೈಮಾಸಿಕದಲ್ಲಿ ಶೇ.22.73 ರಷ್ಟಿತ್ತು. ಈ ಬಾರಿ ಶೇ.27.86 ರಷ್ಟು ಹೆಚ್ಚಿಸಿಕೊಂಡಿದ್ದು, 1,207 ಕೋಟಿ ರೂ. ಗಳಿಸಿದೆ. ಒಟ್ಟು ವಹಿವಾಟು 2,79,674 ಕೋಟಿ ರೂ. ನಡೆದಿದ್ದು, ಶೇ. 24.12ರಷ್ಟು ಹೆಚ್ಚಳವಾಗಿದೆ. ನಿವ್ವಳ ಹೂಡಿಕೆ 1,22,348 ಕೋಟಿ ನಡೆದಿದ್ದು, ಶೇ. 31.06 ಏರಿಕೆಯಾಗಿದೆ. ಒಟ್ಟು ಹೂಡಿಕೆ 1,57,326 ಕೋಟಿ ರೂ.ಯಾಗಿದ್ದು, ಶೇ.19.22ರಷ್ಟು ಹೆಚ್ಚಳವಾಗಿದೆ ಎಂದರು.

ನಿಮ್ ಪ್ರಮಾಣ ಶೇ. 3.10 ರಿಂದ ಶೇ. 3.12ಕ್ಕೆ ಹೆಚ್ಚಳವಾಗಿದೆ. ರಿಟೇಲ್ ಸಾಲ ಶೇ. 24.44ರಿಂದ ಶೇ. 25.44ಕ್ಕೆ ಏರಿಕೆಯಾಗಿದೆ. ಗೃಹಸಾಲದಲ್ಲಿ ಶೇ.30.50ರಿಂದ ಶೇ. 30.33ಕ್ಕೆ ಇಳಿಕೆಯಾಗಿದೆ. ಒಟ್ಟಾರೆ ಆದಾಯ ರಹಿತ ಸೊತ್ತಿನ ಪ್ರಮಾಣ ಶೇ. 5.24ರಿಂದ ಶೇ.4.10ಕ್ಕೆ ಇಳಿಕೆಯಾದ ಪರಿಣಾಮ ಪ್ರಸಕ್ತ ಆರ್ಥಿಕ ಸಾಲಿನ ಮೊದಲ ತ್ರೈಮಾಸಿಕದಲ್ಲಿ 144 ಕೋಟಿ ಲಾಭವಾಗಿದೆ. ಡಿಸೆಂಬರ್ ತಿಂಗಳ ವೇಳೆಗೆ ಶೇ. 4.00ಕ್ಕೆ ಇಳಿಸುವ ಗುರಿಯನ್ನು ಹೊಂದಿದ್ದೇವೆ. ಕಳೆದ ನಾಲ್ಕನೇ ತ್ರೈಮಾಸಿಕ ಸಾಲಿನ ವಹಿವಾಟಿಗೆ ಹೋಲಿಸಿದರೆ 63 ಕೋಟಿ ರೂ. ಲಾಭ ಇಳಿಕೆಯಾಗಿದೆ ಎಂದು ಅವರು ವಿವರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News