×
Ad

ಸುಝುಕಿ ಹೊಸ ಸ್ಕೂಟರ್ ಮಾರುಕಟ್ಟೆಗೆ

Update: 2018-07-23 22:06 IST

ಬೆಂಗಳೂರು, ಜು. 23: ದ್ವಿಚಕ್ರ ವಾಹನ ಪ್ರಿಯರಲ್ಲಿ ತೀವ್ರ ಕುತೂಹಲ ಮೂಡಿಸಿದ್ದ ಸುಝುಕಿ ಕಂಪೆನಿ ಹೊಸ ಪ್ರೀಮಿಯಂ ಸ್ಕೂಟರ್ ಬರ್ಗಮನ್ ಸ್ಟ್ರೀಟ್ 125 ಸಿಸಿ ಸ್ಕೂಟರ್ ಅನ್ನು ದಕ್ಷಿಣ ಭಾರತ ವಲಯ ವ್ಯವಸ್ಥಾಪಕ ಕೆ.ಎನ್.ವಿ.ಎಸ್. ಸುರೇಶ್ ಸೋಮವಾರ ಬೆಂಗಳೂರು ಮಾರುಕಟ್ಟೆಗೆ ಬಿಡುಗಡೆ ಮಾಡಿದರು.

ಈ ವೇಳೆ ಮಾತನಾಡಿದ ಸುರೇಶ್, ಸುಜುಕಿ ಮೋಟಾರ್ ಸೈಕಲ್ ಸಂಸ್ಥೆಯು ಬಿಡುಗಡೆ ಮಾಡಿರುವ ಬರ್ಗಮನ್ ಸ್ಟ್ರೀಟ್ ಸ್ಕೂಟರ್ ಮಾದರಿಯು ಪ್ರೀಮಿಯಂ ವೈಶಿಷ್ಟ್ಯತೆಗಳೊಂದಿಗೆ ಅತ್ಯುತ್ತಮ ಚಾಲನಾ ಸೌಲಭ್ಯಗಳನ್ನು ಹೊಂದಿದ್ದು, ಭಾರತದಲ್ಲಿ ಯುರೋಪಿಯನ್ ಶೈಲಿಯಲ್ಲಿ ಸಿದ್ದಗೊಂಡಿರುವ ಮೊದಲ ಸುಜುಕಿ ಸ್ಕೂಟರ್ ಇದಾಗಿದೆ ಎಂದು ವಿವರಿಸಿದರು.

ಗ್ರಾಹಕ ಸ್ನೇಹಿ ಸ್ಕೂಟರ್ ಇದಾಗಿರುವುದರಿಂದ ಮಾರುಕಟ್ಟೆಯಲ್ಲಿ ಈಗಾಗಲೇ ಹೆಚ್ಚು ಬೇಡಿಕೆ ಹೊಂದಿದ್ದು, ಗ್ರಾಹಕರ ಅನುಕೂಲಕ್ಕೆ ತಕ್ಕಂತೆ ಮೂರು ಬಣ್ಣಗಳಲ್ಲಿ ಲಭ್ಯವಿರುವ ಸುಜುಕಿ ಬರ್ಗಮನ್ ಸ್ಟ್ರೀಟ್ ಸ್ಕೂಟರ್ ಮೆಟಾಲಿಕ್ ಮ್ಯಾಟ್ ಫಿಬ್ರೊಯಿನ್, ಗ್ಲ್ಯಾಸ್ ಸ್ಪಾರ್ಕಲ್ ಬ್ಲ್ಯಾಕ್ ಮತ್ತು ಪರ್ಲ್ ಮಿರಾಜ್ ವೈಟ್ ಬಣ್ಣಗಳಲ್ಲಿ ಖರೀದಿಸಬಹುದು ಎಂದು ಹೇಳಿದರು.

ಈ ವೇಳೆ ಸುಜುಕಿ ಕಂಪೆನಿಯ ಪ್ರಾದೇಶಿಕ ಮಾರಾಟ ಮತ್ತು ಮಾರ್ಕೆಟಿಂಗ್ ಮ್ಯಾನೇಜರ್ ಸಂಜಯ್ ಕುರ್‌ಡೇಕರ್, ಪ್ರಾದೇಶಿಕ ಸೇವಾ ವ್ಯವಸ್ಥಾಪಕ ಕೃಷ್ಣ ಕುಮಾರ್ ಮತ್ತು ಸುಜುಕಿ ಕಂಪೆನಿಯ ಚಂದ್ರಶೇಖರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News