ಅಂಕಪಟ್ಟಿಗಳು ಹೀಗಿರಲಿ

Update: 2018-07-23 18:31 GMT

ಮಾನ್ಯರೇ,

ಇತ್ತೀಚೆಗೆ ನಕಲಿ ಅಂಕಪಟ್ಟಿ ಕುರಿತಂತೆ ಅಕ್ರಮ ಬೆಳಕಿಗೆ ಬಂದಿದೆ. ಕರ್ನಾಟಕ ಮುಕ್ತ ವಿ.ವಿ.ಯ ಅಂಕಪಟ್ಟಿಯನ್ನು ಅನಧಿಕೃತವಾಗಿ ಖಾಸಗಿ ಸಂಸ್ಥೆಯೊಂದು ನೀಡಿದ್ದಾಗಿ ಮಾಧ್ಯಮಗಳಲ್ಲಿ ವರದಿಯಾಗಿವೆ.

ಈಗ ಬದಲಾದ ಕಾಲ. ಅದಕ್ಕೆ ತಕ್ಕಂತೆ ವಿ.ವಿ.ಗಳೂ ಗಣಕೀಕರಣವನ್ನು ಅಳವಡಿಸಿಕೊಳ್ಳಬೇಕಾಗಿದೆ. ಫಲಿತಾಂಶಗಳ ಎಲ್ಲಾ ಅಂಕಪಟ್ಟಿಗಳನ್ನೂ ಗಣಕೀಕೃತಗೊಳಿಸಿ ಡಾಟಾಬೇಸಿನಲ್ಲಿ ಇರಿಸಿಬಿಡಬೇಕು. ವಿದ್ಯಾರ್ಥಿಗೆ ಒಂದು ಅಧಿಕೃತ ಅಂಕಪಟ್ಟಿ/ಪ್ರಮಾಣ-ಪತ್ರ ನೀಡಲು ಅಡ್ಡಿಯಿಲ್ಲ. ಆದರೆ, ಆತ/ಆಕೆ ಮುಂದಿನ ಓದು ಅಥವಾ ಉದ್ಯೋಗಕ್ಕೆ ಈ ಪ್ರಮಾಣಪತ್ರವನ್ನು ಒಪ್ಪಿಸಿದಾಗ, ಉದ್ಯೋಗದಾತರು ವಿ.ವಿ.ನಿಲಯದ ಮೂಲ ಡಾಟಾಬೇಸನ್ನು ಕೋರಬೇಕು. ಆ ಮುಖೇನ ಸರಿಯಾದ ಅಂಕಪಟ್ಟಿಯನ್ನು ಅವರು ಪಡೆಬಹುದು. ಡಾಟಾಬೇಸ್ ಹುಡುಕಿ ನೋಡಲು ಇಂತಿಷ್ಟು ಶುಲ್ಕ ಎಂದು ನಿಗದಿಪಡಿಸಿ, ಸಂಬಂಧಪಟ್ಟ ಸಂಸ್ಥೆಯು ಈ ಶುಲ್ಕವನ್ನು ಅಭ್ಯರ್ಥಿಯಿಂದಲೇ ಪಡೆಯಬಹುದು.

Similar News