ವಿರಾಟ್ ಕೊಹ್ಲಿಗೆ ನಂ.1ಕನಸು

Update: 2018-07-24 18:34 GMT

ಲಂಡನ್, ಜು.24: ಆತಿಥೇಯ ಇಂಗ್ಲೆಂಡ್ ವಿರುದ್ಧ ನಡೆಯಲಿರುವ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಉತ್ತಮ ಪ್ರದರ್ಶನದೊಂದಿಗೆ ಐಸಿಸಿ ಟೆಸ್ಟ್ ಬ್ಯಾಟ್ಸ್ ಮನ್‌ಗಳ ರ್ಯಾಂಕಿಂಗ್ ಪಟ್ಟಿಯಲ್ಲಿ ನಂ.1 ಸ್ಥಾನ ಪಡೆಯುವ ಕನಸು ಕಾಣುತ್ತಿದ್ದಾರೆ.

ರ್ಯಾಂಕಿಂಗ್‌ನಲ್ಲಿ ನಂ.1 ಸ್ಥಾನದಲ್ಲಿರುವ ಟೀಮ್ ಇಂಡಿಯಾಕ್ಕೆ ಈ ಸ್ಥಾನವನ್ನು ಉಳಿಸುವುದು ದೊಡ್ಡ ಸವಾಲಾಗಿದೆ. ಮಂಗಳವಾರ ಪ್ರಕಟಗೊಂಡಿರುವ ರ್ಯಾಂಕಿಂಗ್‌ನಲ್ಲಿ ಕೊಹ್ಲಿ ಎರಡನೇ ಸ್ಥಾನ ಪಡೆದರು. ಇದೀಗ ಕೊಹ್ಲಿ ತಂಡದ ಅಗ್ರಸ್ಥಾನವನ್ನು ಉಳಿಸುವ ಜೊತೆಗೆ ತಾನು ನಂ.1 ಸ್ಥಾನ ಪಡೆಯುವ ನಿಟ್ಟಿನಲ್ಲಿ ಶ್ರಮಿಸಲಿದ್ದಾರೆ.

   ಟೆಸ್ಟ್ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಆಸ್ಟ್ರೇಲಿಯ ತಂಡದ ನಾಯಕ ಸ್ಟೀವ್ ಸ್ಮಿತ್ ನಂ.1, ವಿರಾಟ್ ಕೊಹ್ಲಿ ನಂ.2 ಮತ್ತು ಇಂಗ್ಲೆಂಡ್‌ನ ಜೋ ರೂಟ್ ನಂ.3 ಸ್ಥಾನದಲ್ಲಿದ್ದಾರೆ. ಸ್ಮಿತ್‌ಗಿಂತ ಕೊಹ್ಲಿ 26 ಪಾಯಿಂಟ್ ಹಿಂದೆ ಮತ್ತು ರೂಟ್‌ಗಿಂತ ಕೊಹ್ಲಿ 48 ಪಾಯಿಂಟ್ ಮುಂದೆ ಇದ್ದಾರೆ.

ಅಗ್ರ 20 ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಚೇತೇಶ್ವರ ಪೂಜಾರ (799) ನಂ.6, ಲೋಕೇಶ್ ರಾಹುಲ್(661) ನಂ.18 ಮತ್ತು ಅಜಿಂಕ್ಯ ರಹಾನೆ (645) ಅವರು 19ನೇ ಸ್ಥಾನದಲ್ಲಿದ್ದಾರೆ.

 ಟೆಸ್ಟ್ ಬೌಲರ್‌ಗಳ ಪಟ್ಟಿಯಲ್ಲಿ ರವೀಂದ್ರ ಜಡೇಜ ಮೂರನೇ, ರವಿಚಂದ್ರನ್ ಅಶ್ವಿನ್ 5ನೇ ಮತ್ತು ವೇಗಿ ಮುಹಮ್ಮದ್ ಶಮಿ ನಂ.19 ಸ್ಥಾನ ಪಡೆದಿದ್ದಾರೆ. ಇಂಗ್ಲೆಂಡ್‌ನ ವೇಗಿ ಜೇಮ್ಸ್ ಆ್ಯಂಡರ್ಸನ್ ನಂ.1 ಬೌಲರ್ ಆಗಿದ್ದಾರೆ. ಆಲ್‌ರೌಂಡರ್‌ಗಳ ಪಟ್ಟಿಯಲ್ಲಿ ಅಗ್ರ 5ರಲ್ಲಿ ಜಡೇಜ ಮತ್ತು ಅಶ್ವಿನ್ ಸ್ಥಾನ ಗಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News