ಸಿಇಟಿ-2018: ಬಿ ಫಾರ್ಮ-ಫಾರ್ಮ ಡಿ ಕೋರ್ಸುಗಳಿಗೆ ಸೀಟು ಹಂಚಿಕೆ

Update: 2018-07-27 15:21 GMT

ಬೆಂಗಳೂರು, ಜು.27: ಬಿ-ಫಾರ್ಮ ಮತ್ತು ಫಾರ್ಮ-ಡಿ ಕೋರ್ಸುಗಳಿಗೆ ಸರಕಾರವು ಸೀಟು ಮ್ಯಾಟ್ರಿಕ್ಸ್ ಅನ್ನು ನೀಡಿದ್ದು, ಈ ಕೋರ್ಸುಗಳಿಗೆ ಸೀಟು ಹಂಚಿಕೆಯನ್ನು ಇಂಜಿನಿಯರಿಂಗ್, ಆರ್ಕಿಟೆಕ್ಚರ್(ವಾಸ್ತುಶಿಲ್ಪ), ಕೃಷಿ ವಿಜ್ಞಾನ ಇತರೆ ಕೋರ್ಸುಗಳ ಜೊತೆಯಲ್ಲಿ ಹಂಚಿಕೆ ಮಾಡಲಾಗುವುದು. ಅರ್ಹ ಅಭ್ಯರ್ಥಿಗಳು ಬಿ-ಫಾರ್ಮ ಮತ್ತು ಫಾರ್ಮ-ಡಿ ಕೋರ್ಸುಗಳಿಗೆ ಜು.25ರಿಂದ 28ರವರೆಗೆ ಇಚ್ಛೆ, ಆಯ್ಕೆಗಳನ್ನು ದಾಖಲಿಸಬಹುದಾಗಿದೆ.

ಬಿಎಸ್ಸಿ ನರ್ಸಿಂಗ್, ಬಿಪಿಟಿ, ಬಿಪಿಒ ಕೋರ್ಸುಗಳಿಗೆ ಮತ್ತು ಪ್ಯಾರಾ ಮೆಡಿಕಲ್ ಕೋರ್ಸುಗಳಿಗೆ ಅರ್ಜಿ: ಸರಕಾರವು 2018ನೆ ಸಾಲಿನಿಂದ ಬಿಎಸ್ಸಿ ನರ್ಸಿಂಗ್, ಬಿಪಿಟಿ, ಬಿಪಿಒ ಕೋರ್ಸುಗಳಿಗೆ ಮತ್ತು ಇತರೆ 12 ಪ್ಯಾರಾ ಮೆಡಿಕಲ್ ಕೋರ್ಸುಗಳಿಗೆ ಪ್ರವೇಶ ಪ್ರಕ್ರಿಯೆಯನ್ನು ನಡೆಸಲು ರಾಜ್ಯ ಪರೀಕ್ಷಾ ಪ್ರಾಧಿಕಾರಕ್ಕೆ ಆದೇಶಿಸಿದೆ.

ಅದರಂತೆ, ಪ್ರಾಧಿಕಾರವು ಈ ಮೇಲ್ಕಂಡ ಕೋರ್ಸುಗಳಿಗೆ ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಿದೆ. ಅರ್ಹ ಅಭ್ಯರ್ಥಿಗಳು ಪ್ರಾಧಿಕಾರದ ವೆಬ್‌ಸೈಟ್ http://kea.kar.nic.in ನಿಂದ ನಿಗದಿತ ಲಿಂಕ್ ಅನ್ನು ಆಯ್ಕೆ ಮಾಡಿ, ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಬ್ರೋಚರ್ ಮತ್ತು ವಿವರವಾದ ಮಾಹಿತಿಯನ್ನು ಪ್ರಾಧಿಕಾರದ ವೆಬ್‌ಸೈಟ್ ನಿಂದ ಪಡೆಯಬಹುದಾಗಿದೆ.

ಎಂ.ಫಾರ್ಮ-ತಾತ್ಕಾಲಿಕ ಸರಿ ಉತ್ತರಗಳು: 2018ನೆ ಸಾಲಿನ ಎಂ.ಫಾರ್ಮ ಕೋರ್ಸುಗಳ ಪರೀಕ್ಷೆಯ ತಾತ್ಕಾಲಿಕ ಸರಿ ಉತ್ತರಗಳನ್ನು ಜು.26ರಂದು ಪ್ರಾಧಿಕಾರದ ವೆಬ್‌ಸೈಟ್ http://kea.kar.nic.in ನಲ್ಲಿ ಅಭ್ಯರ್ಥಿಗಳ ಮಾಹಿತಿಗಾಗಿ ಪ್ರಕಟಿಸಲಾಗಿದೆ. ಈ ತಾತ್ಕಾಲಿಕ ಸರಿ ಉತ್ತರಗಳಿಗೆ ಯಾವುದೇ ಆಕ್ಷೇಪಣೆಗಳಿದ್ದಲ್ಲಿ ಆಧಾರ ಸಹಿತ ಆಕ್ಷೇಪಣೆಗಳನ್ನು ಇ-ಮೇಲ್ keauthoriy-ka@nic.in ವಿಳಾಸಕ್ಕೆ ಜು.28ರಂದು ಬೆಳಗ್ಗೆ 10.30ರೊಳಗಾಗಿ ಕಳುಹಿಸಬಹುದಾಗಿದೆ ಎಂದು ರಾಜ್ಯ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕರ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News