×
Ad

ಅಕ್ರಮವಾಗಿ ನೆಲೆಸಿದ್ದ ಆರೋಪ: 8 ವಿದೇಶಿ ಪ್ರಜೆಗಳ ವಿರುದ್ಧ ಮೊಕದ್ದಮೆ

Update: 2018-07-27 20:56 IST

ಬೆಂಗಳೂರು, ಜು.27: ರಾಜಧಾನಿ ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿರುವ ವಿದೇಶಿಗರ ಪತ್ತೆಗಾಗಿ ನಗರ ಪೊಲೀಸರು ಕಾರ್ಯಾಚರಣೆ ಮುಂದುವರೆಸಿದ್ದು, ಉತ್ತರ ವಿಭಾಗ ವ್ಯಾಪ್ತಿಯಲ್ಲಿ 8 ವಿದೇಶಿ ಪ್ರಜೆಗಳ ವಿರುದ್ಧ ವಿದೇಶಿಯರ ನೋಂದಣಿ ಕಾಯ್ದೆಯಡಿ ಮೊಕದ್ದಮೆ ದಾಖಲಾಗಿದೆ.

ಶುಕ್ರವಾರ ನಗರದ ಉತ್ತರ ವಿಭಾಗ ವ್ಯಾಪ್ತಿಯಲ್ಲಿ ಮುಂಜಾನೆಯಿಂದಲೇ ಪೊಲೀಸರ ನಾಲ್ಕು ತಂಡಗಳು ಅಕ್ರಮವಾಗಿ ವಾಸವಾಗಿರುವ ವಿದೇಶಿಯರ ಪತ್ತೆಗಾಗಿ ಹಲವು ಕಡೆ ದಾಳಿ ನಡೆಸಿ, ಕಾರ್ಯಾಚರಣೆ ನಡೆಸಿದರು.

ಈ ವ್ಯಾಪ್ತಿಯಲ್ಲಿ ಒಟ್ಟು 61 ವಿದೇಶಿಯರನ್ನು ಪರಿಶೀಲನೆ ಮಾಡಿದ್ದು, ಇದರಲ್ಲಿ 8 ದೇಶಿಯರು ಅಕ್ರಮವಾಗಿ ವಾಸವಾಗಿರುವುದು ಖಚಿತವಾಗಿದೆ. ಹೀಗಾಗಿ, ಆರೋಪಿಗಳ ವಿರುದ್ಧ ವಿದೇಶಿಯರ ನೋಂದಣಿ ಕಾಯ್ದೆಯಡಿ ಇಲ್ಲಿನ ಬಾಗಲಕುಂಟೆ ವತ್ತ ಸೊಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಿ ತನಿಖೆ ಮುಂದುವರೆಸಲಾಗಿದೆ ಎಂದು ಪತ್ರಿಕಾ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News