×
Ad

200 ಅತ್ಯಾಧುನಿಕ ಪೊಲೀಸ್ ಚೌಕಿ ನಿರ್ಮಾಣಕ್ಕೆ ಬಿಬಿಎಂಪಿ ನಿರ್ಧಾರ

Update: 2018-07-29 18:48 IST

ಬೆಂಗಳೂರು, ಜು.27: ಪ್ರತೀ ದಿನ ಧೂಳು, ವಾಹನಗಳ ಹೊಗೆಯ ನಡುವೆ ಕೆಲಸ ನಿರ್ವಹಿಸುವ ಸಂಚಾರಿ ಪೊಲೀಸರ ಆರೋಗ್ಯದ ದೃಷ್ಟಿಯಿಂದ ಬಿಬಿಎಂಪಿ ಅತ್ಯಾಧುನಿಕ ಪೊಲೀಸ್ ಚೌಕಿ ನಿರ್ಮಾಣ ಮಾಡಲು ನಿರ್ಧರಿಸಿದೆ.

200 ಸ್ಥಳಗಳಲ್ಲಿ ಅತ್ಯಾಧುನಿಕ ಪೊಲೀಸ್ ಚೌಕಿಗಳನ್ನು ನಿರ್ಮಾಣ ಮಾಡಲಾಗುತ್ತಿದ್ದು, ಇಲ್ಲಿ ಶುದ್ಧ ಕುಡಿಯುವ ನೀರು, ಉತ್ತಮ ಗಾಳಿ ಇರಲಿದೆ. ಇದಕ್ಕೆ ಸುಮಾರು 30 ಕೋಟಿ ವೆಚ್ಚವಾಗಲಿದೆ ಎಂದು ಆಯುಕ್ತ ಮಂಜುನಾಥ್ ಪ್ರಸಾದ್ ಹೇಳಿದ್ದಾರೆ.

ಚೌಕಿ ನಿರ್ಮಾಣ ಮಾಡುವುದಕ್ಕೆ ಪಾಲಿಕೆಗೆ ಹೆಚ್ಚಿನ ಖರ್ಚು ಬರುವುದಿಲ್ಲ. ಚೌಕಿಗೆ ಜಾಹೀರಾತು ಹಾಕಲು ಸ್ಥಳಾವಕಾಶ ಮಾಡಿಕೊಡಲಾಗಿದೆ. ಇಲ್ಲಿ ಜಾಹೀರಾತು ಹಾಕುವವರೇ ಚೌಕಿಯನ್ನು ನಿರ್ಮಿಸಿಕೊಡುತ್ತಾರೆ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News