ಬ್ಯಾಡ್ಮಿಂಟನ್ ಪಂದ್ಯಾವಳಿ ಟ್ರೋಫಿ ಅನಾವರಣ
ಬೆಂಗಳೂರು, ಜು.29: ವ್ಯಾನಿಶ್ಕರ್ ಸ್ಪೋರ್ಟ್ಸ್ ವತಿಯಿಂದ ಮೂರನೆ ಹಂತದ ಚಾಂಪಿಯನ್ಸ್ ಬ್ಯಾಡ್ಮಿಂಟನ್ ಎಕ್ಸ್ಟ್ರಾ ವ್ಯಾಗ್ನಜಾ ಮೂರು ದಿನಗಳ ಬ್ಯಾಡ್ಮಿಂಟನ್ ಪಂದ್ಯಾವಳಿಯ ಟ್ರೋಫಿಯನ್ನು ಅನಾವರಣ ಮಾಡಲಾಯಿತು.
ಪಂದ್ಯದ ತಂಡಗಳು ಮತ್ತು ಆಟಗಾರರನ್ನು ಇಂದು ಘೋಷಣೆ ಮಾಡಿದ್ದು, ಪಂದ್ಯಾವಳಿಯು ಆ.31ರಿಂದ ಸೆ.2 ರವರೆಗೂ ನಡೆಯುತ್ತದೆ. ರಾಜ್ಯದಾದ್ಯಂತ ಸುಮಾರು 600ಆಟಗಾರರು ಪಂದ್ಯಾವಳಿಗೆ ನೋಂದಾಯಿಸಿಕೊಂಡಿದ್ದಾರೆ.
ಇಂದು ನಡೆದ ಹರಾಜು ಪ್ರಕ್ರಿಯೆಯು ಅಂಕಗಳ ಆಧಾರಿತ ಸ್ವರೂಪದಲ್ಲಿ 10 ತಂಡಗಳಿಂದ ಸುಮಾರು 200 ಆಟಗಾರರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ರಾಬಿನ್ ಮತ್ತು ನಾಕ್‌ಔಟ್ ರೂಪದಲ್ಲಿ ಪರಸ್ಪರ ಸೆಣಸಾಡಲಿವೆ. ಪ್ರತಿ ತಂಡದ ಶ್ರೇಯಾಂಕಿತ ಆಟಗಾರ ನೇತೃತ್ವ ವಹಿಸಿಕೊಂಡಿರುತ್ತಾರೆ. ಅಂಕಗಳನ್ನು ನೀಡಿರುವ ತಂಡದ ಮಾಲಕರು ತಮ್ಮ ಸ್ಥಾನ ಮತ್ತು ವರ್ಗವನ್ನು ಆಧರಿಸಿ ಆಟಗಾರರನ್ನು ಖರೀದಿಸುತ್ತಾರೆ.
ಮಾಜಿ ರಾಷ್ಟ್ರೀಯ ಬ್ಯಾಡ್ಮಿಂಟನ್ ಚಾಂಪಿಯನ್, ಈ ರೀತಿಯ ಪಂದ್ಯಾವಳಿಗಳು ತಮ್ಮ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಕಾರಿಯಾಗಿದೆ. ಅಲ್ಲದೆ, ಉದಯೋನ್ಮುಖ ಪ್ರತಿಭೆಗಳನ್ನು ಒದಗಿಸುತ್ತದೆ. ಅಲ್ಲದೆ, ಆರ್ಥಿಕ ಮತ್ತು ಸಾಮಾಜಿಕ ಕಾರಣಗಳಿಂದಾಗಿ ಅವರ ಕನಸು ನನಸಾಗಿಸಲು ಸಾಧ್ಯವಾಗದ ಪ್ರತಿಭಾವಂತ ಆಟಗಾರರನ್ನು ಗುರುತಿಸುವ ಪ್ರಯತ್ನ ಶ್ಲಾಘನೀಯ ಎಂದು ಹೇಳಿದರು.
ಆಯ್ಕೆಯಾದ ಆಟಗಾರರು ತಮ್ಮ ಪ್ರತಿಭೆಗಳನ್ನು ಪ್ರದರ್ಶಿಸಲು ಅತ್ಯುತ್ತಮ ಅವಕಾಶ ಇದಾಗಿದೆ. ಈ ಪಂದ್ಯಾವಳಿಯಲ್ಲಿ ಸವಲತ್ತು ವಂಚಿತ ಪ್ರತಿಭಾವಂತ ಮಕ್ಕಳನ್ನು ಆಯ್ಕೆ ಮಾಡಿ, ಅವರಿಗೆ ಸೂಕ್ತ ತರಬೇತಿ ನೀಡುವ ಮೂಲಕ ಭವಿಷ್ಯದ ಚಾಂಪಿಯನ್‌ಗಳಾಗಲು ಸಹಕಾರಿಯಾಗಿದೆ ಎಂದು ಅವರು ತಿಳಿಸಿದರು.
ಹರಾಜು ಪ್ರಕ್ರಿಯೆಯಲ್ಲಿ ಪ್ರೀಮಿಯರ್ ಡಬಲ್ಸ್, ಮಹಿಳಾ ಡಬಲ್ಸ್, ಮಿಶ್ರ ಡಬಲ್ಸ್, ಶ್ರೇಯಾಂಕವಿಲ್ಲದ ಡಬಲ್ಸ್, ಕಾರ್ಪೋರೇಟ್ ಡಬಲ್ಸ್, ಸೇರಿದಂತೆ ವಿವಿಧ ವಿಭಾಗಗಳಲ್ಲಿ ಹತ್ತು ತಂಡಗಳು ಆಯ್ಕೆ ಮಾಡಲಾಗಿದೆ ಎಂದು ಪ್ರಕಟನೆ ತಿಳಿಸಿದೆ.