ನ.23ರಿಂದ ಅರಬ್ ಸಂಯುಕ್ತ ಸಂಸ್ಥಾನದಲ್ಲಿ 'ವಿಶ್ವ ತುಳು ಸಮ್ಮೇಳನ ದುಬೈ'

Update: 2018-07-31 03:22 GMT

ದುಬೈ, ಜು. 30: ಅರಬ್ ಸಂಯುಕ್ತ ಸಂಸ್ಥಾನದಲ್ಲಿ 'ವಿಶ್ವ ತುಳು ಸಮ್ಮೇಳನ ದುಬೈ' ನ. 23, 24ರಂದು ದುಬೈಯ ಅಲ್ ನಾಸರ್ ಲೀಸರ್  ಲ್ಯಾಂಡ್ ಐಸ್ ರಿಂಕ್ ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ.

ಜು. 27ರಂದು ವಿಶ್ವ ತುಳು ಸಮ್ಮೇಳನದ ಸಲಹಾ ಸಮಿತಿಯ ಸರ್ವ ಸದಸ್ಯರ ಸಭೆಯು ದುಬೈಯ  ಮಾರ್ಕೊಪೋಲ್ ಹೋಟೆಲ್ ಸಭಾಂಗಣದಲ್ಲಿ  ಸಾಗರೋತ್ತರ ತುಳುವರ ಮುಖ್ಯ ಸಂಘಟಕ  ಸರ್ವೋತ್ತಮ ಶೆಟ್ಟಿ ಅವರ  ಅಧ್ಯಕ್ಷತೆಯಲ್ಲಿ ನಡೆಯಿತು. ಸಲಹಾ ಸಮಿತಿಯ ಸದಸ್ಯ  ಶೋಧನ್ ಪ್ರಸಾದ್  ಸ್ವಾಗತಿಸಿದರು.

ಮುಖ್ಯ ಸಂಘಟಕ ಸರ್ವೋತ್ತಮ ಶೆಟ್ಟಿ 'ವಿಶ್ವ ತುಳು ಸಮ್ಮೇಳನ ದುಬೈ 2018'ರ ಪೂರ್ಣ ವಿವರಗಳನ್ನು  ಸಭೆಯಲ್ಲಿ ವಿವರಿಸಿ,  ಸಮ್ಮೇಳನದ ಪೂರ್ವ  ತಯಾರಿಯಲ್ಲಿ ಸೂಕ್ತ ಮಾರ್ಗದರ್ಶವನ್ನು ನೀಡಿ ಸರ್ವ ಸದಸ್ಯರು ಪೂರ್ಣ ಸಹಕಾರ ನೀಡಿ ಅತ್ಯಂತ ಜವಬ್ಧಾರಿಯುತವಾಗಿ ಕಾರ್ಯ ನಿರ್ವಹಿಸಿ,  ಸಮ್ಮೇಳನವನ್ನು ಯಶಸ್ವಿಗೊಳಿಸುವಂತೆ ಕರೆ ನೀಡಿದರು.

ಸಭೆಯಲ್ಲಿ ಸಲಹಾ ಸಮಿತಿಯ ಸದ್ಯರುಗಳಾದ  ಬಿ. ಕೆ. ಗಣೇಶ್ ರೈ, ಶೋಧನ್ ಪ್ರಸಾದ್, ದೇವ್ ಕುಮಾರ್ ಕಾಂಬ್ಲಿ, ಅಜ್ಮಲ್, ಸತೀಶ್ ಪೂಜಾರಿ,  ಯೋಗೇಶ್ ಪ್ರಭು, ನೋವೆಲ್ ಡಿ’ ಅಲ್ಮೇಡಾ, ಜ್ಯೋತಿಕಾ ಹರ್ಷ ಶೆಟ್ಟಿ, ಸ್ಮಿತಾ ಪ್ರಸನ್ನ ಮತ್ತು ಬ್ಯಾರಿಸ್  ವೆಲ್ಫೇರ್ ಫೋರಮ್ ಅಧ್ಯಕ್ಷ  ಮುಹಮ್ಮದ್  ಅಲಿ ಉಚ್ಚಿಲ್, ಲತೀಫ್ ಮುಲ್ಕಿ ಹಾಗೂ ವಿವಿಧ ಸಂಘ ಸಂಸ್ಥೆಗಳ ಮುಖ್ಯಸ್ಥರು, ಪ್ರತಿನಿಧಿಗಳು ಉಪಸ್ಥಿತರಿದ್ದರು.

ಸುಧೀರ್ ಕುಮಾರ್ ಶೆಟ್ಟಿ 'ವಿಶ್ವ ತುಳು ಸಮ್ಮೇಳನ-ದುಬೈ ಅಧಿಕೃತ ಲಾಂಛನ ಲೋಕಾರ್ಪಣೆ ಮಾಡಿ,  ಸಮ್ಮೇಳನದ ಪೂರ್ವ ತಯಾರಿಗೆ  ಮೆಚ್ಚುಗೆ  ವ್ಯಕ್ತಪಡಿಸಿ, ಯಶಸ್ಸಿಗೆ ಶುಭ ಕೋರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News