2018ರಲ್ಲಿ ಕಾಶ್ಮೀರದಲ್ಲಿ ಭದ್ರತಾ ಪಡೆಯ 41 ಮಂದಿ ಸಿಬ್ಬಂದಿ ಮೃತ್ಯು

Update: 2018-07-31 07:02 GMT

ಶ್ರೀನಗರ, ಜು.31: ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ವಿರುದ್ಧ ಕಾರ್ಯಾಚರಣೆ  ಮತ್ತು ಕಲ್ಲು ತೂರಾಟ ಪ್ರಕರಣದಲ್ಲಿ  2018ರಲ್ಲಿ 41 ಮಂದಿ ಭದ್ರತಾ ಸಿಬ್ಬಂದಿಗಳು ಬಲಿಯಾಗಿದ್ದಾರೆ.

ಬಲಿಯಾದ 41 ಮಂದಿ ಭದ್ರತಾ ಸಿಬ್ಬಂದಿಗಳ ಪೈಕಿ 20 ಪೊಲೀಸರು ಸೇರಿದ್ದಾರೆ. 907 ಮಂದಿ ಗಾಯಗೊಂಡಿದ್ದಾರೆ. 17 ಯೋಧರು, 20 ಪೊಲೀಸರು ಮತ್ತು 2 ಸಿಆರ್ ಪಿಎಫ್ ಸಿಬ್ಬಂದಿ  ಕಳೆದ 6 ತಿಂಗಳ ಅವಧಿಯಲ್ಲಿ ಮೃತಪಟ್ಟಿದ್ದಾರೆ.

28 ಆರ್ಮಿ, 31 ಸಿಆರ್ ಪಿಎಫ್  ಮತ್ತು 37 ಪೊಲೀಸರು ಉಗ್ರರ ವಿರುದ್ಧ ಕಾರ್ಯಾಚರಣೆಯಲ್ಲಿ ಗಾಯಗೊಂಡಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಕಲ್ಲು ತೂರಾಟ ಪ್ರಕರಣಗಳಲ್ಲಿ ಇಬ್ಬರು ಸಿಆರ್ ಪಿಎಫ್ ಸಿಬ್ಬಂದಿ ಮೃತಪಟ್ಟಿದ್ದಾರೆ. 811 ಮಂದಿ ಇದೇ ವೇಳೆ ಗಾಯಗೊಂಡಿದ್ದಾರೆ. 734 ಕಲ್ಲು ತೂರಾಟ ಪ್ರಕರಣಗಳಲ್ಲಿ 592 ಪೊಲೀಸರು, 219 ಸಿಆರ್ ಪಿಎಫ್ ಸಿಬ್ಬಂದಿ ಗಾಯಗೊಂಡಿದ್ದಾರೆ. ಉಗ್ರರ ವಿರುದ್ಧ ಕಾರ್ಯಾಚರಣೆಯ ವೇಳೆ 32 ನಾಗರಿಕರು  ಮೃತಪಟ್ಟಿದ್ದಾರೆ. 117 ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News