ಈಗ ವಾಟ್ಸ್ ಆ್ಯಪ್ ಗ್ರೂಪ್ ಗಳಲ್ಲೂ ವಿಡಿಯೋ ಕಾಲ್

Update: 2018-08-01 08:09 GMT

ಗ್ರೂಪ್ ಗಳಲ್ಲಿ ವಾಯ್ಸ್ ಹಾಗು ವಿಡಿಯೋ ಕಾಲ್ ಗಳನ್ನು ಮಾಡಲು ಅವಕಾಶ ನೀಡುವ ಫೀಚರನ್ನು ವಾಟ್ಸ್ ಆ್ಯಪ್ ಇದೀಗ ತನ್ನ ಬಳಕೆದಾರರಿಗೆ ನೀಡಿದೆ. ಫೇಸ್ ಬುಕ್ ಮಾಲಕತ್ವದ ವಾಟ್ಸ್ ಆ್ಯಪ್ ವಾಯ್ಸ್ ಕಾಲ್ ನಂತರ ವಿಡಿಯೋ ಕಾಲ್ ಫೀಚರನ್ನು ಬಳಕೆದಾರರಿಗೆ ನೀಡಿ 3 ವರ್ಷಗಳಾಗಿವೆ.

ಪ್ರತಿ ತಿಂಗಳು 1.5 ಬಿಲಿಯನ್ ಜನರು ವಾಟ್ಸ್ ಆ್ಯಪನ್ನು ಬಳಸುತ್ತಿದ್ದು, ಪ್ರತಿದಿನ 2 ಬಿಲಿಯನ್ ನಿಮಿಷಗಳವರೆಗೆ ಅವರು ಕರೆ ಸೇವೆಯನ್ನು ಬಳಸುತ್ತಾರೆ ಎಂದು ಸಂಸ್ಥೆ ಹೇಳಿದೆ.

ತಮ್ಮ ಸ್ಕ್ರೀನ್ ಮೇಲೆ ಬಲಬದಿಯಲ್ಲಿ ಕಾಣುವ ‘add participant’ ಬಟನ್ ಕ್ಲಿಕ್ ಮಾಡುವ ಮೂಲಕ ತಮ್ಮ ಗೆಳೆಯರನ್ನು ಬಳಕೆದಾರರು ಆಯ್ಕೆ ಮಾಡಿಕೊಳ್ಳಬಹುದು. ಗರಿಷ್ಠ ನಾಲ್ಕು ಮಂದಿಯ ಜೊತೆ ಗ್ರೂಪ್ ಗಳಲ್ಲಿ ವಿಡಿಯೋ ಕಾಲ್ ನಲ್ಲಿ ಮಾತನಾಡಬಹುದಾಗಿದೆ. iOS ಹಾಗು Android ಬಳಕೆದಾರರಿಗೆ ವಿಶ್ವಾದ್ಯಂತ ಈ ಫೀಚರ್ ಲಭ್ಯವಾಗಲಿದೆ.

ಇದರ ಬಳಕೆ ಹೇಗೆ?

ಗ್ರೂಪ್ ವಿಡಿಯೋ ಕಾಲ್ ಫೀಚರನ್ನ ಬಳಸಲು ನಿಮ್ಮ ಒಬ್ಬ ಗೆಳೆಯರ ಜೊತೆ ವಿಡಿಯೋ ಅಥವಾ ವಾಯ್ಸ್ ಕಾಲ್ ಆರಂಭಿಸಬೇಕು. ಸ್ಕೀನ್ ಮೇಲೆ ಕಾಣುವ ಬಟನ್ ಮೂಲಕ ನೀವು ಮತ್ತೊಬ್ಬರನ್ನು ಸೇರಿಸಿಕೊಳ್ಳಬಹುದು. ಒಮ್ಮೆ ಕಾಲ್ ಕನೆಕ್ಟ್ ಆದ ನಂತರ ಆ್ಯಡ್ ಪರ್ಸನ್ ಐಕಾನ್ ಕಾಣಿಸುತ್ತದೆ. 3ನೆ ವ್ಯಕ್ತಿ ಕರೆ ಸ್ವೀಕರಿಸಿದರೆ ಹೆಸರುಗಳು ಕಾಣಿಸಿಕೊಳ್ಳುತ್ತದೆ. ಗರಿಷ್ಟ ಮೂವರನ್ನು ನೀವು ಆಯ್ಕೆ ಮಾಡಿಕೊಳ್ಳಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News