ರಂಗಭೂಮಿಗೆ ಪ್ರಚಾರದ ಅಗತ್ಯವಿದೆ: ಜೆ.ಎನ್.ಲೋಕೇಶ್

Update: 2018-08-01 15:04 GMT

ಬೆಂಗಳೂರು, ಆ.1: ಸಿನೆಮಾ ಕ್ಷೇತ್ರದಂತೆಯೇ ರಂಗಭೂಮಿಯಾಗಿದ್ದು, ಈ ಕ್ಷೇತ್ರಕ್ಕೆ ಹೆಚ್ಚಿನ ಪ್ರಚಾರದ ಅಗತ್ಯತೆ ಇದೆ ಎಂದು ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಜೆ.ಎನ್.ಲೋಕೇಶ್ ಅಭಿಪ್ರಾಯಪಟ್ಟರು.

ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ರಂಗಪಯಣ ನಾಟಕ ತಂಡ ತನ್ನ ಒಂಭತ್ತನೆ ವರ್ಷದ ಸಂಭ್ರಮಾಚರಣೆ ಪ್ರಯುಕ್ತ ಹಮ್ಮಿಕೊಂಡಿದ್ದ ಗುಲಾಬಿ ಗ್ಯಾಂಗ್ ನಾಟಕ ಪ್ರದರ್ಶನದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಜೀವನದಲ್ಲಿ ಯಾವ್ಯಾವುದಕ್ಕೋ ಖರ್ಚು ಮಾಡುವ ಜನರು, ಮಾಲ್ ಗಳಲ್ಲಿ ಸಿನೆಮಾ ನೋಡಲು 300 ರೂ. ಕೊಡುತ್ತಾರೆ, ಆದರೆ, ನಾಟಕಕ್ಕೆ 50, 100 ರೂ. ಕೊಡಲು ತಯಾರಿಲ್ಲ. ಎಪ್ಪತ್ತು-ಎಂಬತ್ತರ ದಶಕದಂತೆ ನಾಟಕ ನೋಡುವ ಪ್ರೇಕ್ಷಕರಿಲ್ಲ ಎಂದ ಅವರು, ಟಿಕೆಟ್ ಕೊಟ್ಟು ನಾಟಕ ನೋಡಲು ಬಂದರೆ ರಂಗ ತಂಡಗಳು ಉಳಿಯುತ್ತವೆ ಎಂದು ನುಡಿದರು.

ರಂಗಪಯಣ ಮತ್ತು ಸಾತ್ವಿಕ ತಂಡಗಳು, ಒಂದು ನಾಟಕದ ಪ್ರದರ್ಶನವನ್ನು ನಿರಂತರವಾಗಿ ಪ್ರದರ್ಶಿಸಿದ್ದಾರೆ. ಇದರ ಹಿಂದೆ ನಯನ ಹಾಗೂ ರಾಜಗುರು ದಂಪತಿಗಳ ಶ್ರಮವಿದೆ ಎಂದು ಹೇಳಿದರು. ಈ ವೇಳೆ ರಂಗಪಯಣದ ಟ್ರಸ್ಟಿಗಳಾದ ಶ್ರೀನಾಥ್ ಹಾಗೂ ರಾಘವೇಂದ್ರ ಸೇರಿದಂತೆ ಪ್ರಮುಖರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News