ಲ್ಯಾಪ್‌ಟಾಪ್ ಕಳವು: ಓರ್ವನ ಬಂಧನ
Update: 2018-08-01 20:36 IST
ಬೆಂಗಳೂರು, ಆ.1: ಮನೆಗಳ್ಳತನ ಆರೋಪದಡಿ ವ್ಯಕ್ತಿಯೊಬ್ಬನನ್ನು ಬಂಧಿಸಿ 35 ಲಕ್ಷ ಮೌಲ್ಯದ 49 ಲ್ಯಾಪ್‌ಟಾಪ್ ಮತ್ತು 510 ಗ್ರಾಂ ಚಿನ್ನಾಭರಣಗಳು, 9 ಮೊಬೈಲ್‌ಗಳನ್ನು ವಶಕ್ಕೆ ಪಡೆಯುವಲ್ಲಿ ಎಲೆಕ್ಟ್ರಾನಿಕ್ ಸಿಟಿ ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ.
ತಮಿಳುನಾಡು ಮೂಲದ ಸುಧಾಕರ್(32) ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.
ಹೊಸೂರು ನಿವಾಸಿಯಾಗಿರುವ ಸುಧಾಕರ್, ಹೂವಿನ ವ್ಯಾಪಾರ ಮಾಡಿ ರಾತ್ರಿ ವೇಳೆ ಮಡಿವಾಳ ಹೂವಿನ ಸಂತೆಗೆ ಹೂ ಕೊಟ್ಟು ವಾಪಸ್ ಹೋಗುವ ಸಂದರ್ಭದಲ್ಲಿ ಮನೆಗಳಿಗೆ ನುಗ್ಗಿ ಕಳವು ಮಾಡುತ್ತಿದ್ದ ಎನ್ನುವ ಮಾಹಿತಿ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ.
ಈತನ ಬಂಧನದಿಂದ ಎಲೆಕ್ಟ್ರಾನಿಕ್ ಸಿಟಿಯ 30 ಪ್ರಕರಣ, ಪರಪ್ಪನ ಅಗ್ರಹಾರ-3, ಬೆಳ್ಳಂದೂರು-3, ಮಾರತ್‌ಹಳ್ಳಿಯ 3 ಪ್ರಕರಣ ಸೇರಿ 39 ಪ್ರಕರಣಗಳು ಪತ್ತೆಯಾಗಿದ್ದು, ಈ ಸಂಬಂಧ ಎಲೆಕ್ಟ್ರಾನಿಕ್ ಠಾಣಾ ಪೊಲೀಸರು ತನಿಖೆ ಕೈಗೊಂಡಿದ್ದಾರೆ.