ಉದ್ಯೋಗ ಭಡ್ತಿಯಲ್ಲಿ ವಿಳಂಬ ಧೋರಣೆ ಖಂಡಿಸಿ ಪ್ರತಿಭಟನೆ

Update: 2018-08-01 15:59 GMT

ಬೆಂಗಳೂರು, ಆ.1: ಉದ್ಯೋಗ ಭಡ್ತಿಯಲ್ಲಿ ವಿಳಂಬ ಧೋರಣೆ ವಿರೋಧಿಸಿ ಆಕಾಶವಾಣಿ ಮತ್ತು ದೂರದರ್ಶನ ಕಾರ್ಯಕ್ರಮ ಸಿಬ್ಬಂದಿ ಪ್ರತಿಭಟನೆ ನಡೆಸಿದರು.

ಬುಧವಾರ ರಾಜಭವನ ರಸ್ತೆಯ ಆಕಾಶವಾಣಿ ಕೇಂದ್ರದ ಎದುರು ಜಮಾಯಿಸಿದ ಸಿಬ್ಬಂದಿ, ಪ್ರಸಾರ ಭಾರತಿಯಡಿ ಸೇವೆಗಳಲ್ಲಿ 810 ಉನ್ನತ ಹುದ್ದೆಗಳಿದ್ದು, ಖಾಯಂ ಆಗಿ 8 ಹಾಗೂ ಪ್ರಭಾರಿಯಾಗಿ 260 ಜನ ಸಿಬ್ಬಂದಿ ಮಾತ್ರ ಹಾಲಿ ಕೆಲಸದಲ್ಲಿದ್ದಾರೆ. ಉಳಿದ ಹುದ್ದೆಗಳಿಗೆ ಬೇರೆ ಇಲಾಖೆಯಿಂದ ಎರವಲು ಸೇವೆಯ ಮೇರೆಗೆ ತಂದು ತುಂಬುವ ಕೆಲಸ ಪ್ರಸಾರ ಭಾರತಿ ಮಾಡುತ್ತಿದೆ ಎಂದು ಆರೋಪಿಸಿದರು. 

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಸಿಬ್ಬಂದಿಯ ಸಂಯೋಜಕ ಎಸ್. ಬಸವರಾಜ, ಸರಕಾರದ ನೇರ ಸುಪರ್ದಿಯಲ್ಲಿರುವ ಆಕಾಶವಾಣಿ ಮತ್ತು ದೂರದರ್ಶನದ ಸಿಬ್ಬಂದಿ ಅವರ ಗೋಳನ್ನು ಯಾರೂ ಕೇಳುವವರಿಲ್ಲ. ನಿಗದಿತ ಸಮಯದಲ್ಲಿ ಎಲ್ಲ ಹುದ್ದೆಗಳನ್ನು ತುಂಬುವ ಕೆಲಸ ಪ್ರಸಾರ ಭಾರತಿ ಮಾಡಬೇಕು ಎಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ವಿನೋದಕುಮಾರ, ಅಶೋಕ, ಎಸ್.ಎಸ್.ಚೋಳಿನ ಸೇರಿದಂತೆ ಪ್ರಮುಖರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News