ಬಾಂಗ್ಲಾದೇಶ-ಭಾರತದ ಬಾಂಧವ್ಯ ನಾಶ: ಮಮತಾ ಬ್ಯಾನರ್ಜಿ

Update: 2018-08-01 17:18 GMT

ಹೊಸದಿಲ್ಲಿ, ಆ. 1: ಅಸ್ಸಾಂನ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ಕುರಿತು ತನ್ನ ವಾಗ್ದಾಳಿ ತೀವ್ರಗೊಳಿಸಿರುವ ಪಶ್ಚಿಮಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಬಿಜೆಪಿ ಮತ ಬ್ಯಾಂಕ್ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ ಹಾಗೂ ಎನ್‌ಆರ್‌ಸಿ ವಿಷಯ ಬಾಂಗ್ಲಾದೇಶದೊಂದಿಗಿನ ಭಾರತದ ಬಾಂಧವ್ಯವನ್ನು ನಾಶ ಮಾಡಲಿದೆ ಎಂದರು.

 ಎನ್‌ಆರ್‌ಸಿ ಕರಡಿನಲ್ಲಿ ನಾಪತ್ತೆಯಾಗಿರುವ 40 ಲಕ್ಷ ನಿವಾಸಿಗಳಲ್ಲಿ ಕೇವಲ ಶೇ. 1 ಮಾತ್ರ ನುಸುಳುಕೋರರು ಇರಬಹುದು. ಆದರೆ, ಉಳಿದವರಿಗೆ ನುಸುಳುಕೋರರ ಹೆಸರಿನಲ್ಲಿ ಕಿರುಕುಳ ನೀಡಲಾಗುತ್ತಿದೆ ಎಂದರು. ಅಸ್ಸಾಂಗೆ ನಿಯೋಗ ಕಳುಹಿಸುವಂತೆ ತಾನು ಎಲ್ಲ ಪ್ರತಿಪಕ್ಷಗಳಲ್ಲಿ ಮನವಿ ಮಾಡಿದ್ದೇನೆ. ಅಸ್ಸಾಂಗೆ ಭೇಟಿ ನೀಡುವಂತೆ ಯಶ್ವಂತ್ ಸಿನ್ಹಾ ಅವರಲ್ಲಿ ಕೂಡ ಮನವಿ ಮಾಡಿದ್ದೇನೆ ಎಂದು ಅವರು ಹೇಳಿದ್ದಾರೆ. ಎನ್‌ಆರ್‌ಸಿಯಲ್ಲಿ ಕೇವಲ ಶೇ. 1 ಮಾತ್ರ ಒಳ ನುಸುಳು ಕೋರರು. ಆದರೆ, ಎನ್‌ಆರ್‌ಸಿಯಲ್ಲಿ ಸೇರ್ಪಡೆಯಾಗದ ಎಲ್ಲರೂ ನುಸುಳುಕೋರರು ಎಂದು ಪ್ರತಿಬಿಂಬಿಸಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಅವರು ಹೇಳಿದರು.

 ಬಾಂಗ್ಲಾದೇಶ ಭಯೋತ್ಪಾದಕ ದೇಶವಲ್ಲ. ಸ್ವಾತಂತ್ರದ ಬಳಿಕ ಪಾಕಿಸ್ತಾನದಿಂದ ಹಲವು ಜನರು ಗುಜರಾತ್, ರಾಜಸ್ಥಾನ, ಉತ್ತರಪ್ರದೇಶ, ಪಂಜಾಬ್‌ಗೆ ಬಂದಿದ್ದಾರೆ. ಬಾಂಗ್ಲಾದೇಶದಿಂದ ಕೂಡ ತ್ರಿಪುರಾ, ಪಶ್ಚಿಮಬಂಗಾಳ ಬಿಹಾರ್ ಹಾಗೂ ಇತರ ಅನೇಕ ರಾಜ್ಯಗಳಿಗೆ ಜನರು ಬಂದಿದ್ದಾರೆ. ಅವರು ನುಸುಳುಕೋರರು ಅಥವಾ ಭಯೋತ್ಪಾದಕರು ಅಲ್ಲ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News