ಅಸ್ಸಾಂ ಎನ್ಆರ್ ಸಿ ವಿವಾದ: ವಿದೇಶಗಳಲ್ಲಿಯೂ ಪ್ರತಿಭಟನೆ

Update: 2018-08-03 12:44 GMT

ಸೌದಿ ಅರೇಬಿಯ,ಆ.3: ಅಸ್ಸಾಮಿನಲ್ಲಿ 40 ಲಕ್ಷ ಮಂದಿಯನ್ನು ನಾಗರಿಕತೆ ಪಟ್ಟಿಯಿಂದ ಹೊರಗಿಡಲಾದ ಕ್ರಮದ ವಿರುದ್ಧ ಗಲ್ಫ್ ರಾಷ್ಟ್ರಗಳ ಸಹಿತ ವಿದೇಶಗಳಲ್ಲಿ ತೀವ್ರ ಪ್ರತಿಭಟನೆ ವ್ಯಕ್ತವಾಗಿದೆ. ಈ ಕುರಿತು ಅರಬ್ ಮಾಧ್ಯಮಗಳು ಇತ್ಯಾದಿಗಳಲ್ಲಿ ತೀವ್ರ ಟೀಕೆ ಕೇಳಿ ಬಂದ ಹಿನ್ನೆಲೆಯಲ್ಲಿ ಗಲ್ಫ್ನಲ್ಲಿ ಭಾರತದ ರಾಜತಾಂತ್ರಿಕ ಕೇಂದ್ರಗಳು ಸ್ಪಷ್ಟೀಕರಣ ನೀಡಲು ಮುಂದೆ ಬಂದಿವೆ.

ಅರಬ್ ಮಾಧ್ಯಮಗಳು ಈ ವಿಷಯಕ್ಕೆ  ಹೆಚ್ಚು ಒತ್ತು ನೀಡಿ ವರದಿ ಮಾಡಿದ್ದು, ನಂತರ ಕೆಲವರು ಮ್ಯಾನ್ಮಾರ್ ಸರಕಾರ ರೋಹಿಂಗ್ಯ ಮುಸ್ಲಿಮರ ವಿರುದ್ಧ  ಮಾಡಿದಂತೆ ಭಾರತ ಸರಕಾರ  ಸ್ವಂತ ಜನರನ್ನು ಬೇಟೆಯಾಡಲು ನಡೆಸುತ್ತಿರುವ ವ್ಯವಸ್ಥಿತ ಷಡ್ಯಂತ್ರ ಇದು ಎಂದು ಆರೋಪಿಸಿದ್ದಾರೆ.

ಪಾಶ್ಚಾತ್ಯ ಮಾಧ್ಯಮಗಳು ಕೂಡ ಅಸ್ಸಾಮ್‍ನ ನಾಗರಿಕತೆ ವಿವಾದವನ್ನು ಕ್ರೂರ ಮಾನವಹಕ್ಕು ಉಲ್ಲಂಘನೆ ಎಂದು ವರ್ಣಿಸಿವೆ. ಆದರೆ ಗಲ್ಫ್ ನಲ್ಲಿರುವ ಭಾರತದ ರಾಜತಾಂತ್ರಿಕ ಕೇಂದ್ರಗಳು ಇದು ಬರೇ ಅಪಪ್ರಚಾರವೆಂದು ಹೇಳಿವೆ.

ನಾಗರಿಕರ ಪಟ್ಟಿಯನ್ನು ಅಸ್ಸಾಂನ ಪ್ರತ್ಯೇಕ ಧರ್ಮ ವಿಭಾಗದವರ ವಿರುದ್ಧ ದ್ವೇಷದ ಕ್ರಮವೆಂದು ಬಿಂಬಿಸುವುದು ಸರಿಯಲ್ಲ ಎಂದು ದೂತವಾಸ ತಿಳಿಸಿದೆ. ನಾಗರಿಕ ಪಟ್ಟಿಯ ಕುರಿತು ಕಾನೂನು ಪ್ರಕಾರ ಕ್ರಮಕೈಗೊಳ್ಳಲಾಗಿದೆ. ಸುಪ್ರೀಂಕೋರ್ಟ್ ಸಹಿತ ವ್ಯವಸ್ಥೆಯ ಮೇಲ್ನೋಟದಲ್ಲಿ ಎಲ್ಲ  ಪ್ರಕ್ರಿಯೆಗಳು ನಡೆಯುತ್ತಿವೆ ಎಂದು ದೂತವಾಸದ ಪ್ರಕಟನೆ ತಿಳಿಸಿದೆ.

ಅಸ್ಸಾಂನ ನಾಗರಿಕರ ಪಟ್ಟಿಯನ್ನು ನಾಗರಿಕರ  ಹಕ್ಕು ಉಲ್ಲಂಘನೆಯಾಗಿ ಬಿಂಬಿಸಲ್ಪಡುತ್ತಿರುವುದು ಭಾರತಕ್ಕೆ ಹೊರಜಗತ್ತಿನೊಂದಿಗಿನ ಬಾಂಧ್ಯವ್ಯಕ್ಕೆ ತೊಡಕುಂಟಾಗಬಹುದೆಂಬ ಎಚ್ಚರಿಕೆಯಲ್ಲಿ ಕೇಂದ್ರ ಸರಕಾರ ಗಲ್ಫ್ ದೇಶಗಳ ಭಾರತದ  ರಾಜತಾಂತ್ರಿಕ ಕೇಂದ್ರಗಳಿಗೆ  ಪರ್ಯಾಯ ಕ್ರಮ ಕೈಗೊಳ್ಳಲು ಸೂಚಿಸಿದೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News