ಬೆಂಗಳೂರು: ಪ್ರೆಸ್‌ಕ್ಲಬ್ ಅಧ್ಯಕ್ಷರಾಗಿ ಸದಾಶಿವ ಶೆಣೈ ಅವಿರೋಧ ಆಯ್ಕೆ
Update: 2018-08-05 18:57 IST
ಬೆಂಗಳೂರು, ಆ. 5: ಬೆಂಗಳೂರು ಪ್ರೆಸ್‌ಕ್ಲಬ್ ಅಧ್ಯಕ್ಷರಾಗಿ ಕೆ.ಸದಾಶಿವ ಶೆಣೈ ಅವಿರೋಧವಾಗಿ ಆಯ್ಕೆಯಾಗಿದ್ದು, ಪ್ರಧಾನ ಕಾರ್ಯದರ್ಶಿಯಾಗಿ ಎಚ್.ವಿ.ಕಿರಣ್ ಚುನಾಯಿತರಾಗಿದ್ದಾರೆ.
ರವಿವಾರ ಬೆಳಗ್ಗೆ 9ರಿಂದ ಮಧ್ಯಾಹ್ನ 2ಗಂಟೆಯ ವರೆಗೆ ನಡೆದ ಚುನಾವಣೆಯಲ್ಲಿ ಉಪಾಧ್ಯಕ್ಷರಾಗಿ ಎಸ್.ಶ್ಯಾಮ್ ಪ್ರಸಾದ್, ಕಾರ್ಯದರ್ಶಿಯಾಗಿ ಆಯೆಷಾ ಖಾನಂ, ಜಂಟಿ ಕಾರ್ಯದರ್ಶಿಯಾಗಿ ಆನಂದ್ ಪಿ.ಬೈದನಮನೆ ಹಾಗೂ ಖಜಾಂಚಿಯಾಗಿ ಬಿ.ಎನ್.ರಮೇಶ್ ಆಯ್ಕೆಯಾಗಿದ್ದಾರೆ.
ಕಾರ್ಯಕಾರಿ ಸಮಿತಿ ಸದಸ್ಯರಾಗಿ ಕೆ.ಎಸ್.ಸೋಮಶೇಖರ್ (ಸೋಮಣ್ಣ), ಅಲ್ಪೈಡ್ ಟೆನ್ನಿಸನ್, ಅನಂತಸುಬ್ರಹ್ಮಣ್ಯಂ ಕೆ., ಲಕ್ಷ್ಮಿಪ್ರಸನ್ನ ಬಾಬು, ಎಸ್.ಕೆ.ನಾಗರಾಜ್, ಎಚ್.ಜಿ.ವಿರೂಪಾಕ್ಷಪ್ಪ, ಎಂ.ಎ.ಜ್ಯೋತಿ (ಮಹಿಳೆ ಮೀಸಲು-ಅವಿರೋಧ) ಆಯ್ಕೆಯಾಗಿದ್ದಾರೆ ಎಂದು ಪ್ರೆಸ್‌ಕ್ಲಬ್ ಚುನಾವಣಾಧಿಕಾರಿ ಪ್ರಕಟಿಸಿದ್ದಾರೆ.