ಸರಕಾರಿ ಬಸ್ ಬರಲಿ

Update: 2018-08-06 18:31 GMT

ಮಾನ್ಯರೇ,

ಬಜ್ಪೆೆಯಿಂದ ಬೈಕಂಪಾಡಿ ಕೈಗಾರಿಕಾ ವಲಯಕ್ಕೆ ಕೆಲಸಕ್ಕೆ ಹೋಗುವ ಜನರಿಗೆ ಈ ಮಾರ್ಗವಾಗಿ ಸಂಚರಿಸುವ ಬಸ್ಸುಗಳ ಸಂಖ್ಯೆ ವಿರಳವಾದ್ದರಿಂದ ಬಹಳಷ್ಟು ತೊಂದರೆಯಾಗುತ್ತಿದೆ.. ಅಲ್ಲದೆ ರಸ್ತೆ ವ್ಯವಸ್ಥೆಯು ಕೂಡಾ ಅತ್ಯಂತ ಕೆಟ್ಟಸ್ಥಿತಿಯಲ್ಲಿರುವ ಕಾರಣ ಖಾಸಗಿಯವರು ಈ ರಸ್ತೆಯಲ್ಲಿ ಬಸ್ಸು ಸಂಚಾರ ಆರಂಭಿಸುವ ಬಗ್ಗೆ ಹಿಂದೇಟು ಹಾಕುತ್ತಿದ್ದಾರೆ. ಸೂಕ್ತ ಸಂಚಾರ ವ್ಯವಸ್ಥೆಯ ತೊಂದರೆಯಿಂದಾಗಿ ಬಹಳಷ್ಟು ಜನ ಸಮಯಕ್ಕೆ ಸರಿಯಾಗಿ ಕೆಲಸಕ್ಕೆ ಹಾಜರಾಗುವಲ್ಲಿ ವಿಫಲರಾಗಿ ತೊಂದರೆ ಅನುಭವಿಸುತ್ತಿದ್ದಾರೆ. ಬೆಳಗ್ಗೆ ಕೆಲಸಕ್ಕೆ ಹಾಜರಾಗುವಲ್ಲಿ ವಿಫಲರಾದರೆ ಸಂಜೆ ಮನೆಯನ್ನು ತಲುಪುವಲ್ಲಿ ವಿಳಂಬವಾಗಿ ತೊಂದರೆಯನ್ನು ಅನುಭವಿಸುವುದು ಮಾಮೂಲು. ಬಹಳಷ್ಟು ಹೆಣ್ಣುಮಕ್ಕಳು ಕೈಗಾರಿಕಾ ವಲಯಕ್ಕೆ ಕೆಲಸಕ್ಕೆ ಹೋಗುತ್ತಾರೆ. ಸೂಕ್ತ ಬಸ್ಸಿನ ವ್ಯವಸ್ಥೆ ಇಲ್ಲದ ಕಾರಣ ಇವರು ಸಂಜೆ 5ಗಂಟೆಗೆ ಕೆಲಸ ಬಿಟ್ಟರೂ ಮನೆಯನ್ನು ತಲುವುವಲ್ಲಿ ಕತ್ತಲಾಗುವುದರಿಂದ ಬಹಳಷ್ಟು ತೊಂದರೆಯನ್ನು ಅನುಭವಿಸುತ್ತಾರೆ

ಆದ್ದರಿಂದ ಸಂಬಂಧಿತರು ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಬೆಳಗ್ಗೆ 9ಗಂಟೆಯ ಸಮಯಕ್ಕೆ ಬೈಕಂಪಾಡಿ ವಲಯವನ್ನು ತಲುಪುವಂತೆ ಹಾಗೂ ಸಂಜೆ 5ರಿಂದ 6ರ ಮೊದಲು ಬೈಕಂಪಾಡಿಯಿಂದ ಹೊರಡುವಂತೆ ಸಾಕಷ್ಟು ಸರಕಾರಿ ಬಸ್ಸುಗಳ ಸಂಚಾರ ಆರಂಭಿಸಬೇಕಾಗಿದೆ.

Writer - -ರಾಜೇಶ್ ಎಚ್., ಬಜ್ಪೆ

contributor

Editor - -ರಾಜೇಶ್ ಎಚ್., ಬಜ್ಪೆ

contributor

Similar News