ಇವಿಎಂ ನಮಗೆ ಬೇಕೇ?

Update: 2018-08-08 18:38 GMT

ಮಾನ್ಯರೇ,
ಮುಂದಿನ ಲೋಕಸಭಾ ಚುನಾವಣೆಯಲ್ಲಿ ಇಲೆಕ್ಟ್ರಾನಿಕ್ ಮತ ಯಂತ್ರಗಳನ್ನು ಬದಿಗಿಟ್ಟು, ಇವುಗಳ ಬದಲಾಗಿ ಬ್ಯಾಲೆಟ್ ಪೇಪರ್‌ಗಳ ಮೂಲಕವೇ ಚುನಾವಣೆ ನಡೆಸಬೇಕೆಂಬ ಕೂಗು ಹೆಚ್ಚುತ್ತಿದೆ. ಇದಕ್ಕೆ ಕಾರಣವೆಂದರೆ ಇವಿಎಂ ಮೂಲಕ ಚುನಾವಣೆಯಲ್ಲಿ ಬಹಳಷ್ಟು ವಂಚನೆ ಮತ್ತು ಅಕ್ರಮ ನಡೆಯುತ್ತಿದೆ ಎಂಬ ದೇಶವಾಸಿಗಳ ಆರೋಪ.

ಇದನ್ನು ಸಮರ್ಥಿಸುವಂತೆ ಹಲವಾರು ಫಲಿತಾಂಶಗಳು ನಮಗೆ ಅಚ್ಚರಿ ಹುಟ್ಟಿಸುತ್ತಿವೆ. ಇತ್ತೀಚೆಗೆ ಕರ್ನಾಟಕದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಇಂತಹ ಇವಿಎಂ ದುರುಪಯೋಗಗಳ ಬಗ್ಗೆ ಆರೋಪ-ಪ್ರತ್ಯಾರೋಪ ನಡೆದಿದೆ. ಹಾಗಿರುವಾಗ ನಂಬಿಕೆಗೆ ಅರ್ಹವಲ್ಲದ ಇಂತಹ ಮತಯಂತ್ರಗಳು ನಮಗೆ ಬೇಕೇ? ಭಾರತಕ್ಕಿಂತ ಹೆಚ್ಚಿನ ಅಭಿವೃದ್ಧಿ ಸಾಧಿಸಿರುವ ದೇಶಗಳು ಚುನಾವಣೆಗಳಿಗಾಗಿ ಇನ್ನೂ ಬ್ಯಾಲೆಟ್ ಪೇಪರ್ ಉಪಯೋಗಿಸುತ್ತಿದ್ದಾರೆ. ಹಾಗಿರುವಾಗ ನಾವು ಮಾತ್ರ ಮಾನವ ಕೈಚಳಕ ತೋರಿಸಬಹುದಾದ ಇಂತಹ ಯಂತ್ರಗಳನ್ನು ಬಳಕೆಮಾಡುವುದು ಯಾಕೆ?
ಹಾಗಾಗಿ ಮುಂದಿನ ಚುನಾವಣೆಯಲ್ಲಿ ಇಂತಹ ಯಂತ್ರಗಳನ್ನು ಮೂಲೆಗೆ ಸರಿಸಿ ಹಿಂದಿದ್ದ ಬ್ಯಾಲೆಟ್ ಪೇಪರ್‌ಗಳ ವ್ಯವಸ್ಥೆಯನ್ನೇ ಜಾರಿಗೆ ತರಬೇಕಾಗಿದೆ.

Writer - -ಜಾಫರ್ ಪಾತೂರು

contributor

Editor - -ಜಾಫರ್ ಪಾತೂರು

contributor

Similar News