ಬೆಂಗಳೂರು: ಹಜ್ ಯಾತ್ರೆ ಹೆಸರಿನಲ್ಲಿ ವಂಚನೆ; ಆರು ಮಂದಿ ಬಂಧನ

Update: 2018-08-09 15:29 GMT

ಬೆಂಗಳೂರು, ಆ.9: ಪವಿತ್ರ ಹಜ್ ಯಾತ್ರೆ ಹೆಸರಿನಲ್ಲಿ ಸಾರ್ವಜನಿಕರಿಂದ ಹಣ ಪಡೆದು ವಂಚಿಸಿದ ಆರೋಪದ ಮೇಲೆ ತಿಲಕನಗರ ಠಾಣಾ ಪೊಲೀಸರು ಆರು ಜನರನ್ನು ಬಂಧಿಸಿ, 114 ಯಾತ್ರಿಗಳ ಪಾಸ್‌ಪೋರ್ಟ್‌ಗಳನ್ನು ಜಪ್ತಿ ಮಾಡಿದ್ದಾರೆ.

ತಿಲಕ್ ನಗರದ ಹರೀಮ್ ಟ್ರಾವೆಲ್ಸ್ ಮಾಲಕ ಶರೀಫ್, ಅವರ ಮಕ್ಕಳಾದ ಮುಹಮ್ಮದ್ ರಿಝ್ವಾನ್ ಮತ್ತು ರಹ್ಮಾನ್, ತೌಸೀಫ್, ಮುಹಮ್ಮದ್ ಮಾಝ್ಹಾ, ಮುಹಮ್ಮದ್ ಉಮೈರ್ ಬಂಧಿತ ಆರೋಪಿಗಳೆಂದು ಪೊಲೀಸರು ತಿಳಿಸಿದ್ದಾರೆ.

ಸುಮಾರು 114 ಹಜ್ ಯಾತ್ರಾರ್ಥಿಗಳಿಂದ 2 ಲಕ್ಷ ರೂ., 3 ಲಕ್ಷ ರೂ.ಸೇರಿದಂತೆ ಕೋಟ್ಯಂತರ ರೂಪಾಯಿ ಹಣ ಪಡೆದು ಪಾಸ್‌ಪೋರ್ಟ್‌ಗಳನ್ನು ಸಹ ತೆಗೆದುಕೊಂಡಿದ್ದರು. ಆದರೆ, ಇತ್ತೀಚೆಗೆ ಟ್ರಾವೆಲ್ಸ್‌ನ ಕಚೇರಿಗೆ ಬೀಗಹಾಕಲಾಗಿತ್ತು. ಇದರಿಂದ ಕಂಗಾಲಾದ ಹಜ್ ಯಾತ್ರಾರ್ಥಿಗಳು ತಿಲಕ್‌ನಗರ ಪೊಲೀಸರಿಗೆ ದೂರು ನೀಡಿದ್ದರು.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ತಿಲಕ್‌ನಗರ ಠಾಣಾ ಪೊಲೀಸರು ಟ್ರಾವೆಲ್ಸ್ ಮಾಲಕ ಮತ್ತು ಇತರ ಆರೋಪಿಗಳಿಗೆ ತೀವ್ರ ಶೋಧ ನಡೆಸಿ ಬಂಧಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News