ಬೆಂಗಳೂರು: 1298 ಬಿಎಂಟಿಸಿ ಬಸ್‌ಗಳು ಗುಜರಿಗೆ

Update: 2018-08-09 16:27 GMT

ಬೆಂಗಳೂರು, ಆ.8: ಬೃಹತ್ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗೆ ಸೇರಿದ ಒಂದು ಸಾವಿರಕ್ಕೂ ಅಧಿಕ ಬಸ್‌ಗಳನ್ನು ಗುಜರಿಗೆ ಹಾಕಲು ಬಿಎಂಟಿಸಿ ಮುಂದಾಗಿದೆ.

ಬ್ರೇಕ್ ಫೇಲ್ ಆಗುವುದು, ರಸ್ತೆ ಮಧ್ಯೆ ಕೆಟ್ಟು ನಿಲ್ಲುವುದು, ಬಸ್ ಬಾಗಿಲು ಉತ್ತಮ ಸ್ಥಿತಿಯಲ್ಲಿ ಇಲ್ಲದಿರುವುದು ಇನ್ನಿತರೆ ಸಮಸ್ಯೆಗಳು ಎದುರಾಗಿತ್ತು. ಹಾಗಾಗಿ 1298 ಬಿಎಂಟಿಸಿ ಬಸ್‌ಗಳಿಗೆ ಗುಜರಿಗೆ ಹಾಕಲು ಬಿಎಂಟಿಸಿ ಮುಂದಾಗಿದೆ. ಸಂಚಾರ ಆರಂಭಿಸಿ 11 ವರ್ಷವಾಗಿರುವ ಬಸ್‌ಗಳು, 8.5 ಲಕ್ಷ ಕಿ.ಮೀ ಸಂಚರಿಸಿರುವ ಬಸ್‌ಗಳು ಗುಜರಿಗೆ ಬೀಳಲಿವೆ. 2017-18ನೇ ಸಾಲಿನಲ್ಲಿ 1,398 ಬಸ್‌ಗಳನ್ನು ಗುಜರಿಗೆ ಹಾಕಲಾಗಿತ್ತು.

ನಿಗಮದ ಪ್ರಕಾರ ಪ್ರತಿ ವರ್ಷ ಬಸ್‌ಗಳನ್ನು ಗುಜರಿಗೆ ಹಾಕಲಾಗುತ್ತದೆ. ಕೆಲ ಬಸ್‌ಗಳು 8.50 ಲಕ್ಷ ಕಿ.ಮೀ ಹಾಗೂ 11 ವರ್ಷ ಪೂರೈಸಿದರೂ ಸುಸ್ಥಿತಿಯಲ್ಲಿರುತ್ತದೆ. ಆದರೂ ಕಾರ್ಯಾಚರಣೆ ಮಾಡಲು ಸಾಧ್ಯವಿಲ್ಲ. ಬಸ್‌ನ ಯಾವ ಭಾಗಗಳು ಸುಸ್ಥಿತಿಯಲ್ಲಿದೆ ಎಂಬುದನ್ನು ಗುರುತಿಸಿ ಅದನ್ನು ಕಳಚಿಕೊಂಡು ಬಳಿಕ ಹರಾಜಿಗೆ ಇರಿಸಲಾಗುತ್ತದೆ ಎಂದು ಬಿಎಂಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.

ಕಳಚಿದ ಬಿಡಿ ಭಾಗಗಳಿಗೆ ಗರಿಷ್ಠ 2 ಲಕ್ಷ ರೂ ದೊರೆಯಬಹುದು. ಪ್ರತಿ ವರ್ಷ ಹೊಸ ಬಸ್‌ಗಳನ್ನು ಖರೀದಿಸುವುದುರಿಂದ ಕಾರ್ಯಾಚರಣೆಗೆ ಸಮಸ್ಯೆಯಾಗುವುದಿಲ್ಲ. ಕಳೆದ ವರ್ಷ 1406 ಹೊಸ ಬಸ್‌ಗಳನ್ನು ಖರೀದಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News