ಟ್ರೈನ್ ಟು ಪಾಕಿಸ್ತಾನ್: ಆ.11,12 ರಂದು ಓದು ಅಭಿಯಾನ ಸಮಾರೋಪ

Update: 2018-08-09 16:29 GMT

ಬೆಂಗಳೂರು, ಆ.9: ಪುಸ್ತಕಗಳ ಓದಿನ ಮೂಲಕ ಅರಿವಿನ ಪಯಣ ನಡೆಸುತ್ತಿರುವ ಕೋಶ ಓದು-ದೇಶ ನೋಡು ಬಳಗದ ಟ್ರೈನ್ ಟು ಪಾಕಿಸ್ತಾನ್ ಅಭಿಯಾನದ ಸಮಾರೋಪ ಸಮಾರಂಭವನ್ನು ಆ.11 ಮತ್ತು 12 ರಂದು ಎರಡು ದಿನಗಳ ಕಾಲ ಮಂಗಳೂರಿನ ಕಣಾಂಗಲ್‌ನಲ್ಲಿ ಹಮ್ಮಿಕೊಳ್ಳಲಾಗಿದೆ.

ಬಳಗವು ಈ ಬಾರಿ ದೇಶ ವಿಭಜನೆಯ ಸಂದರ್ಭದ ಸಾಹಿತ್ಯವನ್ನು ಮುಖ್ಯ ವಿಷಯವನ್ನಾಗಿ ಆರಿಸಿಕೊಂಡು ಓದು ಅಭಿಯಾನ ಆರಂಭಿಸಲಾಗಿತ್ತು. ಇದಕ್ಕಾಗಿ ಟ್ರೈನ್ ಟು ಪಾಕಿಸ್ತಾನ್ ಮೊದಲಿಗೆ ಆಯ್ಕೆ ಮಾಡಿಕೊಳ್ಳಲಾಗಿತ್ತು. ಅನಂತರ ತಮಸ್, ಮಾಂಟೋ ಕಥೆಗಳು, ದೇಶ ವಿಭಜನೆ ಕಥೆಗಳು ಹಾಗೂ ಬರ್ಕ್‌ವೈಟ್ ಕಂಡ ಭಾರತ ಕೃತಿಗಳನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು. ಸತತ ಒಂದು ತಿಂಗಳ ಕಾಲ ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಯುವ ಸಮುದಾಯ ಈ ಅಭಿಯಾನದಲ್ಲಿ ಭಾಗಿಯಾಗಿದ್ದು, ಈ ಸಮಾರಂಭದೊಂದಿಗೆ ಅಭಿಯಾನ ಮುಕ್ತಾಯವಾಗಲಿದೆ.

ಎರಡು ದಿನಗಳ ಕಾಲ ನಡೆಯಲಿರುವ ಸಮಾರೋಪದಲ್ಲಿ ಉಪನ್ಯಾಸ, ಸಂವಾದ, ಗುಂಪುಚರ್ಚೆ, ನಾಟಕ, ಹಾಡು, ಕವಿಗೋಷ್ಠಿ ಸೇರಿದಂತೆ ಇನ್ನಿತರೆ ಕಾರ್ಯಕ್ರಮಗಳಿರಲಿವೆ. ಸಂಶೋಧಕ ಪ್ರೊ.ರಹಮತ್ ತರೀಕೆರೆ, ಅಂಕಣಕಾರ ದಿನೇಶ್ ಅಮೀನ್‌ಮಟ್ಟು ಮಾರ್ಗದರ್ಶನ ನೀಡಲಿದ್ದು, ಡಾ.ಹಸೀನಾ ಖಾದ್ರಿ, ಶ್ರೀಪಾದ ಭಟ್, ಡಾ.ರಾಮಮೂರ್ತಿ, ಡಾ.ಕಿರಣ್ ಗಾಜನೂರು ಸೇರಿದಂತೆ ಹಲವರು ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News