ಲಡಾಯಿ ಸೀಖ್‌ಲೆ...

Update: 2018-08-11 14:26 GMT

ಲಡಾಯಿ ಸೀಖ್‌ಲೇ ಇದು ಸುಮಿತ್ ಸಮೋಸ್‌ನ ಅಧಿಕೃತ ರ‍್ಯಾಪ್ ವೀಡಿಯೊದ ಟೈಟಲ್ ಆಗಿದೆ. ಸ್ವಲ್ಪ ಸಮಯದ ನಂತರ ಅದು ಬಿಡುಗಡೆಯಾಗಲಿದೆ. ಲಡಾಯಿ ಸೀಖ್‌ಲೇ ಎಂದರೆ ‘ಹೋರಾಡುವುದನ್ನು ಕಲಿತುಕೋ’ ಎಂದರ್ಥ. ಕ್ವೀಡ್ ಮೀಡಿಯಾ ಎಂಬ ಸಂಸ್ಥೆಯು ಈ ವೀಡಿಯೊದ ಟ್ರೇಲರ್ ರಿಲೀಸ್ ಮಾಡಿದೆ. ಅದು ಈಗಾಗಲೇ ಸಾಮಾಜಿಕ ಮಾಧ್ಯಮಗಳಲ್ಲಿ ಗಮನ ಸೆಳೆದಿದ್ದು, ಸಾವಿರಾರು ಮಂದಿ ವೀಕ್ಷಿಸಿದ್ದಾರೆ. ಅಷ್ಟೇ ಉತ್ಸಾಹದಲ್ಲಿ ಶೇರ್ ಕೂಡ ಆಗಿದೆ.

ಲಡಾಯಿ ಸೀಖ್‌ಲೆ... ಇದರ ಒಂದು ಸಾಲಾದ ಆದಿ ರಾತ್ ಆಝಾದಿ ಫೂಂಕತಿ ಛಪ್ಪರ್ ತೇರಿ ಬಸ್ತಿಯೋಂ ಮೇ (ಮಧ್ಯರಾತ್ರಿಯಲ್ಲಿ ಸ್ವಾತಂತ್ರವು ನಿನ್ನ ಊರಿನ ಸೂರುಗಳನ್ನು ಸುಡುತ್ತಿದೆ) ಎಂಬ ಸಾಲನ್ನು ನೋಡಿದರೆ, 1997ರ ಮಧ್ಯರಾತ್ರಿಯಲ್ಲಿ ಬಿಹಾರದಲ್ಲಿ ರಣವೀರ ಸೇನೆಯಿಂದ ನಡೆದ 58 ದಲಿತ ಜನರ ಹತ್ಯಾಕಾಂಡ ನೆನಪಿಸುವ ಲಕ್ಷ್ಮಣ್‌ಪುರ್ ಬಾಥೆಯು ಸಾಂಕೇತಿಕವಾಗಿ ಕಾಣಿಸುತ್ತದೆ.

ನನ್ ರ‍್ಯಾಪ್  ಅಂದ್ರೆ

ನೀವ್ ಲೆಕ್ಕಕ್ಕಿಲ್ಲ

ನಿಮ್ ಮ್ಯೂಸಿಕ್ ನನ್ ಬುಕ್ಕಲ್ಲಿಲ್ಲ

ನನ್ ರ್ಯಾಪ್ ನನ್ ಜನ್ರ್ ನೋವ್ ಹೇಳಕ್ಕಷ್ಟೇ

ಯಾಕೆಂದ್ರೆ ನಿಮ್ ನೀಚ್ ಕೆಲಸ

ಮನ್‌ಷ್ಯನ್ ಬೆತ್ಲೆ ಮಾಡೋದಷ್ಟೆ...

ಯಾವುದೇ ಸಮುದಾಯಗಳ ಆಚಾರ-ವಿಚಾರಗಳು ಸಂಸ್ಕೃತಿಯ ಹೆಸರಿನಲ್ಲಿ ದಬ್ಬಾಳಿಕೆಗೆ ಒಳಪಟ್ಟಾಗ ಅದರ ಪ್ರತಿರೋಧದ ಸ್ವರೂಪಗಳು ಆಗಲೂ ಈಗಲೂ ಸಾಹಿತ್ಯದ ಮೂಲಕ, ಹಾಡು ಥಿಯೇಟರ್‌ಗಳ ಮೂಲಕ ಶಾರ್ಪ್ ಆಗಿ ಹೊಮ್ಮಿವೆ. ಭಾರತದ ಅಂಚಿನಲ್ಲಿರುವ ಸಮುದಾಯಗಳಿಗೆ ಸಂಸ್ಕೃತಿಯ ಹೊಡೆತಗಳು ಬೀಳುತ್ತಲೆ ಇವೆ. ದಿಲ್ಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯ (ಜೆಎನ್‌ಯು)ದ 24 ವರ್ಷದ ಸುಮಿತ್ ಸಮೋಸ್ ಎಂಬ ಸ್ನಾತಕೋತ್ತರ ವಿದ್ಯಾರ್ಥಿಯಿಂದ ಈ ಪ್ರತಿರೋಧದ ರೀತಿಯ ರ್ಯಾಪ್ ಪರಿಚಯಿಸಲ್ಪಟ್ಟಿದೆ. ಈ ಮೇಲಿನ ಸಾಲುಗಳು ಇದೇ ಪ್ರತಿರೋಧದ ಕಿಚ್ಚಿನಿಂದ ರ್ಯಾಪ್ ಆಗಿ ಪರಿವರ್ತನೆಗೊಂಡಿದೆ. ಈ ಮೂಲಕ ಜಾತಿವಾದದ ವಿರುದ್ಧ ಹೋರಾಡಲು ಮತ್ತು ಶಕ್ತಿಯುತ ಜಾತಿ-ವಿರೋಧಿ ನಿರೂಪಣೆಯನ್ನು ಬೆಳೆಸುವ ಅತ್ಯಂತ ಪರಿಣಾಮಕಾರಿ ಅಸ್ತ್ರವಾಗಿ ರೂಪುಗೊಂಡಿದೆ. ಜೀವನದ ಕಟು ಅನುಭವಗಳಿಂದ ಇವನ ರ್ಯಾಪ್ ಗಾಯನ ದಲಿತ ಬಹುಜನ ಪ್ರತಿಪಾದನೆಯ ಉದಯೋನ್ಮುಖ ಶಕ್ತಿಶಾಲಿ ಧ್ವನಿಯಾಗಿ ಜನಪ್ರಿಯಗೊಂಡಿದೆ.

ಬಿರ್ಸಾ ಅಂಬೇಡ್ಕರ್ ಫುಲೆ ವಿದ್ಯಾರ್ಥಿ ಸಂಘ (BAPSA)ದ ಜೊತೆ ಗುರುತಿಸಿಕೊಂಡಿರುವ ಸಮೋಸ್ ರ್ಯಾಪ್ ಗಾಯನವನ್ನು ತನ್ನ ಸಮುದಾಯದ ಜನರ ಸಂವೇದನೆಗಳನ್ನು, ನೋವನ್ನು, ಅವಮಾನಗಳನ್ನು ಹೊರಜಗತ್ತಿಗೆ ತಿಳಿಸಲು ಒಂದು ಪ್ರಬಲ ಮಾಧ್ಯಮವನ್ನಾಗಿ ಅಭಿವೃದ್ಧಿಪಡಿಸಿಕೊಂಡಿದ್ದಾನೆ. ಪರಿಶಿಷ್ಟ ಜಾತಿಗೆ ಸೇರಿದ ಸಮೋಸ್ ತನ್ನ ಜೀವನದ ಪ್ರತಿಯೊಂದು ಹಂತದಲ್ಲೂ ಜಾತಿ ತಾರತಮ್ಯದ ಜೊತೆಗೆ ತುಚ್ಛೀಕರಿಸಿ ದೂರವಿರಿಸುವುದನ್ನು ಅನುಭವಿಸಿದವನು.

ಒಡಿಶಾದ ಖೊರಾಪುಟ್ ಜಿಲ್ಲೆಯ ತೆಂತುಲಿಪದರ್(Tentulipadar)  ಎಂಬ ಹಳ್ಳಿಯವನಾಗಿದ್ದಾನೆ ಈ ಸುಮಿತ್ ಸುಮೋಸ್. ಹುಟ್ಟಿನಿಂದಲೂ ಅತ್ಯಾಚಾರ ದೌರ್ಜನ್ಯಗಳನ್ನು ಅನುಭವಿಸಿದವನು. ಈತನಿರುವ ಪ್ರದೇಶವು ಮಾವೋವಾದಿ ಬಂಡಾಯಗಾರರಿಂದ ಪ್ರಭಾವಿತವಾಗಿದ್ದು, ಇದೇ ಕಾರಣಕ್ಕಾಗಿ ಸೈನ್ಯದ ಕಾರ್ಯಾಚರಣೆಗಳನ್ನೂ ನೋಡಿ ಬೆಳೆದವನು. ಬಾಲ್ಯದಲ್ಲಿನ ಗ್ರಾಮ ರಂಗಭೂಮಿಯ ಅವನ ಒಡನಾಟವು ಮುಂದೆ ರ್ಯಾಪಿಂಗ್‌ನಲ್ಲಿ ಹಿಡಿತ ಸಾಧಿಸಲು ಸಹಾಯ ಮಾಡಿತು. ರಂಗಭೂಮಿಯ ತರಬೇತಿಯು ಮೂಲಭೂತವಾಗಿ ನನಗೆ ಒಂದು ರಿದಂನಲ್ಲಿ ಹಲವು ನಿಮಿಷಗಳವರೆಗೆ ಭಂಗವಿಲ್ಲದೇ ಕೊನೆಯವರೆಗೆ ಮಾತನಾಡುವುದನ್ನು ಕಲಿಸಿತು, ಅದೂ ಯಾವುದೇ ನೋಟ್ಸ್, ಪೇಪರ್‌ಗಳಿಲ್ಲದೆ ಎಂದು ವಿಶೇಷವಾಗಿ ನೆನೆಯುತ್ತಾನೆ.

ಟೂ ಸರ್ಕಲ್ಸ್.ನೆಟ್‌ನೊಂದಿಗೆ ತನ್ನ ಅನುಭವಗಳ ಬಗ್ಗೆ ಮಾತನಾಡುತ್ತಾ ಸಮೋಸ್ ಹೇಳುವುದೇನೆಂದರೆ ನನ್ನ ಹಿನ್ನೆಲೆಯ ಕಾರಣದಿಂದ ನಾನು ಯಾವಾಗಲೂ ಕ್ರಿಮಿನಲ್ ಎಂದೇ ಗುರುತಿಸಲ್ಟಟ್ಟಿದ್ದೆ. ಇದು ನನ್ನ ಜೀವನದ ಪೂರ್ವಗ್ರಹವಾಗಿ ಪ್ರತಿಬಿಂಬಿತ ವಾಗಿದೆ ಮತ್ತು ಇದು ನನ್ನೊಬ್ಬನದೇ ಕಥೆಯಲ್ಲ. ಸಾವಿರಾರು ವರ್ಷಗಳಿಂದ ದಲಿತ ಸಮುದಾಯದವರು ಎದುರಿಸಿದ ಎಲ್ಲರ ಕಥೆ ಯಾಗಿದೆ ಎಂದು.

ವಿಭಿನ್ನ ಅಭಿವ್ಯಕ್ತಿ ಮಾಧ್ಯಮಗಳ ಜನಪ್ರಿಯತೆಯನ್ನು ನೋಡಿದ ಮೇಲೆ, ರ್ಯಾಪ್‌ನ ಮಾಧ್ಯಮವು ತನ್ನ ಭಾವನೆಗಳ ಅಭಿವ್ಯಕ್ತಿಗೆ ಅತ್ಯುತ್ತಮ ಮಾಧ್ಯಮವೆಂದು ಸಮೋಸ್ ಕಂಡುಕೊಂಡ. ಅಲ್ಲದೆ ಇದು ದೊಡ್ಡ ಪ್ರಮಾಣದಲ್ಲಿ ಜನರನ್ನು ತಲುಪುತ್ತದೆ ಎಂದು ಹೇಳುವುದರ ಜೊತೆಗೆ, ತನ್ನ ಬಾಲ್ಯದಿಂದಲೂ ಹೊಂದಿದ್ದ ಸಾಮಾಜಿಕ, ರಾಜಕೀಯ ತಿಳುವಳಿಕೆಯಿಂದಾಗಿ ಈ ನಿರ್ಣಯಕ್ಕೆ ಬಂದೆ ಎನ್ನುವುದನ್ನು ಆತ ಮರೆಯುವುದಿಲ್ಲ. ಸಮೋಸ್ ಕಪ್ಪು ಜನರ ಹಿಪ್-ಹಾಪ್ ಕಲಾವಿದರನ್ನು ನೋಡಿ ಅದರಲ್ಲಿ ಜಾತಿ ವಿರೋಧಿ ವಿಷಯಗಳ ಬಗ್ಗೆ ಬರೆಯುತ್ತಿದ್ದುದನ್ನು ಗಮನಿಸಿದ್ದ. ಆ ಹಿಪ್-ಹಾಪ್ ಸಾಹಿತ್ಯದಲ್ಲಿ ಒಂದು ಲಯ ಇದ್ದರೂ ಪ್ರಾಯೋಗಿಕವಾಗಿಲ್ಲದೆ ಅಕ್ಷರಶಃ ಎಂಬಂತಿದ್ದು ಅದನ್ನು ಪಾಲಿಶ್ ಮಾಡುವ ಅಗತ್ಯವಿದೆ ಎಂದೆನಿಸಿತು. ಸಮೋಸ್ ತನ್ನ ರಿದಂ ನಿಂದ ದೇಶದಲ್ಲಿ ನಡೆಯುತ್ತಿರುವ ಜಾತಿ ಹಿಂಸಾಚಾರಗಳನ್ನು ಟಾರ್ಗೆಟ್ ಮಾಡಿದ್ದಾನೆ. ದೇಶದ ಯಾವುದೇ ಭಾಗದಲ್ಲಿ ಜಾತಿ ಆಧಾರಿತ ಹಿಂಸೆ ನಡೆದಿರಲಿ ಅದನ್ನು ತನ್ನ ರ್ಯಾಪಿಂಗ್ ಒಳಗೆ ಸೇರಿಸಲು ಪ್ರಯತ್ನಿಸುತ್ತಾನೆ.

ಲಡಾಯಿ ಸೀಖ್‌ಲೇ ಇದು ಸುಮಿತ್ ಸಮೋಸ್‌ನ ಅಧಿಕೃತ ರ್ಯಾಪ್ ವೀಡಿಯೊದ ಟೈಟಲ್ ಆಗಿದೆ. ಸ್ವಲ್ಪ ಸಮಯದ ನಂತರ ಅದು ಬಿಡುಗಡೆಯಾಗಲಿದೆ. ಲಡಾಯಿ ಸೀಖ್‌ಲೇ ಎಂದರೆ ಹೋರಾಡುವುದನ್ನು ಕಲಿತುಕೋ ಎಂದರ್ಥ. ಕ್ವೀಡ್ ಮೀಡಿಯಾ ಎಂಬ ಸಂಸ್ಥೆಯು ಈ ವೀಡಿಯೊದ ಟ್ರೇಲರ್‌ಅನ್ನು ರಿಲೀಸ್ ಮಾಡಿದೆ. ಅದು ಈಗಾಗಲೇ ಸಾಮಾಜಿಕ ಮಾಧ್ಯಮಗಳಲ್ಲಿ ಗಮನ ಸೆಳೆದಿದ್ದು, ಸಾವಿರಾರು ವ್ಯೆಗಳನ್ನು ಪಡೆದಿದೆ. ಅಷ್ಟೇ ಜೋಶ್‌ನಲ್ಲಿ ಶೇರ್ ಕೂಡ ಆಗಿದೆ.

ಅದರ ಒಂದು ಸಾಲಾದ ಆಧಿ ರಾತ್ ಆಝಾದಿ ಫೂಂಕತಿ ಛಪ್ಪರ್ ತೇರಿ ಬಸ್ತಿಯೋಂ ಮೇ (ಮಧ್ಯ ರಾತ್ರಿಯಲ್ಲಿ ಸ್ವಾತಂತ್ರವು ನಿನ್ನ ಊರಿನ ಸೂರುಗಳನ್ನು ಸುಡುತ್ತಿದೆ) ಎಂಬ ಸಾಲನ್ನು ನೋಡಿದರೆ, 1997ರಲ್ಲಿ ಬಿಹಾರದಲ್ಲಿ ರಣವೀರ ಸೇನೆಯಿಂದ ಮಧ್ಯರಾತ್ರಿಯಲ್ಲಿ ನಡೆದ 58 ದಲಿತ ಜನರ ಹತ್ಯಾಕಾಂಡ ನೆನಪಿಸುವ ಲಕ್ಷ್ಮಣ್‌ಪುರ್ ಬಾಥೆಯು ಸಾಂಕೇತಿಕವಾಗಿ ಕಾಣಿಸುತ್ತದೆ. ಸಮುದಾಯವು ದೌರ್ಜನ್ಯಕ್ಕೆ ಒಳಪಟ್ಟಿರುವುದನ್ನು, ಅವರು ಅನುಭವಿಸಿರುವ ಆಕ್ರಮಣವನ್ನು ದಾಳಿಯನ್ನು ನೋಡಿದಾಗ ನಮ್ಮ ಅಸ್ತಿತ್ವದ ಸಾರ ಏನೆಂದು ಬಹಳ ಸರಳ ಮತ್ತು ಸ್ಟಷ್ಟವಾಗಿ ತಿಳಿಯುತ್ತದೆ. ನಮ್ಮ ಅಸ್ತಿತ್ವದ ವಿನಾಶದೊಂದಿಗೆ ಅವರ ಅಸ್ತಿತ್ವವು ಉಳಿಯುತ್ತದೆ ಎಂಬುದನ್ನು ಫಿಲಾಸಫಿಕಲ್ ಆಗಿಯೂ ಸಮೋಸ್ ಮಾತನಾಡುತ್ತಾನೆ.

ಅದೇ ರ್ಯಾಪ್‌ನಲ್ಲಿ ಸಮೋಸ್, ಇಟಲಿಯ ಮಾರ್ಕ್ಸಿಸ್ಟ್ ಫಿಲಾಸಫರ್ ಆಂಟೋನಿಯೊ ಗ್ರಾಮ್ಷಿಯನ್ನು ಉಲ್ಲೇಖಿಸುತ್ತಾ, ಸಾಂಪ್ರದಾಯಿಕ ಬುದ್ಧಿಜೀವಿಗಳು ವರ್ಸಸ್ ಆರ್ಗ್ಯಾನಿಕ್ ಇಂಟಲೆಕ್ಚುಯಲ್ಸ್ ನಡುವಣ ಗ್ರಾಮ್ಷಿಯು ನಡೆಸಿದ ಚರ್ಚೆಯ ಸಾರದಂತೆ ಕಾಣುವ ಸಾಲುಗಳನ್ನು ಬರೆದಿದ್ದಾನೆ.. ಪಢೇ ಹೋ ಜೋ ಕಿತಾಬೋಂ ಮೇ, ಹಮ್ ಹರ್ ರೋಜ್‌ ಉಸ್‌ಕೋ ಜೀತೇ. ಅಸಲಿಯತ್ ಮೇ ಗ್ಯಾನ್ ಕ್ಯಾ ಹೇ ಹಮ್‌ಸೇ ಸೀಖ್‌ಲೇ (ಪುಸ್ತಕಗಳಲ್ಲಿ ನೀನು ಓದಿದ್ದನ್ನು ನಾವು ಪ್ರತಿದಿನವೂ ಜೀವಿಸುತ್ತೇವೆ. ನಿಜವಾದ ವಾಸ್ತವ ಜ್ಞಾನ ಏನೆಂಬುದನ್ನು ನಮ್ಮಿಂದ ಕಲಿತುಕೋ) ಎಂದು ನಾಟುವಂತೆ ತನ್ನ ರ್ಯಾಪ್‌ನಲ್ಲಿ ಹೇಳುತ್ತಾನೆ. ಮಾಂಗ್ ಮಾಂಗ್ ಕೆ ಥಕ್ ಗಯೇ, ಅಬ್ ಸಬ್ ಕುಛ್ ಲೇಂಗೆ ಛೀನ್ ಕೆ (ಬೇಡಿ ಬೇಡಿ ಸುಸ್ತಾದೆವು.. ಆದರೀಗ ಎಲ್ಲವನ್ನೂ ಕಸಿದುಕೊಂಡೇ ಪಡೆಯುವೆವು) ಎನ್ನುತ್ತಾ, ಪ್ರತಿರೋಧದ ಮೂಲಕ ಹೋರಾಟದ ಮೂಲಕ ಬದುಕಲೆತ್ನಿಸುವುದು ಉಪಯೋಗವಿಲ್ಲ.. ಇನ್ನೇನಿದ್ದರೂ ಇದೇ ಕೊನೆ ಪ್ರಯತ್ನ ಎಂಬಂತೆ ಬರೆದಿದ್ದಾನೆ.

ಸುಮೊಸ್‌ಗೆ ತನ್ನ ಕಲಾತ್ಮಕ ಅಭಿವ್ಯಕ್ತಿಯನ್ನು ಶಕ್ತಿಶಾಲಿಯಾಗಿಸಲು ಎರಡು ಕಾರಣಗಳಿಂದ ಸಾಧ್ಯವಾಗಿದೆ. ಒಂದು.. ಇದು ಭಾಷಣಗಳು ಲೇಖನಗಳಿಗಿಂತ ಹೆಚ್ಚು ಸುಲಭವಾಗಿ ಜನಸಾಮಾನ್ಯರಿಗೆ ತಲುಪುತ್ತದೆ ಮತ್ತು ಇದು ಜನರ ಮನಸ್ಸಿನಲ್ಲಿ ಪ್ರಜ್ಞೆಯನ್ನು ಮೂಡಿಸುತ್ತದೆ ಎಂಬುದು ಎರಡನೆಯದು. ಈತನ ಮನಸ್ಸಿನಲ್ಲಾಗುವ ಆಂತರಿಕ ಘರ್ಷಣೆಗಳೂ ಸಹ ರ್ಯಾಪ್ ಅನ್ನು ಅಭಿವ್ಯಕ್ತಿ ಮಾಧ್ಯಮವನ್ನಾಗಿ ಅಳವಡಿಸಿಕೊಳ್ಳಲು ಕಾರಣವಾಗಿದೆ. ಮಹಾರಾಷ್ಟ್ರದ ಸ್ಲಮ್‌ಗಳೇ ತುಂಬಿರುವ ಪ್ರದೇಶವಾದ ಧಾರಾವಿ, ನಾಲಾ ಸೋಪಾರದಲ್ಲಿ ವಾಸಿಸುವ ಹುಡುಗರು ವಿವಿಧ ವಿಷಯಗಳ ಮೇಲೆ ರ್ಯಾಪಿಂಗ್ ಮಾಡುತ್ತಾರೆ. ಅವರು ವ್ಯವಸ್ಥೆಯಲ್ಲಿನ ಅಧಿಕಾರ, ರಾಜಕೀಯ, ಭ್ರಷ್ಟತೆಯ ಕುರಿತು ರ್ಯಾಪಿಂಗ್ ಮಾಡುತ್ತಾರೆ. ಅಲ್ಲದೇ ಅದರಲ್ಲಿ ಸ್ಥಳೀಯ ಸಮಸ್ಯೆಗಳನ್ನು ಹೇಳಿಕೊಳ್ಳುತ್ತಿದ್ದಾರೆ. ಜೊತೆಗೆ, ಆ ರ್ಯಾಪ್‌ಗಳಲ್ಲಿ ಜಾತಿ ಮತ್ತು ವರ್ಗದ ವಿಷಯಗಳು ಏಕೆ ಬಂದಿಲ್ಲವೆಂದು ಆಶ್ಚರ್ಯಪಡುವಂತಿದೆ. ಇದೂ ಕೂಡ ಸಮೋಸ್‌ರ ಕಲಾತ್ಮಕತೆಯನ್ನು ಮುಂತೆಗೆದುಕೊಂಡು ಹೋಗಲು ಚಾಲನೆಗೊಳಿಸಿತು.

ಸವಲತ್ತು ಹೊಂದಿದ ಜನರು, ಜಾತಿ ಮತ್ತು ಅದರ ಸಂಬಂಧಿತ ಸಮಸ್ಯೆಗಳ ಕುರಿತು ಮಾತನಾಡಲು ಇಚ್ಛಿಸುವುದಿಲ್ಲ. ಕಲಾವಿದರೂ ಸಹ ಇಂತಹ ಸಮಸ್ಯೆಗಳನ್ನು ಸ್ಪರ್ಶಿಸದಂತೆ ಇವೇ ಸವಲತ್ತುಗಳು ಬಹುಶಃ ತಡೆಯುತ್ತಿವೆ ಎಂಬುದು ಸಮೋಸ್‌ರ ಅನಾಲಿಸಿಸ್. ಭಾರತೀಯ ಚಲನಚಿತ್ರ ಮತ್ತು ಸಂಗೀತ ಕಾರ್ಯಕ್ರಮಗಳಲ್ಲಿ ದಾರು- ಗಾಡಿ-ಲಡ್‌ಕಿ (ಹೆಂಡ-ಗಾಡಿ-ಹುಡುಗಿ) ರೀತಿಯ ಚೀಪ್ ರ್ಯಾಪ್‌ಗಳು ಚಾಲ್ತಿಯಲ್ಲಿರುವ ಸಮಯದಲ್ಲಿ ಸಮೋಸ್ ತನ್ನ ಉದ್ದೇಶವನ್ನು ತಲುಪಲು ಒಂದು ಕಲಾತ್ಮಕ ಯುದ್ಧವನ್ನೇ ಸಾರಬೇಕಾಗಿದೆ. ಈ ತರಹದ ಮೋಜಿನ ರ್ಯಾಪಿಂಗ್ ಗಾಯಕರು, ನಾವಿಲ್ಲಿ ಮಾತನಾಡುತ್ತಿರುವ ಜಾತಿ ಮತ್ತು ವರ್ಗಶೋಷಣೆಯನ್ನು ಅಡ್ರೆಸ್ ಮಾಡಲು ಬಯಸುವುದಿಲ್ಲ. ದಲಿತರು ಕಾರು ಹೊಂದಿರುವುದಿಲ್ಲ. ಉನ್ನತ ದರ್ಜೆಯ ಮದ್ಯವನ್ನು ಸ್ಪಾರ್ಕ್ಲಿಂಗ್ ಲಿಕ್ಕರನ್ನು ಕುಡಿಯುವುದಿಲ್ಲ. ಅವರು ದೇಸಿ ಚೀಪ್ ಮದ್ಯವನ್ನು ಕುಡಿಯುತ್ತಾರೆ ಮತ್ತು ಮನೆಗೆ ಹೋಗಿ ಪತ್ನಿಯರಿಗೆ ಹೊಡೆಯುವುದು ಬಡಿಯುವುದು ಮಾಡುತ್ತಾರೆ. ಆಧುನಿಕ ರ್ಯಾಪ್‌ಗಳು ಈ ದೇಶದ ದಲಿತರಿಗೆ ಆದರ್ಶ ರಾಜ್ಯದಂತೆ ಕಾಣುತ್ತವೆ.

ಆದರೂ ಆತ ತನ್ನದೇ ರ್ಯಾಪ್ ಆರಂಭಿಸಿದ್ದಾನೆ. ಈತನ ಪದಗಳು ಪ್ರೊಡಕ್ಷನ್ ಹೌಸ್‌ಗಳಿಗೆ ಮನರಂಜನೆ ನೀಡಲಾರದು. ಏಕೆಂದರೆ ಇಲ್ಲಿ ಗ್ಲಾಮರ್ ಇಲ್ಲ. ಆದರೆ ಆತ ಬೆಳೆಯಲು ತನ್ನ ಜನರ, ಜೊತೆಗಾರರ ಪ್ರೀತಿಯನ್ನು, ಸಾಮಾಜಿಕ ಮಾಧ್ಯಮವನ್ನು ಅವಲಂಬಿಸಿದ್ದಾನೆ. ತಾನು ಬೇಗನೆ ಬ್ರೇಕ್ ಪಡೆಯುತ್ತೇನೆ, ಅದರಿಂದ ಮತ್ತಷ್ಟು ಹೆಚ್ಚು ಜನರನ್ನು ತಲುಪಲು ಆತನಿಗೆ ಸಾಧ್ಯವಾಗಿದೆ. ಇಷ್ಟೆಲ್ಲಾ ಆದ ನಂತರ ರ್ಯಾಪರೋಂ ಕಿ ಭೀಡ್ ಮೇ ಅಪನಾ ನಯಾ ಸೀನ್ ಹೆ (ರ್ಯಾಪರ್‌ಗಳ ಜನಜಂಗುಳಿಯಲ್ಲಿ ನಮ್ಮ ಚಿತ್ರಣ ನವೀನವಾಗಿದೆ) ಎಂದು ಸಮೋಸ್ ಖುಷಿಯಾಗುತ್ತಾನೆ.

ತೀವ್ರ ರೀತಿಯ ಜಾತಿವಾದ ಅಸ್ತಿತ್ವದಲ್ಲಿರುವ ಭುವನೇಶ್ವರದಲ್ಲಿ, ಪ್ರೌಢಶಾಲೆಯ ಓದಿನ ಜೊತೆಗೆ ತನ್ನ ಖರ್ಚನ್ನು ಪೂರೈಸಲು ಚೌ-ಮೀನ್ ಎಂಬ ಶಾಪ್‌ನಲ್ಲಿ ಪಾರ್ಟ್ ಟೈಮ್ ಕೆಲಸ ಮಾಡುತ್ತಿದ್ದ. ಆ ಶಾಲೆಯಲ್ಲಿ ಒಬ್ಬ ಶಿಕ್ಷಕರ ಜೊತೆ ವಾಗ್ವಾದ ನಡೆದಿತ್ತು. ಸಮೋಸ್ ಪ್ರಕಾರ ಆ ಶಿಕ್ಷಕರು ಇವನನ್ನು ಕೀಳು ಜಾತಿಗೆ ಸೇರಿದವನೆಂದು ಟೀಕಿಸಿದ್ದರು. ನಿನ್ನ ತಲೆಯಲ್ಲಿ ಸೆಗಣಿ ತುಂಬಿದೆಯೆ? ಎಂದು ಶಿಕ್ಷಕರು ಕೇಳಿದ್ದರೆನ್ನುತ್ತಾನೆ. ಯಾವುದೇ ಶಿಕ್ಷಕರಿಂದಾಗಲೀ, ಸಹಪಾಠಿಗಳಿಂದಾಗಲೀ ತನಗೆ ಸಹಚರ್ಯ ಸಿಗಲಿಲ್ಲ, ಅಲ್ಲದೇ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ನನ್ನ ಯಶಸ್ಸನ್ನು ಜೀರ್ಣಿಸಿಕೊಳ್ಳಲು ಅವರಿಗೆ ಸಾಧ್ಯವಾಗಲಿಲ್ಲ. ಅವರೆಲ್ಲ ಸಾಮಾನ್ಯವಾಗಿ ಮೂರನೇ, ನಾಲ್ಕನೇ ಸ್ಥಾನದಲ್ಲಿರುತ್ತಿದ್ದರು ಎನ್ನುತ್ತಾನೆ.

ಎಲ್ಲದರಿಂದ ಬೇಸತ್ತ ಸಮೋಸ್ ಒಮ್ಮೆ ತನ್ನ ನೋಟ್‌ಬುಕ್‌ನ್ನು ಶಿಕ್ಷಕನ ಮೇಲೆ ಎಸೆದು ತರಗತಿಯಿಂದ ಹೊರನಡೆದರು. ಪರಿಣಾಮವಾಗಿ ಶಾಲೆಯ ರಿಸೆಪ್ಷನಿಸ್ಟ್‌ರಿಂದ ಕಪಾಳಕ್ಕೆ ಏಟು ಬಿದ್ದಿದ್ದಲ್ಲದೇ ನಂತರ ಅಮಾನತುಗೊಳಿಸಲಾಯಿತು. ಇದಾದ ಒಂದು ತಿಂಗಳ ನಂತರ ಅಂತಿಮ ಪರೀಕ್ಷೆಗಳು ನಡೆಯಲಿದ್ದವು. ಸಮೋಸ್ ಓದಲು ಮನೆಗೆ ತೆರಳಿದ. ಫಲಿತಾಂಶ ಬಂದಾಗ ಅವನು ಶಾಲೆಗೇ ಎರಡನೆಯ ಸ್ಥಾನ ಪಡೆದಿದ್ದ. ನಂತರ ತನ್ನ ಮಾರ್ಕ್ಸ್‌ಕಾರ್ಡ್‌ನ್ನು ತೆಗೆದುಕೊಳ್ಳಲು ಶಾಲೆಗೆ ಹೋದಾಗ, ಆಡಳಿತ ಸಿಬ್ಬಂದಿಗೆ ನೀವು ಎಲ್ಲಿರುವಿರೋ ಅಲ್ಲಿಯೇ ಇರುವಿರಿ, ನಾನು ಅಲ್ಲಿಂದ ಮುಂದೆ ಹೋಗುತ್ತಿರುವೆ ಎಂದು ಹೇಳಿ ಬಂದನಂತೆ. ಅವರು ನನ್ನ ಸ್ಥಾನವನ್ನು ನನಗೆ ತೋರಿಸಲು ಬಯಸಿದರು. ಆದರೆ ನಾನು ಅವರಿಗದನ್ನು ತೋರಿಸಲು ಬಯಸಿದ್ದೆ ಎಂದು ಹೇಳುವ ಗಟ್ಸ್ ತೋರುತ್ತಾನೆ. ಇವನ ಪ್ರಕಾರ, ಈ ಆತ್ಮವಿಶ್ವಾಸ ಅಥವಾ ಆರೋಗೆನ್ಸಿಯು ದಬ್ಬಾಳಿಕೆ ವಿರೋಧಿಸಿ ಘನತೆ ಉಳಿಸಿಕೊಳ್ಳುವ ಸಲುವಾಗಿ ಪ್ರಜ್ಞಾಪೂರ್ವಕವಾಗಿ ಬೆಳೆಯುತ್ತದೆ. ಇದು ಇಂದು ಅವನಿಗೆ ಲಾಭಪ್ರದವಾಗಿದೆ.

ಈಗ ಸ್ವಲ್ಪವೇ ಸಮಯದ ಮೊದಲು ಸಮೋಸ್ ಪ್ಯಾರಿಸ್‌ನಲ್ಲಿ, ವ್ಯಂಗ್ಯಚಿತ್ರಕಾರ ಅಮೆಲೀ ಬೊನಿನ್ ಸಹಯೋಗದೊಂದಿಗೆ ಔರೆಲಿ ಚಾರ್ನ್, ಕ್ಯಾರೋಲಿನ್ ಗಿಲೆಟ್ ಅವರಿಂದ ಆಯೋಜಿಸಲ್ಪಟ್ಟ, ರೇಡಿಯೊ ನೇರಪ್ರಸಾರ ಮತ್ತು ಸಂವಾದದಲ್ಲಿ ತನ್ನ ಸಂಗೀತ ಕಾರ್ಯಕ್ರಮ ನೀಡಿದ್ದಾನೆ. ಎರಡು ದಿನಗಳ ಕಾಲ ನಡೆದ ಈ ಕಾರ್ಯಕ್ರಮವು, ಸಮಾಜದ ಅಂಚಿನಲ್ಲಿರುವ ಸ್ವತಃ ಕಟು ಅನುಭವ ಹೊಂದಿದ್ದ ವಿಶ್ವದಾದ್ಯಂತದ ಕಲಾವಿದರನ್ನು ಒಳಗೊಂಡಿತ್ತು. ಇದೊಂದು ರೀತಿಯ ಜೀವಂತಿಕೆಯ ಕೊಡುಕೊಳ್ಳುವಿಕೆಯಾಗಿತ್ತು. ಸಮೋಸ್ ನೀಡಿದ ಕಾರ್ಯಕ್ರಮದಲ್ಲಿ ಪೋಷಕರು-ಮಕ್ಕಳು ಮತ್ತು ಸೆನೆಗಲ್, ಸಿರಿಯಾ, ಫ್ರಾನ್ಸ್‌ನಿಂದ ಬಂದ ಅತಿಥಿಗಳು ಸೇರಿದ್ದರು.

ಒಟ್ಟಾರೆ, ಅವನಿಗೆ ಈ ಸಂದರ್ಭವು ಅದೃಷ್ಟದ್ದಾಗಿದೆ. ಸ್ಪಾನಿಶ್ ಭಾಷೆ ಮತ್ತು ಸಾಹಿತ್ಯದಲ್ಲಿ ಜೆಎನ್‌ಯುದಿಂದ ಸ್ನಾತಕೋತ್ತರ ಪದವಿ ಪಡೆದಿದ್ದಾನೆ. ಆದರೆ ಕಳೆದ ವರ್ಷ ಕಾಲೇಜಿನ ಆಡಳಿತ ವಿರುದ್ಧ ಬಿರ್ಸಾ ಅಂಬೇಡ್ಕರ್ ಫುಲೆ ವಿದ್ಯಾರ್ಥಿ ಸಂಘಟನೆ (BAPSA) ಹಾಗೂ ಜೆಎನ್‌ಯು ಮೂಲದ ದಲಿತ ಸಂಘಟನೆಗಳು ಸಂಘಟಿಸಿದ್ದ ಎರಡು ಪ್ರತಿಭಟನೆಗಳಲ್ಲಿ ಪಾಲ್ಗೊಂಡಿದ್ದಕ್ಕಾಗಿ ಪದವಿ ನೀಡುವುದನ್ನು ತಡೆಹಿಡಿಯಲಾಗಿತ್ತು.

ಪ್ಯಾರಿಸ್‌ನ ಸಾಧನೆ ನಂತರ, ಸಮೋಸ್ ತಾಯಿಯವರು ದಕ್ಷಿಣ ಒಡಿಶಾದಲ್ಲಿ ಖೊರಾಪುಟ್‌ನಿಂದ ವೀಡಿಯೊ ಕಾನ್ಫರೆನ್ಸ್ ಮೂಲಕ ಮಾತನಾಡಿದರು. ಒಡಿಶಾ- ಆಂಧ್ರಪ್ರದೇಶ ಗಡಿಭಾಗದ ಖೊರಾಪುಟ್‌ನಲ್ಲಿ ಕೇಂದ್ರ ಮೀಸಲು ಪೊಲೀಸ್ ಪಡೆಯು ಮಾವೋವಾದಿಗಳೊಂದಿಗೆ ಸಂಘರ್ಷ ನಡೆಸಲು ಖಾಯಂ ಆಗಿ ತಳವೂರಿತ್ತು. ತಮ್ಮ ರಾಜಕೀಯ ಲಾಭಕ್ಕಾಗಿ ಮಾವೋವಾದಿಗಳು, ಈ ಪ್ರದೇಶದ ದಲಿತರು ಮತ್ತು ಬುಡಕಟ್ಟು ಜನರ ನಡುವೆ ವಿಭಜನೆ ತರುತ್ತಿದ್ದಾರೆಂದು, ಡೊಮ್ ಜಾತಿಗೆ ಸೇರಿದ ಸಮೋಸ್ ಆರೋಪಿಸುತ್ತಾನೆ. ಇಲ್ಲಿ ಬುಡಕಟ್ಟು ಜನಾಂಗಗಳಿಗಿಂತ ದಲಿತರು ಸ್ವಲ್ಪಮಟ್ಟಿಗೆ ಉತ್ತಮ ಸ್ಥಿತಿಯಲ್ಲಿದ್ದಾರೆ. ದಲಿತರಿಗೆ ಸೇರಿರುವ ಭೂಮಿಯನ್ನು ಬುಡಕಟ್ಟಿನವರು ಕದ್ದಿದ್ದಾರೆ ಎಂಬಂತೆ ದಲಿತರ ನಡುವೆ ಮಾವೋವಾದಿಗಳು ಬಿಂಬಿಸುತ್ತಿದ್ದಾರೆ. ವಾಸ್ತವದಲ್ಲಿ ಅದು ಬುಡಕಟ್ಟಿನವರಿಗೆ ಸೇರಿರುವ ಭೂಮಿಯಾಗಿದೆ ಎಂದು ಹೇಳುತ್ತಾನೆ.

ಬಿ.ಎ.ಪಿ.ಎಸ್.ಎ. ಮತ್ತು ಇತರ ದಲಿತ ವಿದ್ಯಾರ್ಥಿ ಗುಂಪುಗಳು ಭಾವಿಸಿರುವಂತೆ, ಸುಮೋಸ್ ಸಹ ಎಡಪಂಥೀಯ ಗುಂಪುಗಳು ಮೇಲ್ಜಾತಿಗೆ ಸೇರಿದ ಕಾಮ್ರೇಡರ ನೇತೃತ್ವ ದಲ್ಲಿ ನಡೆಸಲ್ಪಡುತ್ತಿದ್ದು, ಅವರು ಕೇಂದ್ರಬಿಂದುವಾಗಲು ಅವಕಾಶ ನೀಡುವುದಿಲ್ಲ ಎಂದು ನಂಬಿದ್ದು, ಜೆಎನ್‌ಯುಗೆ ಮೊದಲಿಗೆ ನಾನು ಬಂದಾಗ ಎಡಪಂಥೀಯ ವಿದ್ಯಾರ್ಥಿ ಗುಂಪಿನೊಂದಿಗಿದ್ದು ಅವರು ನನ್ನನ್ನು ಪೋಸ್ಟರ್‌ಗಳನ್ನು ಅಂಟಿಸಲು ನನಗೆ ಅವಕಾಶ ನೀಡಿದ್ದರು ಎಂದು ಸಹ ಹೇಳುತ್ತಾನೆ.

ಹರೆಯದ ದಿನಗಳಿಂದ ಸಂಗೀತವನ್ನು ಉಸಿರಾಡಿದ ಸಮೋಸ್ ಜೆಎನ್‌ಯುಗೆ ಬಂದ ಮೇಲೆ ರ್ಯಾಪ್‌ನಲ್ಲಿ ಇನ್ನಷ್ಟು ತೊಡಗಿಸಿಕೊಂಡು ಕೌಶಲ್ಯವನ್ನು ಬೆಳೆಸಿಕೊಂಡಿದ್ದಾನೆ. ಟುಪಾಕ್(Tupac) ನಂತಹ ಕಪ್ಪು ರ್ಯಾಪರ್‌ಗಳಿಂದ ಪ್ರೇರಣೆ ಪಡೆದು ಕೆಲ ವರ್ಷಗಳ ಹಿಂದೆ, ಆನ್‌ಲೈನ್‌ನಲ್ಲಿ ತನ್ನ ರ್ಯಾಪನ್ನು ಕೂಡ ಅಪ್‌ಲೋಡ್ ಮಾಡಲಾರಂಭಿಸಿದನು. ನಂತರ ಆನ್‌ಲೈನ್‌ನಲ್ಲಿ ಸಿಕ್ಕ ಗಮನಾರ್ಹ ಪ್ರತಿಕ್ರಿಯೆಯಿಂದ ಸ್ಫೂರ್ತಿಗೊಂಡ ಸಮೋಸ್ ಇತ್ತೀಚೆಗೆ ತನ್ನ ಹಾಡುಗಳನ್ನು ಯೂಟ್ಯೂಬ್ ಚಾನೆಲ್‌ನಲ್ಲಿ ಲಾಂಚ್ ಮಾಡಿದ್ದಾನೆ.

ಭಾರತದಲ್ಲಿ ಕೆಳ ಜಾತಿ ವಿದ್ಯಾರ್ಥಿಗಳ ವಿರುದ್ಧ ಸಾಂಸ್ಥಿಕ ಮಟ್ಟದ ತಾರತಮ್ಯವು ಮಾಮೂಲಾಗಿ ನಡೆಯುವಂತೆ, 2016ರಲ್ಲಿ ಹೈದರಾಬಾದ್ ಸೆಂಟ್ರಲ್ ಯೂನಿವರ್ಸಿಟಿಯಲ್ಲಿ ದಲಿತ ವಿದ್ಯಾರ್ಥಿ ಕಾರ್ಯಕರ್ತನಾಗಿದ್ದ ರೋಹಿತ್ ವೇಮುಲಾ ಜೊತೆಗೂ ನಡೆಯಿತು. ಈ ಕಾರಣಕ್ಕಾಗಿ ವೇಮುಲಾ ಆತ್ಮಹತ್ಯೆ ಮಾಡಿಕೊಂಡ ದುರಂತ ಘಟನೆ ನಡೆಯಿತು. ಇದಕ್ಕೆ ಸಂಬಂಧಿಸಿದಂತೆ ಈ ವರ್ಷದಾರಂಭದಲ್ಲಿ ಹೈದರಾಬಾದ್ ಸೆಂಟ್ರಲ್ ಯೂನಿವರ್ಸಿಟಿಯಲ್ಲಿ, ರೋಹಿತ್ ವೇಮುಲಾ ಸ್ಮರಣಾರ್ಥ ಆಯೋಜಿಸ ಲಾಗಿದ್ದ ಕಾರ್ಯಕ್ರಮದಲ್ಲಿ ಸುಮಿತ್ ಸಮೋಸ್ ಕೂಡ ಭಾಗವಹಿಸಿದ್ದರು.

Writer - ಆಶಾ ಸಿಂಗ್, ಶಿವಮೊಗ್ಗ

contributor

Editor - ಆಶಾ ಸಿಂಗ್, ಶಿವಮೊಗ್ಗ

contributor

Similar News