×
Ad

ಬೆಂಗಳೂರು: ಅನಧಿಕೃತ ಬ್ಯಾನರ್ ಅಳವಡಿಕೆ; 16 ಜನರು ವಶಕ್ಕೆ

Update: 2018-08-12 19:08 IST

ಬೆಂಗಳೂರು, ಆ.12: ರಾಜಧಾನಿ ಬೆಂಗಳೂರು ವ್ಯಾಪ್ತಿಯಲ್ಲಿ ಕಾನೂನು ಉಲ್ಲಂಘಿಸಿ ಫೆಕ್ಸ್ ಮತ್ತು ಬ್ಯಾನರ್ ಹಾಕಿದ್ದ ಆರೋಪದಡಿ 16 ಜನರನ್ನು ವಶಕ್ಕೆ ಪಡೆಯಲಾಗಿದೆ.

ನಗರದ ಕಾಡುಗೋಡಿ ಠಾಣಾ ಪೊಲೀಸರು ಐವರನ್ನು ವಶಕ್ಕೆ ಪಡೆದರೆ, ಮಾರತಹಳ್ಳಿ ಠಾಣಾ ಪೊಲೀಸರು 11 ಜನರನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ ಎನ್ನಲಾಗಿದೆ.

ಪ್ರತಿಷ್ಠಿತ ಚಿನ್ನಾಭರಣ ಸಂಸ್ಥೆ ಸೇರಿ ಇತರೆ ಪ್ರತಿಷ್ಠಿತ ಕಂಪೆನಿಗಳು ಹಾಗೂ ಶಾಲಾ-ಕಾಲೇಜುಗಳ ವಿರುದ್ಧವೂ ಮೊಕದ್ದಮೆ ದಾಖಲು ಮಾಡಿಕೊಳ್ಳಲಾಗಿದೆ. ದೂರು ದಾಖಲಾದ ಕಂಪೆನಿಗಳ ಅಧಿಕಾರಿಗಳನ್ನು ಕೂಡ ಪೊಲೀಸರು ಬಂಧಿಸಿದ್ದಾರೆ. ಕಾಡುಗೋಡಿ ಪೊಲೀಸರಿಂದ ಐವರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News