ಬಿಬಿಎಂಪಿ: ಮುಂದುವರೆದ ಫ್ಲೆಕ್ಸ್ ತೆರೆವು ಕಾರ್ಯಾಚರಣೆ

Update: 2018-08-12 14:59 GMT

ಬೆಂಗಳೂರು, ಆ.12: ಬಿಬಿಎಂಪಿ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಹಾಕಿರುವ ಫ್ಲೆಕ್ಸ್ ಹಾಗೂ ಭಿತ್ತಿಪತ್ರಗಳ ತೆರವು ಕಾರ್ಯಾಚರನೆ ರಜೆ ದಿನ ರವಿವಾರವೂ ಮುಂದುವರೆದಿದೆ.

ನಗರದ ಹಲಸೂರು ಮೆಟ್ರೋ ನಿಲ್ದಾಣ ಸುತ್ತಮುತ್ತಲಿನ ಪ್ರದೇಶದಲ್ಲಿ ಬಿಬಿಎಂಪಿ ಮೇಯರ್ ಆರ್.ಸಂಪತ್ ರಾಜ್ ಸೇರಿ ಅಧಿಕಾರಿಗಳ ನೇತೃತ್ವದಲ್ಲಿ ತೆರವು ಕಾರ್ಯಾಚರಣೆ ನಡೆಯಿತು. ಬಳಿಕ ನಿಯಮ ಉಲ್ಲಂಘಿಸಿ ಯಾರೋ ಪರಿಸರ ಹಾಳು ಮಾಡಲು ಮುಂದಾಗಬಾರದೆಂದು ಮೇಯರ್ ಸಾರ್ವಜನಿಕರಿಗೆ ಮನವಿ ಮಾಡಿದರು.

ಮೇಯರ್ ಬೇಸರ: ಕನ್ನಡದಲ್ಲೇ ಶೇ.60 ರಷ್ಟು ಮಾಹಿತಿಗಳು ಇರಬೇಕು ಎನ್ನುವ ಕಾನೂನು ಇದೆ. ಆದರೆ, ವಾರ್ಡ್ ಮಟ್ಟದ ಅಧಿಕಾರಿಗಳು ಪಾಲನೆ ಮಾಡಿಲ್ಲ. ಅಷ್ಟೇ ಅಲ್ಲದೆ, ಫ್ಲೆಕ್ಸ್, ಭಿತ್ತಿಪತ್ರಗಳನ್ನು ತೆಗೆಯುವಂತೆ ಈಗಾಗಲೇ ಸೂಚನೆ ನೀಡಿದ್ದರೂ ನಿಯಮ ಪಾಲಿಸಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಅದೇ ರೀತಿ, ಜೀವನ್ ಭೀಮಾ ನಗರ, ಹೊಯ್ಸಳನಗರ ವಾರ್ಡ್ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸಿದ ಮೇಯರ್, ಸ್ಥಳೀಯರ ಅಧಿಕಾರಿಗಳ ಕರ್ತವ್ಯ ಲೋಪವಾಗಿದೆ ಎಂದು ಕಿಡಿಕಾರಿದರು. ತಪ್ಪಿತಸ್ಥರ ವಿರುದ್ಧ ಅಧಿಕಾರಿಗಳು ದಿಟ್ಟ ಕ್ರಮ ಕೈಗೊಳ್ಳದಿದ್ದರೆ, ಕಠಿಣ ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದರು.

ಸ್ವಾತಂತ್ರ ದಿನಾಚರಣೆ ಹಿನ್ನಲೆ ಶಾಲಾ-ಕಾಲೇಜು ಮಕ್ಕಳು ಹಾಗೂ ಮಳಿಗೆಗಳಲ್ಲಿ ಪ್ಲಾಸ್ಟಿಕ್ ಧ್ವಜ ಮಾರಾಟ ಮಾಡದಂತೆ ಎಲ್ಲರೂ ಕ್ರಮ ಕೈಗೊಳ್ಳಬೇಕೆಂದು ಸಂಪತ್ ರಾಜ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News