×
Ad

ಹಿರಿಯ ವಕೀಲ ಪದವಿಗೆ ಅರ್ಜಿ ಆಹ್ವಾನಿಸಿದ ಹೈಕೋರ್ಟ್

Update: 2018-08-12 21:32 IST

ಬೆಂಗಳೂರು, ಆ.12: ಸೇವಾ ಅನುಭವ ಆಧರಿಸಿ ವಕೀಲರಿಗೆ ಅಧಿಕೃತವಾಗಿ ಹಿರಿಯ ವಕೀಲ (ಡೆಸಿಗ್ನೆಟೆಡ್ ಸೀನಿಯರ್ ಕೌನ್ಸೆಲ್) ಪದವಿ ನೀಡುವ ಸಲುವಾಗಿ ಹೈಕೊರ್ಟ್ ಅರ್ಜಿಗಳನ್ನು ಆಹ್ವಾನಿಸಿದೆ.

ಆ.31ರೊಳಗೆ ಅರ್ಜಿ ಅಥವಾ ಪ್ರಸ್ತಾವ ಸಲ್ಲಿಸಲು ಅವಕಾಶ ಕಲ್ಪಿಸಿ ರಿಜಿಸ್ಟ್ರಾರ್ ಜನರಲ್ ಅಶೋಕ್ ನಿಜಗಣ್ಣವರ್ ಪ್ರಕಟಣೆ ಹೊರಡಿಸಿದ್ದಾರೆ. ಈ ಪದವಿ ಗಳಿಸಲು ವಕೀಲರು ಕನಿಷ್ಠ 10 ವರ್ಷ ಹೈಕೊರ್ಟ್‌ನಲ್ಲಿ ವಕೀಲಿಕೆ ಮಾಡಿರಬೇಕು. ಸೀನಿಯರ್ ಕೌನ್ಸೆಲ್ ಗೌರವ ನೀಡಲು, ಹೈಕೊರ್ಟ್ ಮುಖ್ಯ ನ್ಯಾಯಮೂರ್ತಿ ನೇತೃತ್ವದಲ್ಲಿ ಸಮಿತಿ ರಚನೆಯಾಗಲಿದ್ದು, ಇಬ್ಬರು ಹಿರಿಯ ನ್ಯಾಯಮೂರ್ತಿಗಳು, ರಾಜ್ಯ ಅಡ್ವೊಕೇಟ್ ಜನರಲ್, ಹೈಕೊರ್ಟ್‌ನಲ್ಲಿ ವಕೀಲಿಕೆ ನಡೆಸುತ್ತಿರುವ ಇಬ್ಬರು ಹಿರಿಯ ವಕೀಲರು ಸಮಿತಿಯಲ್ಲಿ ಇರಲಿದ್ದಾರೆ.

ಹೇಗೆ ಆಯ್ಕೆ: ಸಲ್ಲಿಕೆಯಾಗುವ ಅರ್ಜಿಗಳನ್ನು ಸಮಿತಿ ಪರಿಶೀಲಿಸಲಿದೆ. ಅಗತ್ಯಬಿದ್ದರೆ ಸಮಿತಿ ಸದಸ್ಯರ ನಡುವೆ ಮತದಾನ ನಡೆಸಲು ಅವಕಾಶವಿದೆ. ಆಯ್ಕೆಗಾಗಿ ಅಂಕ ಪದ್ಧತಿ ಇರಲಿದ್ದು, 10ರಿಂದ 20ವರ್ಷ ವಕೀಲಕೆ ಮಾಡಿದ್ದರೆ 10 ಅಂಕ, 20ವರ್ಷ ಮೆಲ್ಪಟ್ಟಿದ್ದರೆ 20 ಅಂಕ, ವಾದ ಮಂಡನೆ ಹಾಗೂ ತೀರ್ಪುಗಳಲ್ಲಿ ಹೆಸರು ಉಲ್ಲೇಖಕ್ಕೆ 40 ಅಂಕ, ವಕೀಲರ ಪಬ್ಲಿಕೇಷನ್‌ಗೆ 15 ಅಂಕ, ಸಂದರ್ಶನ ಹಾಗೂ ಸಮಾಲೊಚನೆ ಆಧರಿಸಿ ವಕ್ತಿತ್ವ ಮತ್ತು ಅರ್ಹತೆಗೆ 25 ಅಂಕ ನೀಡಲಾಗುವುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News