×
Ad

ಸಾಹಿತಿಗಳು ತುಳಿತಕ್ಕೊಳಗಾದವರ ಮಿಡಿತವಾಗಿರಬೇಕು: ರಾಜ್ಯಸಭಾ ಸದಸ್ಯ ಹನುಮಂತಯ್ಯ

Update: 2018-08-12 21:35 IST

ಬೆಂಗಳೂರು, ಆ.12: ಸಾಹಿತಿಗಳು ಸಮಾಜಮುಖಿಯಾಗಿ ತುಳಿತಕ್ಕೊಳಗಾದವರ ಮಿಡಿತಕ್ಕೆ ಸದಾ ಸ್ಪಂದಿಸಬೇಕು ಎಂದು ಹಿರಿಯ ಸಾಹಿತಿ, ರಾಜ್ಯಸಭಾ ಸದಸ್ಯ ಡಾ.ಎಲ್ ಹನುಮಂತಯ್ಯ ಸಲಹೆ ನೀಡಿದ್ದಾರೆ.

ರವಿವಾರ ನಗರದ ಚಾಮರಾಜಪೇಟೆಯ ಕಸಾಪ ಸಭಾಂಗಣದಲ್ಲಿ ಏರ್ಪಡಿಸಿದ್ದ ಕಸಾಪ ದತ್ತಿ ಪ್ರಶಸ್ತಿಗಳ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ಕಟ್ಟಕಡೆಯ ಜನರ ಪರವಾಗಿ ಬರೆಯುವವನೆ ನಿಜವಾದ ಸಾಹಿತಿ. ಯಾವ ಲೇಖಕ ಸತ್ಯ ಪಕ್ಷಪಾತಿಯಾಗಿ, ಗುಣ ಪಕ್ಷಪಾತಿಯಾಗಿ ಇರುವನೊ ಆತ ಶ್ರೇಷ್ಠ ಕವಿಯಾಗುತ್ತಾನೆ ಎಂದರು. ದತ್ತಿ ಪ್ರಶಸ್ತಿಗಳು ಯುವ ಪ್ರತಿಭೆಗಳನ್ನು ಸೃಜನಶೀಲರನ್ನಾಗಿ ಮಾಡುವುದಲ್ಲದೆ, ಕನ್ನಡ ಸಾಹಿತ್ಯ ಪರಂಪರೆಯನ್ನು ಉಳಿಸಿ-ಬೆಳಸಿ ಸಂಪತ್ಭರಿತ ಸಾಹಿತ್ಯವನ್ನು ರೂಪಿಸುತ್ತಿದೆ. ಅಷ್ಟೇ ಅಲ್ಲದೆ, ಪ್ರಶಸ್ತಿಗಳಿಂದ ವಂಚಿತರಾದ ಪ್ರತಿಭೆಗಳಿಗೆ ನೀಡುವ ದತ್ತಿ ಪ್ರಶಸ್ತಿಗಳು ಯುವಕರಿಗೆ ಸ್ಫೂರ್ತಿ, ಹೀಗೆ ಕನ್ನಡ ಸಾಹಿತ್ಯದ ಕೃಷಿಯನ್ನು ಮಾಡಲು ಪರಿಷತ್ತು ಪ್ರೋತ್ಸಾಹಿಸುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.

ಇನ್ನೂ ದೇಶದ ಶೇ.85ರಷ್ಟು ಸಂಪತ್ತು ಶೇ.1ರಷ್ಟು ಜನರ ಬಳಿಯಿದೆ. ಶೇ.85ರಷ್ಟು ಜನರು ಯಾವುದೇ ಸಂಪತ್ತಿಲ್ಲದೆ ನಿತ್ಯದ ಒಂದು ಹೊತ್ತಿನ ಊಟಕ್ಕೂ ಪರದಾಡಿತ್ತಿದ್ದಾರೆ. ಈ ಅಂತರವನ್ನು ನೋಡಿದರೆ, ನಾವು ಎಂತಹ ಅಭಿವೃದ್ಧಿಯ ದೇಶದಲ್ಲಿದ್ದೇವೆ ಅನ್ನಿಸುತ್ತಿದೆ. ಯಾವ ಅಭಿವೃದ್ಧಿ ಸಮಾಜದ ಕಟ್ಟಕಡೆಯ ಜನರಿಗೆ ತಲುಪುವುದಿಲ್ಲವೊ ಅದು ಹುಸಿಯ ಭ್ರಮೆಯ ಅಭಿವೃದ್ಧಿ. ಹಾಗೂ ದೇಶದಲ್ಲಿ ಏನು ಸಮಸ್ಯೆಗಳೆ ಇಲ್ಲ ಎಂದು ಸರಕಾರ ಬಿಂಬಿಸುತ್ತಿದೆ ಎಂದು ಹನುಮಂತಯ್ಯ ಅಸಮಾಧಾನ ವ್ಯಕ್ತಪಡಿಸಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಮನು ಬಳಿಗಾರ್ ಮಾತನಾಡಿ, ಬ್ಯಾಂಕಿಂಗ್ ಮತ್ತು ಕೇಂದ್ರದ ಪ್ರಮುಖ ಪರೀಕ್ಷೆಗಳು ಭಾರತದ 22 ಪ್ರಾದೇಶಿಕ ಭಾಷೆಗಳಲ್ಲಿ ತರಲು ಹೋರಾಟ ಮಾಡುವ ಅಗತ್ಯವಿದೆ ಎಂದರು.

‘ಅಸ್ಪಶ್ಯತೆ, ಜಾತಿಪದ್ದತಿಯ ಭಯವಿದ್ದ ಹಳ್ಳಿಗರಿಗೆ, ಈಗ ತಂತ್ರಜ್ಞಾನದ ಅಸ್ಪಶ್ಯತೆ ಕಾಡುತ್ತಿದೆ’

-ಡಾ.ಎಲ್.ಹನುಮಂತಯ್ಯ ರಾಜ್ಯಸಭಾ ಸದಸ್ಯ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News