×
Ad

ರಂಗ ಕಲಾವಿದರಿಗೂ ಕನಿಷ್ಠ ವೇತನ ಸಿಗಬೇಕು: ಡಾ.ಎಲ್. ಹನುಮಂತಯ್ಯ

Update: 2018-08-13 21:21 IST

ಬೆಂಗಳೂರು, ಆ.13: ರಂಗಾಯಣದಂತ ಹವ್ಯಾಸಿ ರಂಗಭೂಮಿ ಕಲಾವಿದರಿಗೆ ಸಿಗುವ ಕನಿಷ್ಠ ವೇತನ, ವೃತ್ತಿ ರಂಗಭೂಮಿ ಕಲಾವಿದರಿಗೂ ಸಿಗಬೇಕು ಎಂದು ಸಾಹಿತಿ ಹಾಗೂ ರಾಜ್ಯಸಭಾ ಸದಸ್ಯ ಡಾ.ಎಲ್.ಹನುಮಂತಯ್ಯ ಸರಕಾರವನ್ನು ಆಗ್ರಹಿಸಿದರು.

ಸೋಮವಾರ ನಗರದ ರವೀಂದ್ರ ಕಲಾಕೇತ್ರದಲ್ಲಿ ವಿಶ್ವಜ್ಯೋತಿ ಶ್ರೀ ಪಂಚಾಕ್ಷರಿ ನಾಟ್ಯಸಂಘ ವತಿಯಿಂದ ಏರ್ಪಡಿಸಿದ್ದ ವೃತ್ತಿ ರಂಗವೈಭವ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ವೃತ್ತಿ ರಂಗಭೂಮಿಯಲ್ಲಿ ಕೆಲಸ ಮಾಡುವ ಕಲಾವಿದರು ಆರ್ಥಿಕ ಸಮಸ್ಯೆಯಿಂದ ಬಳಲುತ್ತಿದ್ದರು, ಅವರ ವೃತ್ತಿಯ ಕನವರಿಕೆ ಅಪಾರವಾದದ್ದು ಎಂದು ಶ್ಲಾಘಿಸಿದರು.

ರಾಜ್ಯದಲ್ಲಿದ್ದ ನೂರಾರು ವೃತ್ತಿ ರಂಗಭೂಮಿಯಲ್ಲಿ ಈಗ ಕೇವಲ 20ರಿಂದ 30 ಉಳಿದಿರುವುದು ವೃತ್ತಿ ರಂಗಭೂಮಿಯ ಅಳಿವಿನ ಸೂಚಕವಾಗಿದೆ. ಅಲ್ಲದೆ, ವೃತ್ತಿ ರಂಗಭೂಮಿಗೆ ನೆರೆ ರಾಜ್ಯಗಳಲ್ಲಿ ಸಿಗುವ ಅನುದಾನಕ್ಕಿಂತ ನಮ್ಮ ರಾಜ್ಯದಲ್ಲಿ ಅಧಿಕ ಅನುದಾನ ಸಿಗುತ್ತಿರುವುದು ಉತ್ತಮ ಬೆಳವಣಿಗೆ ಎಂದರು.

ವಿಶ್ವಜ್ಯೋತಿ ಶ್ರೀ ಪಂಚಾಕ್ಷರಿ ನಾಟ್ಯಸಂಘವು 16 ಸಾವಿರ ನಾಟಕ ಪ್ರದರ್ಶನ ಮಾಡಿದ್ದು, ಜ್ಞಾನಪೀಠ, ನೊಬೆಲ್ ಪ್ರಶಸ್ತಿ ಪಡೆದವರು ಕೂಡ ಇಷ್ಟು ಪ್ರದರ್ಶನ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಎನ್.ಆರ್.ವಿಶುಕುಮಾರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News