×
Ad

ದೇಶ ವಿಭಜಿಸುವವರ ಬಗ್ಗೆ ಜಾಗ್ರತೆ ಅಗತ್ಯ: ಅಝೀಝ್ ದಾರಿಮಿ

Update: 2018-08-16 22:02 IST

ಬೆಂಗಳೂರು, ಆ.16: ದೇಶದಲ್ಲಿ ಜಾತಿ, ಧರ್ಮದ ಹೆಸರಿನಲ್ಲಿ ವಿಭಜಿಸುವವರ ಬಗ್ಗೆ ಸದಾ ಜಾಗ್ರತೆಯಾಗಿದ್ದು, ಅವರ ಷಡ್ಯಂತ್ರಗಳನ್ನು ವಿಫಲಗೊಳಿಸೋಣವೆಂದು ಕರ್ನಾಟಕ ಜಂಯಿಯ್ಯತುಲ್ ಉಲಮಾದ ಮುಶಾವರ ಕಾರ್ಯದರ್ಶಿ ಮೌಲಾನಾ ಅಝೀಝ್ ದಾರಿಮಿ ಹೇಳಿದರು.

ಜಂಯಿಯ್ಯತುಲ್ ಉಲಮಾ ಸಂಘಟನೆಯ ವಿದ್ಯಾರ್ಥಿ ಘಟಕ, ಎಸ್‌ಕೆಎಸ್‌ಎಸ್‌ಎಫ್‌ನ ಬೆಂಗಳೂರು ಘಟಕ 72ನೆ ಸ್ವಾತಂತ್ರೋತ್ಸವ ನಿಮಿತ್ತ ನಗರದಲ್ಲಿ ಹಮ್ಮಿಕೊಂಡಿದ್ದ ಫ್ರೀಡಂ ಸ್ವ್ಕೇರ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಈ ದೇಶದ ಮುಸ್ಲಿಮರು ಸ್ವಾತಂತ್ರಕ್ಕಾಗಿ ತ್ಯಾಗ, ಬಲಿದಾನ ಮಾಡಿದವರನ್ನು ಸದಾ ಗೌರವಿಸುತ್ತದೆ. ರಾಷ್ಟ್ರಗೀತೆ, ಸಂವಿಧಾನದ ಕುರಿತು ಎಂದಿಗೂ ಅಪಸ್ವರ ಎತ್ತಿದವರಲ್ಲ. ಆದರೆ, ಸಂವಿಧಾನವನ್ನು ಒಪ್ಪದ ಕೋಮುವಾದಿಗಳು ಮುಸ್ಲಿಮ್ ಸಮುದಾಯದ ಬಗ್ಗೆ ಅಪಪ್ರಚಾರ ಮಾಡುವುದರಲ್ಲಿ ನಿರತವಾಗಿದೆ. ಹೀಗಾಗಿ ಸ್ವಾತಂತ್ರ ದಿನಾಚರಣೆ ಈ ಸಂದರ್ಭದಲ್ಲಿ ಸಂಘಪರಿವಾರದ ಕಾರ್ಯಕರ್ತರು ದೇಶವನ್ನು ಪ್ರೀತಿಸಲು ಪ್ರಯತ್ನಿಸಲಿ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಎಸ್‌ಕೆಎಸ್‌ಎಸ್‌ಎಫ್ ಅಧ್ಯಕ್ಷ ಮೌಲಾನಾ ಅನೀಸ್ ಕೌಸರಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ನಗರದ ವಿವಿಧ ಇಸ್ಲಾಮಿಕ್ ಶಾಲೆ ಮತ್ತು ಉರ್ದು ಶಾಲಾ ವಿದ್ಯಾರ್ಥಿಗಳಿಂದ ವಿವಿಧ ಸ್ಪರ್ಧೆಗಳನ್ನು ನಡೆಸಿ ವಿಜೇತರಿಗೆ ಬಹುಮಾನ ನೀಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News