×
Ad

ಕಳ್ಳತನ ಪ್ರಕರಣ: ಪದವೀಧರ ಸೇರಿ ನಾಲ್ವರ ಬಂಧನ; 10 ಲಕ್ಷ ರೂ. ಮೌಲ್ಯದ ಮಾಲು ಜಪ್ತಿ

Update: 2018-08-16 22:07 IST

ಬೆಂಗಳೂರು, ಆ.16: ಬೈಕ್ ಕಳವು ಸೇರಿದಂತೆ ವಿವಿಧ ಪ್ರಕರಣಗಳ ಸಂಬಂಧ ಪದವೀಧರ ಸೇರಿ ನಾಲ್ವರನ್ನು ಬಂಧಿಸಿ 10 ಲಕ್ಷ ರೂ.ಮೌಲ್ಯದ 179 ಗ್ರಾಂ ತೂಕದ 7 ಚಿನ್ನದ ಸರ, 6 ಬೈಕ್ ವಶಕ್ಕೆ ಪಡೆಯುವಲ್ಲಿ ನಗರದ ದಕ್ಷಿಣ ವಿಭಾಗದ ಪೊಲೀಸರು ಯಶಸ್ವಿಯಾಗಿದ್ದಾರೆ.

ಜಯನಗರ 1ನೆ ಬ್ಲಾಕ್ ಲಾಲ್‌ಬಾಗ್ ಸಿದ್ದಾಪುರ ನಿವಾಸಿ ದೇವರಾಜ್ (24), ಗುಟ್ಟೆಪಾಳ್ಯ ನಿವಾಸಿ ನವೀನ್ ಕುಮಾರ್ (19), ವಿಲ್ಸನ್ ಗಾರ್ಡನ್ ನಿವಾಸಿ ಅಭಿಷೇಕ್ (21) ಹಾಗೂ ಕಲಾಸಿಪಾಳ್ಯದ ದುರ್ಗಮ್ಮ ಟೆಂಪಲ್ ಸ್ಟ್ರೀಟ್ ನಿವಾಸಿ ಎಂ.ಮುನಿರಾಜ್ (23) ಬಂಧಿತ ಆರೋಪಿಗಳೆಂದು ಡಿಸಿಪಿ ಡಾ.ಎಸ್.ಡಿ.ಶರಣಪ್ಪ ತಿಳಿಸಿದ್ದಾರೆ.

ಆರೋಪಿಗಳ ಬಂಧನದಿಂದ ಒಟ್ಟು 15 ಪ್ರಕರಣಗಳು ಪತ್ತೆಯಾಗಿದ್ದು, 10 ಲಕ್ಷ ರೂ. ಬೆಲೆಬಾಳುವ 179 ಗ್ರಾಂ ತೂಕದ ಚಿನ್ನದ ಸರಗಳು, 6 ದ್ವಿಚಕ್ರ ವಾಹನಗಳು ಮತ್ತು 2 ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಸಿದ್ದಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆಯುತ್ತಿದ್ದ ಸರ ಅಪಹರಣ, ಮೊಬೈಲ್ ಸುಲಿಗೆ ಪ್ರಕರಣಗಳನ್ನು ಪತ್ತೆ ಮಾಡಲು ಎಸಿಪಿ ಎಚ್.ಶ್ರೀನಿವಾಸ್, ಸಿದ್ದಾಪುರ ಪೊಲೀಸ್ ಇನ್ಸ್‌ಪೆಕ್ಟರ್ ಎಂ.ಎಲ್.ಕೃಷ್ಣಮೂರ್ತಿ ನೇತೃತ್ವದಲ್ಲಿ ಒಂದು ತಂಡವನ್ನು ರಚಿಸಿದ್ದರು. ಈ ತಂಡ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿ ಈ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

ಬಂಧಿತರು ಸಿದ್ದಾಪುರ, ಮಡಿವಾಳ, ಕೆಜಿ ನಗರ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ದ್ವಿಚಕ್ರ ವಾಹನ ಕಳವು ಮಾಡಿ, ಸರಗಳ್ಳತನ, ಮೊಬೈಲ್ ಕಳವು ಕೃತ್ಯವೆಸಗುತ್ತಿದ್ದರು. ಇವರ ಬಂಧನದಿಂದ ಸಿದ್ದಾಪುರ ಠಾಣೆಯ 3, ಜಯನಗರದ 2, ಬಸವನಗುಡಿ ಮತ್ತು ಜೆಪಿನಗರ ಠಾಣೆಯ ತಲಾ ಒಂದು ಪ್ರಕರಣ ಸೇರಿ ಒಟ್ಟು 7 ಸರ ಅಪಹರಣ ಪ್ರಕರಣಗಳು ಸೇರಿ ಒಟ್ಟು 15 ಪ್ರಕರಣಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತರಲ್ಲಿ ದೇವರಾಜ್ 8ನೆ ತರಗತಿ ವಿದ್ಯಾಭ್ಯಾಸ ಮಾಡಿ ನಂತರ ಕಳ್ಳತನ ಕೃತ್ಯಕ್ಕೆ ಇಳಿದಿದ್ದಾನೆ. ಬಸವನಗುಡಿ, ಜಯನಗರ, ಜೆಪಿ ನಗರ ಠಾಣಾ ವ್ಯಾಪ್ತಿಗಳಲ್ಲಿ ಸರ ಅಪಹರಣ ಮಾಡಿದ್ದು, 2006ರಲ್ಲಿ ಬಸವನಗುಡಿ ಪೊಲೀಸರು ಕಾರ್ಯಾಚರಣೆ ನಡೆಸಿದಾಗ ತಲೆ ಮರೆಸಿಕೊಂಡಿದ್ದ. ಈ ವೇಳೆ ಆತನ ಸಹಚರ ಅಭಿಷೇಕ್ ಪದವೀಧರನಾಗಿದ್ದು, ರಾಹುಲ್ ಎಂಬಾತ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ ಎಂದು ಎಂದು ಡಿಸಿಪಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News