ಬೆಂಗಳೂರು: ಅನುಮಾನಾಸ್ಪದ ರೀತಿಯಲ್ಲಿ ವಿದ್ಯಾರ್ಥಿ ಮೃತ್ಯು
Update: 2018-08-16 22:08 IST
ಬೆಂಗಳೂರು, ಆ.16: ಅನುಮಾನಾಸ್ಪದ ರೀತಿಯಲ್ಲಿ ವಿದ್ಯಾರ್ಥಿಯೋರ್ವ ಸಾವಿಗೀಡಾಗಿರುವ ಘಟನೆ ನಗರದ ನ್ಯೂ ಆಕ್ಸ್‌ಫರ್ಡ್ ಶಾಲಾ ಆವರಣದಲ್ಲಿ ಗುರುವಾರ ನಡೆದಿದೆ ಎಂದು ವರದಿಯಾಗಿದೆ.
ನಗರದ ಲಕ್ಷ್ಮೀಪುರ ಕಾಲನಿ ನಿವಾಸಿ ಬಸವರಾಜು ಪುತ್ರ ನಿರಂಜನ್(13) ಮೃತ ವಿದ್ಯಾರ್ಥಿ ಎಂದು ಪೊಲೀಸರು ಗುರುತಿಸಿದ್ದಾರೆ.
ಬೆಂಗಳೂರು ಉತ್ತರದ ಮಾದನಾಯಕನಹಳ್ಳಿ ಬಳಿಯಿರುವ ಗಂಗೊಂಡನಹಳ್ಳಿಯ ನ್ಯೂ ಆಕ್ಸ್‌ಫರ್ಡ್ ಶಾಲಾ ಆವರಣದಲ್ಲಿ ಈ ಘಟನೆ ನಡೆದಿದೆ.
ಗುರುವಾರ ಬೆಳಗ್ಗೆಯೇ ಮನೆಕೆಲಸ ಮಾಡಲು ವಿದ್ಯಾರ್ಥಿ ಶಾಲೆಯ ಬಳಿ ತೆರಳಿದ್ದೆನ್ನಲಾಗಿದ್ದು, ಅನುಮಾನಾಸ್ಪದ ರೀತಿಯಲ್ಲಿ ವಿದ್ಯಾರ್ಥಿ ಶವ ಪತ್ತೆಯಾಗಿದೆ ಎಂದು ಹೇಳಲಾಗುತ್ತಿದೆ.