ಗಲ್ಫ್ ಪ್ರಾಂತ್ಯದ ಅತಿದೊಡ್ಡ ಖಾಸಗಿ ವೈದ್ಯಕೀಯ ವಿವಿ - ಗಲ್ಫ್ ಮೆಡಿಕಲ್ ಯುನಿವರ್ಸಿಟಿ

Update: 2018-08-17 07:15 GMT

 ಅತ್ಯಾಧುನಿಕ ತರಬೇತಿ/ಬೋಧನಾ ಸೌಲಭ್ಯಗಳು, ಅಂತರ್ ರಾಷ್ಟ್ರೀಯ ಸಹಭಾಗಿತ್ವ ಮತ್ತು ಪುರಸ್ಕಾರಗಳು, ಸುಸಜ್ಜಿತ ಶೈಕ್ಷಣಿಕ ವ್ಯವಸ್ಥೆ ಮತ್ತು ಹೊಚ್ಚಹೊಸ ಯೋಜನೆಗಳು ಮತ್ತು ಕಾಲೇಜುಗಳು ಗಲ್ಫ್ ಮೆಡಿಕಲ್ ಯುನಿವರ್ಸಿಟಿಗೆ ಆಕರ್ಷಕ ವೈದ್ಯಕೀಯ ಶಿಕ್ಷಣ ತಾಣ ಎಂಬ ಗೌರವವನ್ನು ತಂದುಕೊಟ್ಟಿವೆ.  ಮುಂದಿನ ಶೈಕ್ಷಣಿಕ ವರ್ಷಕ್ಕೆ ಈಗಾಗಲೇ ದೊಡ್ಡ ಸಂಖ್ಯೆಯ ವಿದ್ಯಾರ್ಥಿಗಳಿಂದ ದಾಖಲಾತಿಗಾಗಿ ಅರ್ಜಿಗಳು ಬರುತ್ತಿವೆ. 

ಗಲ್ಫ್ ಮೆಡಿಕಲ್ ಯುನಿವರ್ಸಿಟಿ- ಅಜ್ಮಾನ್, ಇಂದು ಇಡೀ ಗಲ್ಫ್ ಪ್ರದೇಶದಲ್ಲಿ ಅತ್ಯಂತ ಜನಪ್ರಿಯ ವೈದ್ಯಕೀಯ ಶಿಕ್ಷಣ ಕೇಂದ್ರವಾಗಿದೆ.  ಹೊಸ ಶೈಕ್ಷಣಿಕ ಯೋಜನೆಗಳು, ಪ್ರತಿಷ್ಠಿತ ಪ್ರಾದೇಶಿಕ ಹಾಗೂ ಅಂತರ್ ರಾಷ್ಟ್ರೀಯ ಸಹಭಾಗಿತ್ವ, ಜಾಗತಿಕ ಮಟ್ಟದ ಹಲವು ಮಾನ್ಯತೆಗಳು, ಹೆಚ್ಚುತ್ತಿರುವ ವಿದ್ಯಾರ್ಥಿ ಸಂಖ್ಯೆ ಹಾಗೂ ಈ ಪ್ರದೇಶದ ಏಕೈಕ ಸಮಗ್ರ ಖಾಸಗಿ ಆರೋಗ್ಯ ಶಿಕ್ಷಣ ಕೇಂದ್ರವಾಗಿ  ಇಡೀ ಗಲ್ಫ್  ಪ್ರದೇಶದಲ್ಲೇ ಅತಿದೊಡ್ಡ ಖಾಸಗಿ ವೈದ್ಯಕೀಯ ವಿಶ್ವವಿದ್ಯಾನಿಲಯವಾಗಿ ರೂಪುಗೊಂಡಿದೆ. 

-ಪ್ರೊ.ಹೊಸ್ಸಮ್ ಹಮ್ದಿ, ಕುಲಪತಿ, ಗಲ್ಫ್ ಮೆಡಿಕಲ್ ಯುನಿವರ್ಸಿಟಿ)


► ಪದವಿ ಮತ್ತು ಸ್ನಾತಕೋತ್ತರ ಪದವಿ

ಗಲ್ಫ್ ಮೆಡಿಕಲ್ ಯುನಿವರ್ಸಿಟಿ ಎರಡು ಹೊಸ ಕಾಲೇಜುಗಳನ್ನು ಹಾಗೂ ಏಳು ಹೊಸ ಉನ್ನತ ಶಿಕ್ಷಣ ಕೋರ್ಸ್‍ಗಳನ್ನು ಮುಂದಿನ ಅಂದರೆ 2018-19ನೇ ಶೈಕ್ಷಣಿಕ ವರ್ಷದಿಂದ ಆರಂಭಿಸುತ್ತಿದೆ. ಹೊಸದಾಗಿ ಆರಂಭಿಸಿರುವ ಕಾಲೇಜುಗಳಲ್ಲಿ ನರ್ಸಿಂಗ್ ಕಾಲೇಜು ಮತ್ತು ಕಾಲೇಜ್ ಆಫ್ ಹೆಲ್ತ್‍ಕೇರ್ ಮ್ಯಾನೇಜ್‍ಮೆಂಟ್ ಆ್ಯಂಡ್ ಹೆಲ್ತ್ ಎಕನಾಮಿಕ್ಸ್ ಸೇರಿದೆ. ಇದರಿಂದ ಒಟ್ಟು ಕಾಲೇಜುಗಳ ಸಂಖ್ಯೆ 6ಕ್ಕೆ ಹೆಚ್ಚಿದಂತಾಗುತ್ತದೆ. ವಿಶ್ವವಿದ್ಯಾನಿಲಯವು 20 ಮಾನ್ಯತೆ ಪಡೆದ ಕೋರ್ಸ್‍ಗಳನ್ನು ನಡೆಸುತ್ತಿದ್ದು, ನಾಲ್ಕು ಕೋರ್ಸ್‍ಗಳು ಮಾನ್ಯತೆಗಾಗಿ ಕಾಯುತ್ತಿದ್ದು, ಸದ್ಯದಲ್ಲೇ ಮಾನ್ಯತೆ ಪಡೆದ ಕೋರ್ಸ್‍ಗಳ ಸಾಲಿಗೆ ಇವು ಸೇರ್ಪಡೆಯಾಗಲಿವೆ.

ಈ ಕೆಳಕಂಡ ಪದವಿ ಕೋರ್ಸ್‍ಗಳು ಈಗ ಲಭ್ಯ: ಬ್ಯಾಚುಲರ್ ಆಫ್ ಮೆಡಿಸಿನ್ ಆ್ಯಂಡ್ ಬ್ಯಾಚುಲರ್ ಆಫ್ ಸರ್ಜರಿ (ಎಂಬಿಬಿಎಸ್), ಡಾಕ್ಟರ್ ಆಫ್ ಡೆಂಟಲ್ ಮೆಡಿಸಿನ್ (ಡಿಎಂಡಿ), ಡಾಕ್ಟರ್ ಆಫ್ ಫಾರ್ಮಸಿ (ಫಾರ್ಮ್. ಡಿ), ಬ್ಯಾಚುಲರ್ ಆಫ್ ಫಿಸಿಯೊಥೆರಪಿ, ಬ್ಯಾಚುಲರ್ ಆಫ್ ಬಯೋಮೆಡಿಕಲ್ ಸೈನ್ಸಸ್ (ಬಿಬಿಎಂಎಸ್), ಅಸೋಸಿಯೇಟ್ ಡಿಗ್ರಿ ಇನ್ ಪ್ರಿ ಕ್ಲಿನಿಕಲ್ ಸೈನ್ಸಸ್ (ಎಡಿಪಿಸಿಎಸ್) ಮತ್ತು ಅನೆಸ್ತೇಶಿಯಾ ತಂತ್ರಜ್ಞಾನ, ವೈದ್ಯಕೀಯ ಪ್ರಯೋಗಾಲಯ ವಿಜ್ಞಾನ, ಮೆಡಿಕಲ್ ಇಮೇಜಿಂಗ್ ಸೈನ್ಸಸ್ ಮತ್ತು ನರ್ಸಿಂಗ್‍ನಲ್ಲಿ ಬ್ಯಾಚುಲರ್ ಆಫ್ ಸೈನ್ಸ್ ಕೋರ್ಸ್‍ಗಳು.

ಈ  ಸ್ನಾತಕೋತ್ತರ ಪದವಿ ಕೋರ್ಸ್‍ಗಳಿವೆ: ಜಾಯಿಂಟ್ ಮಾಸ್ಟರ್ಸ್ ಇನ್ ಹೆಲ್ತ್ ಪ್ರೊಫೆಷನ್ಸ್ ಎಜ್ಯುಕೇಶನ್ ಮತ್ತು ಎಫ್‍ಎಐಎಂಇಆರ್, ಯುಎಸ್ & ಸೆನ್ ಮೆಡಿಕ್, ಇಂಗ್ಲೆಂಡ್; ಅರಿಝೋನಾ ವಿವಿ ಸಹಯೋಗದೊಂದಿಗೆ ಮಾಸ್ಟರ್ಸ್ ಇನ್ ಪಬ್ಲಿಕ್ ಹೆಲ್ತ್; ಮಾಸ್ಟರ್ ಆಫ್ ಫಿಜಿಕಲ್ ಥೆರಪಿ, ವರ್ಜೀನಿಯಾ ಕಾಮನ್‍ವೆಲ್ತ್ ವಿವಿ, ಅಮೆರಿಕ & ಕ್ಲೈವ್‍ಲೆಂಡ್ ಕ್ಲಿನಿಕ್ ಅಬುಧಾಬಿ ಸಹಯೋಗದಲ್ಲಿ ಮಾಸ್ಟರ್ ಇನ್ ಕ್ಲಿನಿಕಲ್ ಫಾರ್ಮಸಿ (ಕ್ಲಿನಿಕಲ್ ಫಾರ್ಮಸಿಯಲ್ಲಿ ಎಂಪಿಎಚ್‍ಎಆರ್‍ಎಂ), ಮಾಸ್ಟರ್ ಇನ್ ಎನ್ವಿರಾನ್‍ಮೆಂಟಲ್ ಹೆಲ್ತ್ ಆ್ಯಂಡ್ ಟಾಕ್ಸಿಕಾಲಜಿ, ಮಾಸ್ಟರ್ಸ್‍ಇನ್ ಪೆರಿಯೊಡೆಂಟಿಕ್ಸ್ ಮತ್ತು ಮಾಸ್ಟರ್ಸ್ ಇನ್ ಎಂಡೋಡಾಂಟಿಕ್ಸ್.

► ಅಂತರ್ ರಾಷ್ಟ್ರೀಯ ಸಹಭಾಗಿತ್ವ

 ಅರಿಝೋನಾ ವಿವಿ, ವರ್ಜೀನಿಯಾ ಕಾಮನ್‍ವೆಲ್ತ್ ವಿವಿ, ಅಮೆರಿಕದ ಮೆಲ್ವೆಕಿಯಲ್ಲಿನ  ಮೆಡಿಕಲ್ ಕಾಲೇಜ್ ಆಫ್ ವಿಸ್ಕಾನ್‍ಸಿನ್, ಕನೆಕ್ಟಿಕಟ್‍ನಲ್ಲಿರುವ ಯುನಿವರ್ಸಿಟಿ ಆಫ್ ಸೈಂಟ್ ಜೋಸೆಫ್ ಸ್ಕೂಲ್ ಆಫ್  ಫಾರ್ಮಸಿ, ಜರ್ಮನ್ ಹೇಡಲ್‍ಬರ್ಗ್ ಯುನಿವರ್ಸಿಟಿ, ಕೈರೊದಲ್ಲಿರುವ ಅಮೆರಿಕನ್ ಯುನಿವರ್ಸಿಟಿ, ಯುನಿವರ್ಸಿಟಿ ಆಫ್ ಘಾನಾ, ಯುನಿವರ್ಸಿಟಿ ಆಫ್ ಲ್ಯುಬ್ಲಿನ್, ಟೋಕಿಯೊ ಮೆಡಿಕಲ್ ಆ್ಯಂಡ್ ಎಎಂಪಿ, ಡೆಂಟಲ್ ಯುನಿವರ್ಸಿಟಿ ಮತ್ತಿತರ ವಿಶ್ವದ ಹಲವು ಪ್ರತಿಷ್ಠಿತ ವಿಶ್ವವಿದ್ಯಾನಿಲಯಗಳ ಜತೆ ಗಲ್ಫ್ ಮೆಡಿಕಲ್ ಯುನಿವರ್ಸಿಟಿ ಸಹಭಾಗಿತ್ವವನ್ನು ಹೊಂದಿದೆ. ಜತೆಗೆ ಫ್ರಾನ್ಸ್‍ನ ಗುಸ್ತಾವ್ ರೊಸ್ಸಿ ಕ್ಯಾನ್ಸರ್ ಇನ್‍ಸ್ಟಿಟ್ಯೂಟ್‍ನಂಥ ಸಂಶೋಧನಾ ಸಂಸ್ಥೆಗಳ ಜತೆಯೂ ಸಹಭಾಗಿತ್ವ ಹೊಂದಿದೆ.

► ಅತ್ಯಾಧುನಿಕ ಬೋಧನಾ/ ತರಬೇತಿ ತಂತ್ರಜ್ಞಾನಗಳು

ಇತರ ವಿಶ್ವವಿದ್ಯಾನಿಲಯಗಳಿಗಿಂತ ಜಿಎಂಯುವನ್ನು ಭಿನ್ನವಾಗಿಸಿರುವ ಪ್ರಮುಖ ಆಯಾಮವೆಂದರೆ, ಅತ್ಯಾಧುನಿಕ ಬೋಧನಾ ಮತ್ತು ತರಬೇತಿ ತಂತ್ರಜ್ಞಾನವನ್ನು ಅಳವಡಿಸಿರುವುದು. ವಿದ್ಯಾರ್ಥಿಗಳು ಪದವೀಧರರಾಗುವ ವೇಳೆಗೆ ಕೆಲಸದ ಸ್ಥಳಕ್ಕೆ ಸಜ್ಜಾಗುವಂತೆ ಇದು ವಿದ್ಯಾರ್ಥಿಗಳನ್ನು ರೂಪಿಸುತ್ತದೆ. ಬೋಧನೆಯಲ್ಲಿ ಬಳಸುವ ಒಂದು ಅತ್ಯಾಧುನಿಕ ಹಾಗೂ ಪ್ರಮುಖ ತಂತ್ರಜ್ಞಾನವೆಂದರೆ, ವರ್ಚುವಲ್ ಪೇಷೆಂಟ್ ಲರ್ನಿಂಗ್ (ವಿಪಿಎಲ್). ಇದು ಒಂದು ಸಿಮ್ಯುಲೇಶನ್ ಪ್ರೋಗ್ರಾಂ ಆಗಿದ್ದು, ಇದು ವೈದ್ಯಕೀಯ ವಿದ್ಯಾರ್ಥಿಗಳು ರೋಗ ಪತ್ತೆ ಮಾಡಲು, ಚಿಕಿತ್ಸೆ ನೀಡಲು ಮತ್ತು ರೋಗಿಗಳ ಪ್ರಗತಿಯನ್ನು ವೀಕ್ಷಿಸಲು ನೆರವಾಗುವ ಕೃತಕ ಬುದ್ಧಿಮತ್ತೆ ಆಧರಿತ ತಂತ್ರಜ್ಞಾನವಾಗಿದೆ.

► ಶೈಕ್ಷಣಿಕ ಆರೋಗ್ಯ ವ್ಯವಸ್ಥೆ

ಗಲ್ಫ್ ಮೆಡಿಕಲ್ ಯುನಿವರ್ಸಿಟಿ ಅಕಾಡೆಮಿಕ್ ಹೆಲ್ತ್ ಸಿಸ್ಟಮ್ (ಜಿಎಂಯುಎಎಚ್‍ಎಸ್), ಆರೋಗ್ಯ ಸೇವೆ, ವೈದ್ಯಕೀಯ ಶಿಕ್ಷಣ ಹಾಗೂ ಸಂಶೋಧನಾ ಕಾರ್ಯಗಳ ನಡುವೆ ಕೊಂಡಿಯಾಗಿ ಸ್ವತಃ ಸಂಪರ್ಕಿಸುತ್ತದೆ. ತುಂಬೆ ಸಮೂಹ ಸಂಸ್ಥೆಯ ಆರೋಗ್ಯ ವಿಭಾಗ ನಿರ್ವಹಿಸುವ ಜಿಎಂಯುಎಎಚ್‍ಎಸ್ ಅಂಗಸಂಸ್ಥೆಗಳಾದ ತುಂಬೆ ಹಾಸ್ಪಿಟಲ್ಸ್ ಮತ್ತು ತುಂಬೆ ಕ್ಲಿನಿಕ್ಸ್ ಗೆ  ದುಬೈ, ಶಾರ್ಜಾ, ಫುಜೈರಾ, ರಾಸಲ್ ಖೈಮಾ ಮತ್ತು ಉಮ್ಮುಲ್ ಖುವೈನ್‍ನಲ್ಲಿ ಘಟಕಗಳಿವೆ. ಜತೆಗೆ ಹೈದರಾಬಾದ್‍ನಲ್ಲೂ ತುಂಬೆ ಹಾಸ್ಪಿಟಲ್ ಕಾರ್ಯ ನಿರ್ವಹಿಸುತ್ತಿದೆ. ಜಿಎಂಯು ಶೈಕ್ಷಣಿಕ ಆರೋಗ್ಯ ವ್ಯವಸ್ಥೆಗೆ ಇತ್ತೀಚಿನ ಸೇರ್ಪಡೆಯೆಂದರೆ, ತುಂಬೆ ಡೆಂಟಲ್ ಹಾಸ್ಪಿಟಲ್. ಇದು ದೇಶದ ಮೊಟ್ಟಮೊದಲ ಖಾಸಗಿ ದಂತ ಆಸ್ಪತ್ರೆಯಾಗಿದ್ದು, ಇಡೀ ಮಧ್ಯಪ್ರಾಚ್ಯ ಪ್ರವೇಶದಲ್ಲೇ ಖಾಸಗಿ ವಲಯದ ಅತಿದೊಡ್ಡ ಶೈಕ್ಷಣಿಕ ದಂತ ಆಸ್ಪತ್ರೆಯಾಗಿದೆ. ಜತೆಗೆ ತುಂಬೆ ಸಮೂಹದ ಶೈಕ್ಷಣಿಕ ಆಸ್ಪತ್ರೆ ವರ್ಗಕ್ಕೆ ಇತ್ತೀಚಿನ ಸೇರ್ಪಡೆ ಎನಿಸಿದ ತುಂಬೆ ಫಿಜಿಕಲ್ ಥೆರಪಿ ಮತ್ತು ರಿಹ್ಯಾಬಿಲಿಟೇಶನ್ ಹಾಸ್ಪಿಟಲ್, ಫಿಜಿಕಲ್ ಥೆರಪಿ ಮತ್ತು ಪುನರ್ವಸತಿ ಕ್ಷೇತ್ರದ ಅತ್ಯಾಧುನಿಕ ಮತ್ತು ಅತಿದೊಡ್ಡ ಆಸ್ಪತ್ರೆಯಾಗಿದೆ.

► ಸಂಶೋಧನೆ

ಸಂಶೋಧನೆಯು ಜಿಎಂಯುಎಎಚ್‍ಎಸ್‍ನ ಅತ್ಯಂತ ಪ್ರಮುಖ ಹಾಗೂ ಮಹತ್ವದ ಅಂಶವಾಗಿದೆ. ಫ್ರಾನ್ಸ್, ಪೋಲಂಡ್ ಮತ್ತು ಕೊರಿಯಾ ಜತೆ ಅಂತರ್ ರಾಷ್ಟ್ರೀಯ ಸಹಭಾಗಿತ್ವ ಮಾಡಿಕೊಂಡಿರುವ ತುಂಬೆ ರೀಸರ್ಚ್ ಇನ್‍ಸ್ಟಿಟ್ಯೂಟ್ ಫಾರ್ ಪ್ರಿಸಿಶನ್ ಮೆಡಿಸಿನ್, ಕ್ಯಾನ್ಸರ್ ಜೀವಶಾಸ್ತ್ರ ಮತ್ತು ರೋಗನಿರೋಧಕ ಕ್ಷೇತ್ರದ ಸಂಶೋಧನೆಯಲ್ಲಿ ಅಗ್ರಗಣ್ಯ ಸಂಸ್ಥೆಯಾಗಿದೆ. ಯುಎಇ ಮತ್ತು ಜಾಗತಿಕವಾಗಿ ಆರೋಗ್ಯಸೇವೆಯನ್ನು ಸುಧಾರಿಸುವ ನಿಟ್ಟಿನಲ್ಲಿ, ಜಿಎಂಯು ಪ್ರಮುಖ ಮೂರು ಸಂಶೋಧನೆಗಳನ್ನು ಕೈಗೊಂಡಿದೆ. ಅವುಗಳೆಂದರೆ, ಕ್ಯಾನ್ಸರ್ ಇಮ್ಯುನಾಲಜಿ ಮತ್ತು ಎಕ್ಸ್‍ಪರಿಮೆಂಟಲ್ ಆಂಕಾಲಜಿ; ಟ್ಯೂಮರ್ ಅಸ್ಥಿರತೆ ಮತ್ತು ಇಮ್ಯುನೊಜೆನಿಸಿಟಿ ಮತ್ತು ಬಯೋಮಾರ್ಕರ್ಸ್ ಆ್ಯಂಡ್ ಫಂಕ್ಷನಲ್ ಜೆನೋಮಿಕ್ಸ್.

► ಭವಿಷ್ಯದ ವೈದ್ಯಕೀಯ ವಿವಿ

"ಗಲ್ಫ್ ಮೆಡಿಕಲ್ ಯುನಿವರ್ಸಿಟಿ, ಭವಿಷ್ಯದ ವೈದ್ಯಕೀಯ ವಿಶ್ವವಿದ್ಯಾನಿಲಯ" ಎಂದು ಜಿಎಂಯು ಕುಲಪತಿ ಪ್ರೊ. ಹೊಸ್ಸಮ್ ಹಮ್ದಿ ಹೇಳುತ್ತಾರೆ. "ಗಲ್ಫ್ ಮೆಡಿಕಲ್ ಯುನಿವರ್ಸಿಟಿಯ ಪ್ರಮುಖ ಯೋಜನೆಗಳಲ್ಲಿ, ಮೂರು ಬೇರೆ ಬೇರೆ ದೇಶಗಳಲ್ಲಿ ಮೂರು ವೈದ್ಯಕೀಯ ವಿವಿ ಕ್ಯಾಂಪಸ್‍ಗಳನ್ನು ಆರಂಭಿಸುವ ಮೂಲಕ ತನ್ನ ಜಾಗತಿಕ ಹೆಜ್ಜೆ ಗುರುತನ್ನು ಹೆಚ್ಚಿಸುವುದು ಸೇರಿದೆ. ಜಿಎಂಯು 2025ರ ವೇಳೆಗೆ ಸಂಶೋಧನಾ ಆಧರಿತ ವಿಶ್ವವಿದ್ಯಾನಿಲಯವಾಗಿ ರೂಪಾಂತರಗೊಳ್ಳುವ ಮಹತ್ವಾಕಾಂಕ್ಷೆಯನ್ನು ಹೊಂದಿದೆ ಎಂದು ಪ್ರೊ.ಹೊಸ್ಸಮ್ ಹಮ್ದಿ ಹೇಳುತ್ತಾರೆ.

ಜಿಎಂಯು ಪ್ರತಿ ವರ್ಷ ಹೊಸ ದೇಶಗಳ ವಿದ್ಯಾರ್ಥಿಗಳನ್ನು ಆಕರ್ಷಿಸುತ್ತಿದೆ. ಇಂದು ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಸಮೂಹ ಬಲ 2000ವನ್ನು ಮೀರಿದ್ದು, 80 ದೇಶಗಳ ವಿದ್ಯಾರ್ಥಿಗಳು ಇಲ್ಲಿ ಅಧ್ಯಯನ ಕೈಗೊಂಡಿದ್ದಾರೆ. ವಿದ್ಯಾರ್ಥಿ ಬಲ ಪ್ರತಿ ವರ್ಷ ಹೆಚ್ಚುತ್ತಲೇ ಇದೆ. ಸುಸಂಘಟಿತವಾದ ಹಳೆವಿದ್ಯಾರ್ಥಿ ಜಾಲವು, ವಿಶ್ವಾದ್ಯಂತ ವೈದ್ಯಕೀಯ ಮತ್ತು ಆರೋಗ್ಯ ಸೇವಾ ವೃತ್ತಿಯನ್ನು ಯಶಸ್ವಿಯಾಗಿ ನಿರ್ವಹಿಸಿಕೊಂಡು ಬರುವ ವೃತ್ತಿಪರರಿಂದ ಕೂಡಿದೆ. ಇದಕ್ಕಿಂತ ಹೆಚ್ಚಾಗಿ ಸಂಸ್ಥೆಗೆ ದೊರಕುತ್ತಿರುವ ಪ್ರಾದೇಶಿಕ ಹಾಗೂ ಅಂತರ್ ರಾಷ್ಟ್ರೀಯ ಮನ್ನಣೆಗಳು ಗಲ್ಫ್ ಮೆಡಿಕಲ್ ಯುನಿವರ್ಸಿಟಿಯ ಘನತೆಯ ಪ್ರತೀಕವಾಗಿವೆ.

2017ರಲ್ಲಿ ಜಿಎಂಯು, ಮಧ್ಯಪ್ರಾಚ್ಯದ ಅಗ್ರಗಣ್ಯ 50 ವೈದ್ಯಕೀಯ ವಿಶ್ವವಿದ್ಯಾನಿಲಯಗಳ ಪೈಕಿ ಸ್ಥಾನ ಪಡೆದಿದೆ. ಪ್ರತಿಷ್ಠಿತ ಶೇಖ್ ಖಲೀಫಾ ಎಕ್ಸೆಲೆನ್ಸ್ ಅವಾರ್ಡ್ಸ್-2018ರಲ್ಲಿ ಚಿನ್ನದ ಪದಕ ಗೆದ್ದಿದೆ. ವಾರ್ಟನ್ ಕ್ಯೂಎಸ್ ಸ್ಟಾರ್ಸ್ ರಿಇಮೇಜಿನ್ ಎಜ್ಯುಕೇಶನ್ ಕಾನ್ಫರೆನ್ಸ್ ಆ್ಯಂಡ್ ಅವಾರ್ಡ್ಸ್- 2018ರಲ್ಲಿ ಪ್ರಾದೇಶಿಕ ಹಾಗೂ ಜಾಗತಿಕವಾಗಿ ಕೂಡಾ ಜಿಎಂಯು ಇ- ಕಲಿಕೆಯಲ್ಲಿ ಅಗ್ರಸ್ಥಾನ ಗಳಿಸಿದೆ. ಇದರ ಜತೆಗೆ ಕ್ಯೂಎಸ್‍ನ ಬೋಧನೆ ಮತ್ತು ಸಮುದಾಯ ತೊಡಗಿಸಿಕೊಳ್ಳುವಿಕೆಯಲ್ಲಿ  ಐದು ಸ್ಟಾರ್ ಗಳಿಸಿದೆ. ಇದರ ಜತೆಗೆ ವಿಶ್ವವಿದ್ಯಾನಿಲಯವು ಪ್ರತಿಷ್ಠಿತ ದುಬೈ ಕ್ವಾಲಿಟಿ ಅಪ್ರಿಸಿಯೇಶನ್ ಪ್ರಶಸ್ತಿಯನ್ನು 2017ನೇ ಮೌಲ್ಯಮಾಪನ ವರ್ಷಕ್ಕೆ ಪಡೆದಿದೆ.

ಹೊಸ ಅಭಿವೃದ್ಧಿಗಳೊಂದಿಗೆ, ಗಲ್ಫ್ ವೈದ್ಯಕೀಯ ವಿಶ್ವವಿದ್ಯಾನಿಲಯವು ವಿದ್ಯಾರ್ಥಿಗಳ ಪ್ರವೇಶಕ್ಕೆ ಅಭೂತಪೂರ್ವ ಬೇಡಿಕೆಯನ್ನು ಕಾಣುತ್ತಿದೆ. ಭವಿಷ್ಯದ ವೈದ್ಯಕೀಯ ಶಿಕ್ಷಣವನ್ನು ಪಡೆಯುವ ಆಕಾಂಕ್ಷೆಯೊಂದಿಗೆ ವಿಶ್ವದ ವಿವಿಧೆಡೆಗಳಿಂದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಆಕರ್ಷಿಸುತ್ತಿದೆ. ಜಿಎಂಯು ವಿಶ್ವವಿದ್ಯಾನಿಲಯ ಇತ್ತೀಚೆಗೆ ಹೊಸ ಶೈಕ್ಷಣಿಕ ವರ್ಷಕ್ಕೆ ಪ್ರವೇಶವನ್ನು ಘೋಷಿಸಿದ ತಕ್ಷಣ, ಪ್ರವೇಶಾತಿ ವಿಭಾಗವು ದೊಡ್ಡ ಸಂಖ್ಯೆಯ ಅರ್ಜಿಗಳನ್ನು ಸ್ವೀಕರಿಸುತ್ತಿದೆ. 2018-19ನೇ ವರ್ಷಕ್ಕೆ ಪ್ರವೇಶಗಳು ಅಂತಿಮ ಹಂತದಲ್ಲಿದ್ದು, ಪ್ರವೇಶಾಕಾಂಕ್ಷಿಗಳ ಪೈಕಿ ಆಯ್ಕೆ ಮಾಡಿ ಪಟ್ಟಿ ಸಿದ್ಧಪಡಿಸುವ ಹಾಗೂ ಸಂದರ್ಶನ ನಡೆಸುವ ಪ್ರಕ್ರಿಯೆ ನಡೆಯುತ್ತಿದೆ.


* ಪ್ರಾಯೋಜಿತ ಲೇಖನ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News