×
Ad

ರಾಜ್ಯ ಉರ್ದು ಅಕಾಡೆಮಿ ಅಧ್ಯಕ್ಷರಾಗಿ ಮುಬೀನ್ ಮುನಾವರ್ ನೇಮಕ

Update: 2018-08-17 23:06 IST

ಬೆಂಗಳೂರು, ಆ.17: ಉರ್ದು ಭಾಷೆಗೆ ಸಲ್ಲಿಸಿರುವ ಸೇವೆ ಮತ್ತು ಬದ್ಧತೆಯನ್ನು ಮಾನದಂಡವನ್ನಾಗಿ ಆಧರಿಸಿ ರಾಜ್ಯ ಉರ್ದು ಅಕಾಡೆಮಿಯು ಈ ಕೆಳಕಂಡ ಅಧ್ಯಕ್ಷರು, ಸದಸ್ಯರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ನಾಮನಿರ್ದೇಶಿಸಿ ಅಧಿಸೂಚನೆ ಹೊರಡಿಸಿದೆ.

ಅಧ್ಯಕ್ಷರಾಗಿ ಮುಬೀನ್ ಮುನಾವರ್, ಸದಸ್ಯರಾಗಿ ಡಾ.ಮುಹ್ಮಮದ್ ಇಕ್ಬಾಲ್ ಅಹಮದ್, ರಾಜಶೇಖರ ಹಸ್ರತ್, ಡಾ.ಸೈಯದ್ ನಿಜಾಮುದ್ದೀನ್ ಬುರಾಬುರಿ, ಶಫೀಕ್ ಅಬಿದಿ ಅಲಿಪುರ್, ಡಾ.ಮುಹಮ್ಮದ್ ಶಾಹಿದ್ ಖಾಜಿ, ಮುಸ್ತಾಕ್ ಸಯೀದ್, ಮುನೀರ್ ಅಹ್ಮದ್ ಅಜಾದ್, ಶೇಖ್ ಫಯಾಜುದ್ದೀನ್, ಸೈಯದ್ ಯೂಸಫ್ ಅಲಿ ನಾತಿಕ್, ಸೈಯದ್ ಅಸ್ಗರ್, ಅಧಿಕಾರಿ ವೃಂದದ ಸದಸ್ಯರ ವಿಭಾಗದಲ್ಲಿ ಸದಸ್ಯ ಕಾರ್ಯದರ್ಶಿಯಾಗಿ ನಿಬಂಧಕರು, ಕರ್ನಾಟಕ ರಾಜ್ಯ ಉರ್ದು ಅಕಾಡಮಿ, ಬೆಂಗಳೂರು ಹಾಗೂ ಆರ್ಥಿಕ ಸದಸ್ಯರು, ಸರಕಾರದ ಅಧೀನ ಕಾರ್ಯದರ್ಶಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಬೆಂಗಳೂರು ಇವರನ್ನು ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ ನೇಮಕ ಮಾಡಿ ಆದೇಶಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News