×
Ad

ಮಳೆಹಾನಿ: ಸಂತ್ರಸ್ತರ ನೆರವಿಗೆ ಧಾವಿಸಿದ ಬಿಬಿಎಂಪಿ

Update: 2018-08-17 23:17 IST

ಬೆಂಗಳೂರು,ಆ.17: ಬಿಬಿಎಂಪಿಯ ಮಹಾಪೌರರು ಹಾಗೂ ಆಯುಕ್ತರು ರಾಜ್ಯದಲ್ಲಿನ ಕೊಡಗು, ದಕ್ಷಿಣ ಕನ್ನಡ, ಮತ್ತಿತರೆ ಕಡೆಗಳಲ್ಲಿ ಆಗುತ್ತಿರುವ ಅತಿವೃಷ್ಟಿ ಹಾಗೂ ಮಳೆಯಿಂದ ಆದ ಅನಾಹುತಗಳಿಗೆ ತುರ್ತು ನೆರವಾಗಲು ಮುಂದಾಗಿದ್ದಾರೆ.

ಪಾಲಿಕೆ ಸದಸ್ಯರ ಒಂದು ತಿಂಗಳ ವೇತನದ ಮೊತ್ತ ಹಾಗೂ ಬಿಬಿಎಂಪಿಯ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಒಂದು ದಿನದ ಮೊತ್ತದ ಹಣವನ್ನು (ಒಟ್ಟು ಅಂದಾಜು ಮೊತ್ತ ರೂ.1ಕೋಟಿ 25 ಲಕ್ಷ) ತುರ್ತು ಕಾರ್ಯದ ನೆರವಿಗಾಗಿ ನೀಡಲಾಗುವುದೆಂದು ತಿಳಿಸಿದ್ದಾರೆ.

ಅಲ್ಲದೇ, ಸದರಿ ವಿಷಯದ ಹೆಚ್ಚಿನ ನೆರವು ಸಂಬಂದಿಸಿದಂತೆ ಮಹಾಪೌರರು ಮಾಧ್ಯಮ ಗೋಷ್ಟಿಯನ್ನು ಆ.18 ರಂದು ಬೆಳಗ್ಗೆ 11-30 ಕ್ಕೆ ಕೇಂದ್ರ ಕಚೇರಿಯ ಸಭಾಂಗಣ-1 ರಲ್ಲಿ ಕರೆದಿದ್ದಾರೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News