ಬೆಂಗಳೂರು: ಮರಗಳ ರಕ್ಷಣೆಗೆ ನಿಂತ ಮಕ್ಕಳು-ಹಿರಿಯರ ಪಡೆ

Update: 2018-08-17 18:10 GMT

ಬೆಂಗಳೂರು, ಆ.17: ಕರ್ನಾಟಕ ಆಡಳಿತ ನ್ಯಾಯ ಮಂಡಳಿ ಆವರಣದ ಮರಗಳಿಗೆ ಕೊಡಲಿ ಪೆಟ್ಟು ಬೀಳಲಿದೆಯಾ ಎಂಬ ಪ್ರಶ್ನೆ ಕಾಡುತ್ತಿದೆ. ಯಾಕೆಂದರೆ, ಕರ್ನಾಟಕ ಆಡಳಿತ ನ್ಯಾಯ ಮಂಡಳಿ ಆವರಣದ ಮರಗಳನ್ನು ಕಡಿಯಲು ಬಿಬಿಎಂಪಿ ಪ್ಲಾನ್ ಮಾಡಿದೆ ಎನ್ನಲಾಗುತ್ತಿದೆ. ಈಗಾಗಲೇ ಕರ್ನಾಟಕ ಆಡಳಿತ ನ್ಯಾಯ ಮಂಡಳಿಗೆ ಬೀಗ ಹಾಕಲಾಗಿದ್ದು, ಅಲ್ಲಿನ ಮರ ಕಡಿದು ಕಾಂಪ್ಲೆಕ್ಸ್ ಕಟ್ಟಲು ಬಿಬಿಎಂಪಿ ತಯಾರಿ ನಡೆಸುತ್ತಿದೆ ಎಂದು ಹೇಳಲಾಗುತ್ತಿದೆ. 

ಹೀಗಾಗಿ, ಇಂದು ಸೇವ್ ಟ್ರೀ, ಸೇವ್ ಬೆಂಗಳೂರು ಇವರಿಂದ ಕರ್ನಾಟಕ ಆಡಳಿತ ನ್ಯಾಯ ಮಂಡಳಿ ಆವರಣದಲ್ಲಿ ಮರಗಳ ರಕ್ಷಣಾ ಅಭಿಯಾನ ನಡೆಯಿತು. ಇಂದಿರಾನಗರದ ಬಿಡಿಎ ಕಾಂಪ್ಲೆಕ್ಸ್ ಬಳಿಯ ಕರ್ನಾಟಕ ಆಡಳಿತ ನ್ಯಾಯ ಮಂಡಳಿ ಇದ್ದು, ಮರ ಕಡಿಯಲು ಹಿರಿಯ ನಾಗರಿಕರು ಹಾಗೂ ಸೇವ್ ಟ್ರೀ, ಸೇವ್ ಬೆಂಗಳೂರು ಸದಸ್ಯರಿಂದ ವಿರೋಧ ವ್ಯಕ್ತವಾಗಿದೆ. ಮರಗಳ ಅಳತೆ ಮಾಡಿ ಡೇಟಾ ಸಂಗ್ರಹ ಮಾಡಲಾಯಿತು. ಮರಗಳನ್ನ ಹಿರಿಯ ನಾಗರಿಕರು ಹಾಗೂ ಮಕ್ಕಳು ಅಪ್ಪಿಕೊಂಡು ಆಕ್ರೋಶ ಹೊರಹಾಕಿದರು. ಯಾವುದೇ ಕಾರಣಕ್ಕೂ ಇಲ್ಲಿನ ಮರಗಳ ಮಾರಣಹೋಮಕ್ಕೆ ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News