ಉಮರ್ ಖಾಲಿದ್ ಹತ್ಯೆಗೆ ಯತ್ನಿಸಿದ್ದು ನಾವೇ ಎಂದಿದ್ದ ಇಬ್ಬರ ಬಂಧನ

Update: 2018-08-20 08:14 GMT

ಹೊಸದಿಲ್ಲಿ, ಆ.20: ಜೆಎನ್‍ ಯು ವಿದ್ಯಾರ್ಥಿ ಉಮರ್ ಖಾಲಿದ್ ರನ್ನು ಕೊಲೆಗೈಯಲು ವಿಫಲ ಯತ್ನ ನಡೆಸಿದ್ದು ನಾವೇ ಎಂದು ಒಪ್ಪಿಕೊಂಡಿದ್ದ ಇಬ್ಬರನ್ನು ದಿಲ್ಲಿ ಪೊಲೀಸರ ವಿಶೇಷ ತಂಡ ಬಂಧಿಸಿದೆ.

ಬಂಧಿತರು ತಪ್ಪೊಪ್ಪಿಕೊಳ್ಳುತ್ತಿರುವ ವೀಡಿಯೊವನ್ನು ಸಾಮಾಜಿಕ ಮಾಧ್ಯಮಕ್ಕೆ ಪೋಸ್ಟ್ ಮಾಡಿದ್ದರು. ಇಬ್ಬರೂ ಹರಿಯಾಣದವರಾಗಿದ್ದು, ದಾಳಿಯಲ್ಲಿ ನೇರ ಭಾಗಿಯಾಗಿದ್ದಾರೆಯೇ ಮತ್ತು ಉಮರ್ ಹತ್ಯೆಗೆ ಪ್ರೇರಣೆ ಏನು ಎಂಬ ಕುರಿತು ತನಿಖೆ ನಡೆಯಲಿದೆ. ಆದರೆ ಇಬ್ಬರ ಹೆಸರು ಮತ್ತು ವಿವರಗಳನ್ನು ಪೊಲೀಸರು ಬಹಿರಂಗಗೊಳಿಸಿಲ್ಲ.

ದಿಲ್ಲಿಯ ಕಾನ್ ಸ್ಟಿಟ್ಯೂಶನ್ ಕ್ಲಬ್ ಆಫ್ ಇಂಡಿಯದ ಮುಂದೆ ಉಮರ್ ಖಾಲಿದ್ ರ ಕೊಲೆಗೆ ಯತ್ನ ನಡೆದಿತ್ತು. ಬಂದೂಕಿನಿಂದ ಖಾಲಿದ್‍ ಗೆ ಗುಂಡು ಹಾರಿಸಲಾಗಿತ್ತು. ಆದರೆ ಯಾವುದೆ ಗಾಯಗಳಿಲ್ಲದೆ ಘಟನೆಯಲ್ಲಿ ಉಮರ್ ಖಾಲಿದ್ ಪಾರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News