ಟಿಕೆಟ್ ರಹಿತ ಪ್ರಯಾಣ: ಬಿಎಂಟಿಸಿ ಪ್ರಯಾಣಿಕರಿಂದ 10 ಲಕ್ಷ ರೂ.ದಂಡ ವಸೂಲಿ

Update: 2018-08-20 15:05 GMT

ಬೆಂಗಳೂರು, ಆ. 20: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಧೆ(ಬಿಎಂಟಿಸಿ) ವಾಹನಗಳಲ್ಲಿ ಟಿಕೆಟ್ ರಹಿತ ಪ್ರಯಾಣ ಮಾಡುತ್ತಿದ್ದ 6435 ಮಂದಿ ಪ್ರಯಾಣಿಕರಿಂದ ಒಟ್ಟು 10.25 ಲಕ್ಷ ರೂ. ದಂಡ ವಸೂಲಿ ಮಾಡಲಾಗಿದೆ.

ಸಂಸ್ಥೆಯ ತನಿಖಾ ತಂಡಗಳು ಜುಲೈನಲ್ಲಿ ಒಟ್ಟು 23 ಸಾವಿರ ಟ್ರಿಪ್‌ಗಳನ್ನು ತಪಾಸಣೆ ನಡೆಸಿ 6435 ಟಿಕೆಟ್ ರಹಿತ ಪ್ರಯಾಣಿಕರನ್ನು ಪತ್ತೆಹಚ್ಚಿ ಅವರಿಂದ ಒಟ್ಟು 10,25,240 ರೂ.ದಂಡ ವಸೂಲಿ ಮಾಡಿ ಸಂಸ್ಧೆಯ ನಿರ್ವಾಹಕರುಗಳ ಮೇಲೆ 2555 ಪ್ರಕರಣಗಳನ್ನು ದಾಖಲಿಸಲಾಗಿದೆ.

ಮಹಿಳಾ ಆಸನದಲ್ಲಿ ಕೂತು ಪ್ರಯಾಣ: ಮಹಿಳಾ ಪ್ರಯಾಣಿಕರಿಗೆಂದೆ ಮೀಸಲಾಗಿರುವ ಆಸನಗಳಲ್ಲಿ ಕುಳಿತು ಪ್ರಯಾಣಿಸಿರುವ 617 ಪುರುಷರಿಂದ ಒಟ್ಟು 61,700 ರೂ.ದಂಡ ವಸೂಲಿ ಮಾಡಲಾಗಿದೆ ಎಂದು ಬಿಎಂಟಿಸಿ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News